ಗದಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕ್ವಿಟ್ ಇಂಡಿಯಾ ಚಳುವಳಿ ಕಾರ್ಯಕ್ರಮ ಆಚರಣೆ ಹಾಗೂ ಯುವ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಇಂದು
ಗದಗ 08: ಭಾರತದ ಸ್ವಾತಂತ್ರö್ಯ ಸಂಗ್ರಾಮದ ಹೋರಾಟದ ಆದಿಯಲ್ಲಿ “ಬ್ರಿಟಿಷರೆ ಭಾರತ ಬಿಟ್ಟು ತೊಲಗಿ” ಅಥವಾ “ಕ್ವಿಟ್ ಇಂಡಿಯಾ ಚಳುವಳಿ” ಮಹತ್ವದ ಘಟ್ಟ. 1942ರ ಅಗಷ್ಟ್ 9ರಂದು ಪ್ರಾರಂಭವಾದ ಈ ಚಳುವಳಿಗೆ ಈಗ 79ನೇ ವರ್ಷ, ಈ ಸಂದರ್ಭದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ತಿರ್ಮಾನಿಸಿದ್ದು, ದಿನಾಂಕ:09.08.2021 ರಂದು ಸೋಮವಾರ ಮುಂಜಾನೆ 11.00 ಗಂಟೆಗೆ ಗದಗ ಜಿಲ್ಲಾ ಕಾಂಗ್ರೆಸ ಕಾರ್ಯಾಲಯದಲ್ಲಿ ಗದಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಆಚರಿಸಲಾಗುವುದು.
ಅಲ್ಲದೇ, ಇಂದಿಗೆ (ದಿನಾಂಕ: 09.08.2021) ಸರಿಯಾಗಿ ಸುಮಾರು 60 ವರ್ಷಗಳ ಹಿಂದೆ (09.08.1960) ಉಕ್ಕಿನ ಮಹಿಳೆ ದಿ.ಶ್ರೀಮತಿ ಇಂದಿರಾಗಾAಧಿಯವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಬಹುಮುಖ್ಯ ಮುಂಚೂಣಿ ಘಟಕವಾಗಿ ಭಾರತೀಯ ಯುವಕಾಂಗ್ರೆಸ್ ಘಟಕವನ್ನು ಸ್ಥಾಪಿಸಿದರು. ಈ ಮೂಲಕ ಯುವಪೀಳಿಗೆಯಲ್ಲಿ ಸಾಮಾಜಿಕ ಚಿಂತನೆ, ಸಾಮಾಜಿಕ ಕಾಳಜಿ, ರಾಜಕೀಯ ಸೇವೆ, ದೇಶಸೇವೆಯ ಗುಣಗಳು ಬೆಳೆಯಲು ಕಾರಣರಾದರು. ಹೀಗಾಗಿ ಇದೇ ಸಂದರ್ಭದಲ್ಲಿ ಭಾರತೀಯ ಯುವಕಾಂಗ್ರೆಸ್ ಘಟಕದ 61ನೇ ಸಂಸ್ಥಾಪನಾ ದಿನ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಶಾಸಕರಾದ ಡಾ.ಎಚ್.ಕೆ. ಪಾಟೀಲ ಅವರು ಭಾಗವಹಿಸಲಿದ್ದಾರೆ ಆದಕಾರಣ ಈ ಕಾರ್ಯಕ್ರಮಕ್ಕೆ ಯಾವತ್ತು ಹಾಲಿ ಹಾಗೂ ಮಾಜಿ ಶಾಸಕರು, ಕಾಂಗ್ರೆಸ್ ಪಕ್ಷದ ಜಿಲ್ಲಾ ಪದಾಧಿಕಾರಿಗಳು, ಬ್ಲಾಕ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು, ಪಕ್ಷದ ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ, ಗ್ರಾಮ ಪಂಚಾಯತ, ಹಾಗೂ ನಗರಸಭೆ, ಪಟ್ಟಣ ಪಂಚಾಯತ, ಪುರಸಭೆ ಅಧ್ಯಕ್ಷರುಗಳು, ಹಾಗೂ ಸದಸ್ಯರುಗಳು, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್, ಕಾಂಗ್ರೆಸ್ ಸೇವಾದಳ, ಎಸ್‌ಸಿ/ಎಸ್‌ಟಿ, ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳು ಹಾಗೂ ಅಧ್ಯಕ್ಷರುಗಳು, ರಾಜೀವಗಾಂಧಿ ಪಂಚಾಯತ ರಾಜ್ ಸಂಘಟನೆ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಗುರಣ್ಣ ಬಳಗಾನೂರ ಹಗೂ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಶೋಕ ಮಂದಾಲಿಯವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.