ಕರ್ನಾಟಕ ರಾಜ್ಯ ಸರ್ಕಾರದ ಮಂತ್ರಿಮಂಡಲದ ಕೃಷಿ ಸಚಿವರಾದ ಬಿ ಸಿ ಪಾಟೀಲ್ ಅವರನ್ನು ಇಂದು ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರುರವರು ಕೃಷಿ ಸಚಿವರನ್ನು ಭೇಟಿಯಾಗಿ ಪುಷ್ಪಗುಚ್ಛ ಕೊಡುವುದರ ಮೂಲಕ ಅಭಿನಂದನೆ ಸಲ್ಲಿಸಿದರು .
ನಂತರ ಡಿ ಜಿ ಶಾಂತನಗೌಡರವರು ಮತ್ತು ಕೃಷಿ ಸಚಿವರಾದ ಬಿ ಸಿ ಪಾಟೀಲ್ ಅವರ ಜೊತೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ರೈತರ ಸಮಸ್ಯೆಗಳ ಬಗ್ಗೆ ಹಾಗೂ ಸರ್ಕಾರದಿಂದ ರೈತರಿಗೆ ಸಿಗುವ ಸವಲತ್ತುಗಳು ನಿಮ್ಮ ಅವಧಿಯಲ್ಲಿ ತಕ್ಷಣವೇ ತಲುಪುವಂತಾಗಬೇಕು ಎಂದು ಅವರುಗಳಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕೃಷಿ ಸಚಿವರಾದ ಬಿಸಿ ಪಾಟೀಲ್ ಮಾಜಿ ಶಾಸಕರಾದ ಡಿ ಜಿ ಶಾಂತನ ಗೌಡ್ರು ಮತ್ತು ಮಾಧುರಿ ಬಸ ಮಾಲೀಕರಾದ ಗಿರೀಶ್ ಹಾಗೂ ಚಾಲಕರಾದ ಸತೀಶ ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *