ಆಹ್ವಾನ

ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ
ಅಧಿಕಾರಿಗಳ ಕಛೇರಿ ವತಿಯಿಂದ ವಿಕಲಚೇತನರ ಪುನರ್ವಸತಿ
ಯೋಜನೆಯಡಿ ವಿವಿಧ ಸೌಲಭ್ಯಗಳಿಗೆ ಅರ್ಹ ವಿಕಲಚೇತನರಿಂದ
ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹಧನ, ಸಾಧನ
ಸಲಕರಣೆ, ಶುಲ್ಕ ಮರುಪಾವತಿ, ವಿವಾಹಿತ ಅಂಧ ಮಹಿಳೆಗೆ
ಜನಿಸುವ ಮಕ್ಕಳಿಗೆ ಶಿಶು ಪಾಲನಾಭತ್ಯೆ, ವಿವಾಹ
ಪ್ರೋತ್ಸಾಹಧನ, ಯಂತ್ರಚಾಲಿತ ವಾಹನ, ಎಸ್.ಎಸ್.ಎಲ್.ಸಿ. ಹಾಗೂ
ನಂತರದ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ
ದೃಷ್ಠಿದೋಷವುಳ್ಳ ವಿಕಲಚೇತನರಿಗೆ ಟಾಕಿಂಗ್ ಲ್ಯಾಪ್‍ಟಾಪ್
ಮತ್ತು ಬ್ರೈಲ್‍ಕಿಟ್, ಸ್ವಯಂ ಉದ್ಯೋಗ, ವೈದ್ಯಕೀಯ
ಪರಿಹಾರನಿಧಿ ಯೋಜನೆಗಳಿಗೆ ಅರ್ಹ ವಿಕಲಚೇತನರಿಂದ ಅರ್ಜಿ
ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಕಲಚೇತನರು ಕಡ್ಡಾಯವಾಗಿ
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಹೊಂದಿದ್ದು
ಆಧಾರಕಾರ್ಡ್ ಲಿಂಕ್ ಮಾಡಿಸಿರುವ ಉಳಿತಾಯ ಖಾತೆ ಪುಸ್ತಕದ
ಪ್ರತಿ ಹಾಗೂ ಅಂಗವಿಕಲರ ಗುರುತಿನ ಕಾರ್ಡ್ ಜೆರಾಕ್ಸ್
(ಯು.ಡಿ.ಐ.ಡಿ. ಕಾರ್ಡ್), ಇತ್ತೀಚಿನ ಜಾತಿ ಮತ್ತು ಆದಾಯ
ಪ್ರಮಾಣಪತ್ರ, ಆಧಾರ ಕಾರ್ಡ್ ಹಾಗೂ ಇತ್ತೀಚಿನ
ಭಾವಚಿತ್ರದೊಂದಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಆ.31 ಕೊನೆಯ ದಿನವಾಗಿದ್ದು, ಅರ್ಜಿ
ನಮೂನೆಯನ್ನು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ
ನಾಗರಿಕರ ಸಬಲೀಕರಣ ಅಧಿಕಾರಿಗಳ ಕಛೇರಿಯಲ್ಲಿ
ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಸಹಾಯವಾಣಿ
ಮತ್ತು ಮಾಹಿತಿ ಸಲಹಾ ಕೇಂದ್ರದ ದೂರವಾಣಿ 08192-263939
ಹಾಗೂ ತಾಲ್ಲೂಕಿನ ವಿವಿಧೋದ್ದೇಶ ಪುನರ್ವಸತಿ
ಕಾರ್ಯಕರ್ತರಾದ ಬಿ. ಚನ್ನಪ್ಪ- 9590829024, ಗಂಗಾಧರ-
9844955315, ಶೈಲಜಾ ಕೆ.ಎಂ.-9886366809, ಸುಬ್ರಮಣ್ಯ ಕೆ.-
9945738141, ಶಿವನಗೌಡ ಎಂ.ಕೆ.-9902105734 ಅವರನ್ನು
ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ
ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ವಿ. ಮಠದ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *