ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ 2021-22ನೇ
ಸಾಲಿನ ಉದ್ಯೋಗಿನಿ ಯೋಜನೆಯಡಿ ಮಹಿಳೆಯರು
ಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು
ಬ್ಯಾಂಕ್‍ಗಳ ಸಹಯೋಗದೊಂದಿಗೆ ಸಾಲ ಸೌಲಭ್ಯ ಹಾಗೂ
ನಿಗದಮದಿಂದ ಸಹಾಯಧನ ನೀಡುವ ಯೋಜನೆಗಾಗಿ ಅರ್ಹ
ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಜಿಲ್ಲೆಗೆ
ಒಟ್ಟು ಭೌತಿಕ 42 ಗುರಿಯನ್ನು ನಿಗದಿಪಡಿಸಲಾಗಿರುತ್ತದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆಯಡಿ
ಬಳಕೆಯಾಗದ ಅನುದಾನದಡಿ ಪರಿಶಿಷ್ಟ ಜಾತಿಯ 10, ಪರಿಶಿಷ್ಟ
ಪಂಗಡದ 07 ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಗುರಿ
ನಿಗದಿಪಡಿಸಿದ್ದು, ಅರ್ಹ ಮಹಿಳೆಯರಿಂದ ಅರ್ಜಿಗಳನ್ನು
ಆಹ್ವಾನಿಸಲಾಗಿರುತ್ತದೆ.
  ಅರ್ಜಿ ಸಲ್ಲಿಸಲು 18 ರಿಂದ 55 ವರ್ಷದ ಮಹಿಳೆಯರಿಗೆ
ಅವಕಾಶವಿರುತ್ತದೆ.  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ
ಪಂಗಡದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ.2
ಲಕ್ಷ ಮೀರಿರಬಾರದು. ಇತರೆ ವರ್ಗದವರಿಗೆ ಆದಾಯ ರೂ. 1.50
ಲಕ್ಷ ಮೀರಿರಬಾರದು.  ಈ ಹಿಂದೆ ಬೇರೆ ಇಲಾಖೆಗಳಲ್ಲಿ
ಯಾವುದೇ ಯೋಜನೆಗಳಡಿಯಲ್ಲೂ ಸಾಲ ಸೌಲಭ್ಯ
ಪಡೆದಿರಬಾರದು. ಇಡಿಪಿ ತರಬೇತಿಯು ಕಡ್ಡಾಯವಾಗಿದ್ದು, ಸಾಲ
ಮಂಜೂರಾದ ಫಲಾನುಭವಿಗಳಿಗೆ ಇಡಿಪಿ ತರಬೇತಿ ಪಡೆದ
ನಂತರವೇ ಸಹಾಯಧನ ಬಿಡುಗಡೆ
ಮಾಡಲಾಗುವುದು. ಸಾಲದ ಮೊತ್ತ , ಯೋಜನಾ ಘಟಕ ವೆಚ್ಚ
ಕನಿಷ್ಠ ರೂ.1 ಲಕ್ಷ ಗರಿಷ್ಠ ರೂ.3 ಲಕ್ಷ
ಗಳಾಗಿರಬೇಕು. ಇತರೆ ವರ್ಗದ ಮಹಿಳೆಯರಿಗೆ ಘಟಕ
ವೆಚ್ಚದ ಶೇಕಡ 30 ರಷ್ಟು ಗರಿಷ್ಠ ರೂ. 90 ಸಾವಿರ  ಹಾಗೂ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಹಿಳೆಯರಿಗೆ ಶೇಕಡ 50
ಗರಿಷ್ಠ ರೂ.1.50 ಲಕ್ಷÀ ಸಹಾಯಧನವನ್ನು
ನೀಡಲಾಗುವುದು.
   ನಿಗದಿತ ಅರ್ಜಿ ನಮೂನೆ (ತ್ರಿಪ್ರತಿ) ಜಾತಿ ಪ್ರಮಾಣ ಪತ್ರ
ಮತ್ತು ಕುಟುಂಬದ ಇತ್ತೀಚಿನ ವಾರ್ಷಿಕ ಆದಾಯ ಪ್ರಮಾಣ
ಪತ್ರ, ಆಧಾರ್‍ಕಾರ್ಡ್ ಪ್ರತಿ. ಕೈಗೊಳ್ಳುವ ಚಟುವಟಿಕೆಯ
ಯೋಜನಾ ವರದಿ. ತರಬೇತಿ ಅಥವಾ ಅನುಭವದ
ಪತ್ರ. ಮತದಾನದ ಗುರುತಿನ ಚೀಟಿ ಲಗತ್ತಿಸಿ ಸಲ್ಲಿಸಬೇಕು.
ಅರ್ಹ ಅರ್ಜಿಗಳನ್ನು ಆಯ್ಕೆ ಸಮಿತಿಯಲ್ಲಿ ಪರಿಶೀಲಿಸಿ ಆಯ್ಕೆಯಾದ

ಅರ್ಜಿಗಳನ್ನು ಅರ್ಜಿದಾರರ ಸೇವಾ ವಲಯದಲ್ಲಿ ಬರುವ ಬ್ಯಾಂಕಿನ
ಶಾಖೆಗಳಿಗೆ ಸಾಲ ಮಂಜೂರಾತಿಗಾಗಿ ಶಿಫಾರಸ್ಸು
ಮಾಡಲಾಗುವುದು. ಬ್ಯಾಂಕಿನಿಂದ ಸಾಲ ನೀಡಲು ಒಪ್ಪಿದಲ್ಲಿ ಇಡಿಪಿ
ತರಬೇತಿ ಏರ್ಪಡಿಸಿ ಸಹಾಯಧನ ಬಿಡುಗಡೆ
ಮಾಡಲಾಗುವುದು.
ಅರ್ಜಿ ಸಲ್ಲಿಸುವವರು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ
ಯೋಜನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು ಎಲ್ಲಾ
ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಆ. 31
ರಂದು ಸಂಜೆ 5.30 ರೊಳಗಾಗಿ ಸಂಬಂಧಪಟ್ಟ ಶಿಶು ಅಭಿವೃದ್ಧಿ
ಯೋಜನಾಧಿಕಾರಿಗಳ ಕಚೇರಿಗಳಿಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08192-296268 ನ್ನು
ಕಚೇರಿ ಸಮಯದಲ್ಲಿ ಸಂಪರ್ಕಿಸಬೇಕು ಎಂದು ಮಹಿಳಾ
ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿದೇರ್ಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *