ಪಿಂಚಣಿ ಯೋಜನೆ
ಸರ್ಕಾರವು ನ್ಯಾಷನಲ್ ಪೆನ್ಷನ್ ಸ್ಕೀಂ ಫಾರ್ ಟ್ರೇಡರ್ಸ್
ಅಂಡ್ ಸೆಲ್ಫ್ ಎಂಪ್ಲಾಯ್ಡ್ ಪರ್ಸನ್ ಟ್ರೇಡರ್ಸ್ (ಎನ್.ಪಿ.ಎಸ್. ಟ್ರೇಡರ್ಸ್)
ಯೋಜನೆಯಡಿ ಲಘು ವ್ಯಾಪಾರಿಗಳ ಸ್ವಯಂ ಉದ್ಯೋಗಿಗಳು
60 ವರ್ಷ ಪೂರೈಸಿರುವವರಿಗೆ 3 ಸಾವಿರ ಪಿಂಚಣಿ ಒದಗಿಸುವ
ಮೂಲಕ ವೃದ್ಧಾಪ್ಯದಲ್ಲಿ ನೆರವಾಗಲು ಯೋಜನೆ ಜಾರಿಗೆ
ತರಲಾಗಿದೆ.
ಜಂಟಿ ಕಾರ್ಮಿಕ ಆಯುಕ್ತರು ಹಾಗೂ ಜಂಟಿ
ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ
ಸಾಮಾಜಿಕ ಭದ್ರತಾ ಮಂಡಳಿ ಇವರು, ಜಂಟಿ ನಿರ್ದೇಶಕರು
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಯವರಿಗೆ ಹಾಗೂ ಕಾರ್ಮಿಕ
ಇಲಾಖೆಗೆ ಯೋಜನೆ ಕುರಿತು ವ್ಯಾಪಕ ಪ್ರಚಾರ ನೀಡುವಂತೆ
ಈಗಾಗಲೆ ಸೂಚನೆ ನೀಡಿರುತ್ತಾರೆ.
ಜಿಲ್ಲೆಯಲ್ಲಿ ಅಂಗಡಿ ಮಾಲೀಕರು, ಚಿಲ್ಲರೆ ವ್ಯಾಪಾರಿಗಳು, ಅಕ್ಕಿ
ಗಿರಿಣಿ ಮಾಲೀಕರು, ಎಣ್ಣೆ ಗಿರಣಿ ಮಾಲೀಕರು, ವರ್ಕ್ಶಾಪ್
ಮಾಲೀಕರು, ಕಮಿಷನ್ ಏಜೆಂಟ್ಸ್, ರಿಯಲ್ ಎಸ್ಟೆಟ್ ಬ್ರೋಕರ್ಸ್,
ಸಣ್ಣ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು, ಹಾಗೂ
ಇತರ ಸ್ವಯಂ ಉದ್ಯೋಗಿಗಳು ಯೋಜನೆಯ
ಫಲಾನುಭವಿಗಳಾಗಲು ಅರ್ಹರಿರುತ್ತಾರೆ.
18 ರಿಂದ 40 ವರ್ಷಗಳ ವಯೋಮಿತಿಯ ಕಾರ್ಮಿಕರು
ಆನ್ಲೈನ್ನಲ್ಲಿ ನೊಂದಣಿ ಮಾಡಬೇಕು. ಮತ್ತು ವಯಸ್ಸಿಗೆ
ಅನುಗುಣವಾಗಿ ಮಾಹೆಯಾನ ಕಾರ್ಮಿಕರ ವಂತಿಕೆ ಮತ್ತು
ಸರ್ಕಾರದ ವಂತಿಕೆ ಇರುತ್ತದೆ. 60 ವರ್ಷ ಪೂರೈಸಿರುವವರಿಗೆ
3 ಸಾವಿರ ಪಿಂಚಣಿ ಒದಗಿಸಲಾಗುವುದು. ವಾರ್ಷಿಕ ವಹಿವಾಟು ರೂ.
1.50 ಕೋಟಿ ಅಥವಾ ಇದಕ್ಕಿಂತ ಕಡಿಮೆ ಆಗಿರಬೇಕು.
ಇಎಸ್ಐ ಮತ್ತು ಪಿಎಫ್ ಹೊಂದಿದವರು ಈ ಸವಲತ್ತು ಮತ್ತು
ಸೌಲಭ್ಯಗಳಿಗೆ ಒಳಪಡುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ
ಕಾರ್ಮಿಕ ಅಧಿಕಾರಿಗಳು ಅಥವಾ ಕಾರ್ಮಿಕ ಇಲಾಖೆ
ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.