ಪಿಂಚಣಿ ಯೋಜನೆ

ರಾಜ್ಯಾದ್ಯಂತ ಕೋವಿಡ್-19 ರೋಗವು ಸಾಂಕ್ರಾಮಿಕವಾಗಿ
ಹರಡುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ಆರೋಗ್ಯದ
ದೃಷ್ಟಿಯಿಂದ ನೊಂದಾಯಿತ ಸೊಸೈಟಿಗಳ, ಸಂಘ-ಸಂಸ್ಥೆಗಳ
ಸಾರ್ವಜನಿಕ ಚುನಾವಣೆಗಳನ್ನು, ಉಪಚುನಾವಣೆಗಳನ್ನು
ಹಾಗೂ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ
ಚುನಾವಣೆಗಳನ್ನು ಕಳೆದ ಏ.26 ರಿಂದ ಮುಂದಿನ
ಆರು ತಿಂಗಳ ಅವಧಿಗೆ ಮುಂದೂಡಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ನೊಂದಣಿಯಾಗಿರುವ
ಸೊಸೈಟಿಗಳ, ಸಂಘ-ಸಂಸ್ಥೆಗಳು ಈ ಸೂಚನೆಯನ್ನು
ತಪ್ಪದೆ ಪಾಲಿಸಬೇಕು ಎಂದು  ದಾವಣಗೆರೆ ಜಿಲ್ಲಾ ಸಂಘಗಳ
ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ
ಉಪನಿಬಂಧಕ ಬಿ. ಜಯಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *