ಕಾರ್ಯಕ್ರಮ
ರಾಜ್ಯ ಜಲಸಂಪನ್ಮೂಲ ಖಾತೆ ಸಚಿವ ಗೋವಿಂದ ಎಂ. ಕಾರಜೋಳ
ಅವರು ಆ. 13 ರಂದು ಮಧ್ಯಾಹ್ನ ಬೆಂಗಳೂರಿನಿಂದ ಹೊರಟು
ಸಂಜೆ 6 ಗಂಟೆಗೆ ದಾವಣಗೆರೆ ಆಗಮಿಸಿ ವಾಸ್ತವ್ಯ ಮಾಡುವರು.
ಆ. 14 ರಂದು ಬೆಳಿಗ್ಗೆ 9 ಗಂಟೆಗೆ ಹೊರಟು ಭದ್ರಾವತಿ
ತಾಲ್ಲೂಕು ಲಕ್ಕವಳ್ಳಿಗೆ ಬೆ. 11 ಕ್ಕೆ ಆಗಮಿಸಿ, ಭದ್ರಾ
ಜಲಾಶಯಕ್ಕೆ ಬಾಗಿನ ಸಮರ್ಪಿಸುವ ಕಾರ್ಯಕ್ರಮದಲ್ಲಿ
ಭಾಗವಹಿಸುವರು. ಬಳಿಕ ಭದ್ರಾ ಜಲಾಶಯ ಬಳಿಯ
ಪರಿವೀಕ್ಷಣಾ ಮಂದಿರದಲ್ಲಿ ತುಂಗಾ ಮೇಲ್ದಂಡೆ ಯೋಜನೆ
ವಲಯ, ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಪ್ರಗತಿ
ಪರಿಶೀಲನಾ ಸಭೆ ನಡಸುವರು. ಸಚಿವರು ಸಂಜೆ 4 ಗಂಟೆಗೆ
ಬೆಳಗಾವಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ
ಕಾರ್ಯದರ್ಶಿ ತಿಳಿಸಿದ್ದಾರೆ.