ನವದೆಹಲಿ: ಕೇಂದ್ರ ಸರ್ಕಾರದಿಂದ ಪೊಲೀಸ್ ಇಲಾಖೆಯಲ್ಲಿ ಉತ್ತಮ ತನಿಖಾ ವಿಭಾಗದಲ್ಲಿ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳಿಗೆ ನೀಡಲಾಗುವ ಕೇಂದ್ರ ಗೃಹ ಸಚಿವರ ಪದಕಕ್ಕೆ ದೇಶದ 152 ಮಂದಿ ಅಧಿಕಾರಿಗಳು ಆಯ್ಕೆ ಆಗಿದ್ದಾರೆ. ಇದರಲ್ಲಿ ರಾಜ್ಯದ ಪೊಲೀಸರು ಆಯ್ಕೆಯಾಗಿದ್ದಾರೆ. ಉತ್ತಮ ತನಿಖಾಧಿಕಾರಿ ವಿಭಾಗದಲ್ಲಿ ರಾಜ್ಯದ ಪೊಲೀಸರಿಗೆ ಗೌರವ ಸಿಕ್ಕಿದೆ. ಕೇಂದ್ರ ಗೃಹ ಸಚಿವರ ಪದಕಕ್ಕೆ ರಾಜ್ಯದ 6 ಮಂದಿ ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ. ಉತ್ತಮ ತನಿಖಾ ವಿಭಾಗದಲ್ಲಿ ಈ ಪದಕ ನೀಡಲಾಗುತ್ತಿದೆ.
ಮಂಗಳೂರು ಉಪ ವಿಭಾಗದ ಡಿವೈಎಸ್ಪಿ ಪರಮೇಶ್ವರ, ಅನಂತ ಹೆಗ್ಡೆ, ಬೆಂಗಳೂರು ಸಿಸಿಬಿ, ಎಸಿಪಿ ಹೆಚ್.ಎನ್.ಧರ್ಮೇಂದ್ರ, ಬಿಡಿಎ ಎಸ್ ಟಿ ಎಫ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿ ವೈ ಎಸ್ ಪಿ ಬಾಲಕೃಷ್ಣ. ಸಿ. ಕೆ ಎಲ್ ಎ, ಎಸ್ ಐ ಟಿಯ ಇನ್ಸ್ ಪೆಕ್ಟರ್ ಮನೋಜ್ ಎನ್.ಹಾವಲೆ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ದೇವರಾಜ್ ಟಿ.ವಿ. ಹಾಗೂ ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶಿವಪ್ಪ ಕಟ್ಟಪ್ಪ ಕಮಟಗಿಯವರಿಗೆ 2021ರ ಉತ್ತಮ ತನಿಖಾ ವಿಭಾಗದಲ್ಲಿ ಕೇಂದ್ರ ಗೃಹ ಮಂತ್ರಿ ಪದಕ ದೊರೆತಿದೆ.
- ಪರಮೇಶ್ವರ ಅನಂತ ಹೆಗ್ಡೆ – ಡಿವೈಎಸ್ಪಿ -ಮಂಗಳೂರು ಉಪ ವಿಭಾಗ
ಮುಲ್ಕಿ ಪೊಲೀಸ್ ಠಾಣೆಯ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ ಉತ್ತಮ ತನಿಖೆಗಾಗಿ ಡಿವೈಎಸ್ಪಿ ಪರಮೇಶ್ವರ್ ಹೆಗ್ಡೆ ಅವರಿಗೆ ಕೇಂದ್ರ ಗೃಹ ಸಚಿವರ ಶೌರ್ಯ ಪದಕ ದೊರೆತಿದೆ.
- ಧರ್ಮೇಂದ್ರ.ಹೆಚ್.ಎನ್. – ಸಿಸಿಬ- ಎಸಿಪಿ-ಬೆಂಗಳೂರು ಸಿಸಿಬಿ ಎಸಿಪಿ ಧರ್ಮೇಂದ್ರ ಅವರು ಬಿಡದಿ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆ ಮೇಲಿನ ಆತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತಮ ತನಿಖೆ ನಡೆಸಿ,ಆರೋಪಿಗಳಿಗೆ ಶಿಕ್ಷೆಯಾಗುವಂತೆ ಕಾರ್ಯ ನಿರ್ವಹಿಸಿದ್ರು..ಇವರ ಉತ್ತಮ ತನಿಖೆ ಹಿನ್ನಲೆ ಆರೋಪಿಗಳಿಗೆ ಶಿಕ್ಷೆಯಾಗಿತ್ತು..ಹೀಗಾಗಿ ಸಿಸಿಬಿ ಎಸಿಪಿ ಧರ್ಮೇಂದ್ರ ಅವರಿಗೆ ಕೇಂದ್ರ ಗೃಹ ಸಚಿವರ ಪ್ರಶಸ್ತಿ ಲಭಿಸಿದೆ. 3.ಬಾಲಕೃಷ್ಣ-ಸಿ-ಎಸ್ ಟಿಎಫ್,ಬಿಡಿಎ- ಬೆಂಗಳೂರು ಕಬ್ಬನ್ ಪಾರ್ಕ್ ಟೆನ್ನಿಸ್ ಕೋರ್ಟ್ ನಲ್ಲಿ ಮಹಿಳೆ ಮೇಲೆ ನಡೆದಿದ್ದ ಆತ್ಯಾಚಾರ ಪ್ರಕರಣದಲ್ಲಿ ತನಿಖೆ ನಡೆಸಿದ್ದ ಅಂದಿನ ಕಬ್ಬನ್ ಪಾರ್ಕ್ ಇನ್ಸ್ ಪೆಕ್ಟರ್ ಆಗಿದ್ದ ಬಾಲಕೃಷ್ಣ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು..ಈ ಕೇಸ್ ನಲ್ಲಿ ಸುದೀರ್ಘ 5 ವರ್ಷಗಳ ಕಾಲ ವಿಚಾರಣೆ ನಡೆದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರ ಉತ್ತಮ ತನಿಖೆಗೆ ಕೇಂದ್ರ ಗೃಹ ಸಚಿವರ ಪ್ರಶಸ್ತಿ ಲಭಿಸಿದೆ..