ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಅನವಶ್ಯಕವಾಗಿ ಪ್ರಚಾರ ಪಡೆಯಲು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾನ್ ನಾಯಕರ ಹೆಸರನ್ನು ಪ್ರಸ್ತಾಪಿಸಿ ಹುಕ್ಕಾ ಬಾರ್ ಸ್ಥಾಪಿಸಲು ಎಂಬುವ ಹೇಳಿಕೆ ಖಂಡಿಸಿ ಸಿ.ಟಿ. ರವಿಯ, ಹೀನಾಯ ಸಂಸ್ಕೃತಿ ಅನಾವರಣಗೊಳಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು
ಸಿ.ಟಿ. ರವಿ, ಒಬ್ಬ ಅರೆಹುಚ್ಚ ಎಂಬುದು ಎಲ್ಲರಿಗೂ ತಿಳಿದಿದೆ ಮೇಕೆದಾಟು ಕುಡಿಯುವ ನೀರಿನ ಯೋಜನೆ ಕರ್ನಾಟಕದ ಹಕ್ಕು ಎಂಬುದನ್ನು ಅರಿತಿದ್ದರೂ ತಮಿಳುನಾಡಿಗೆ ಬೆಂಬಲ ವ್ಯಕ್ತಪಡಿಸಿದ ಕರ್ನಾಟಕದ ದ್ರೋಹಿ ಇಂತಹ ದ್ರೋಹಿ ಇಂದ ರಾಜ್ಯದ ಜನತೆ ಅಥವಾ ಕಾಂಗ್ರೆಸ್ ಪಕ್ಷ ಕಲಿಯುವುದು ಏನೂ ಇಲ್ಲ ಆದರೆ ಈತನ ವರ್ತನೆ ಹೇಳಿಕೆಯು ಬಿಜೆಪಿಯ ಸಂಸ್ಕೃತಿಯನ್ನು ನಿತ್ಯ ಎತ್ತಿ ತೋರಿಸುತ್ತಿದೆ
ಪಂಡಿತ ಜವಹರಲಾಲ್ ನೆಹರೂರವರು ಇಂದಿರಾ ಗಾಂಧಿ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಇಂದಿಗೂ ಸಹ ದೇಶದ ಜನ ನೆನೆಯುತ್ತಾರೆ ಆದರೆ ಬಿಜೆಪಿ ನೀಡಿದ ದರಯೇರಿಕೆಯಿಂದ ಇಡೀ ದೇಶವೇ ಕಂಗಾಲಾಗಿದೆ ಅದನ್ನು ಮರೆಮಾಚಲು ಬಿಜೆಪಿ ಇಂತಹ ಕೀಳುಮಟ್ಟದ ನಾಟಕವನ್ನ ಆಡುತ್ತಿದೆ ಬಿಜೆಪಿ ಜೀವಂತವಾಗಿರುವ ಪಕ್ಷವಾಗಿದ್ದರೆ ನರೇಂದ್ರ ಮೋದಿ ಹೆಸರನ್ನು ಏತಕ್ಕಾಗಿ ಕ್ರೀಡಾಂಗಣಕ್ಕೆ ನಾಮಕರಣ ಮಾಡುತ್ತಿದ್ದರು ಎಂಬುದನ್ನು ಸಿ.ಟಿ.ರವಿ ಉತ್ತರಿಸ ಬೇಕು
ಸಚಿವನಾಗಿದ್ದಾಗ ಕ್ಯಾಸಿನೋಗೆ ಅನುಮತಿ ನೀಡಲು ಮುಂದಾಗಿ ಈಗ ಹುಕ್ಕಾ ಬಾರ್ ಮದ್ಯಪಾನದ ಬಗ್ಗೆ ಗಮನ ನೀಡುತ್ತಿರುವ ಸಿ.ಟಿ.ರವಿ, ಕೂಡಲೇ ಸರ್ಕಾರದಿಂದ ಅಧಿಕೃತವಾಗಿ ಮದ್ಯಪಾನದ ಅಂಗಡಿ ತೆರೆದರೆ ನಿರುದ್ಯೋಗಿಯಾಗಿರುವ ಸಿ.ಟಿ ರವಿಗೆ ಉದ್ಯೋಗ ಲಭಿಸುತ್ತದ
ಮುಖ್ಯಮಂತ್ರಿಗಳು ಕೂಡಲೇ ಇದರ ಬಗ್ಗೆ ಸೂಕ್ತ ಗಮನ ಹರಿಸಿ ಸಿಟಿ ರವಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಈ ಮೂಲಕ ಆಗ್ರಹ ಪಡಿಸುತ್ತಿದ್ದೇವೆ ಸಿ.ಟಿ.ರವಿ, ಹಾಗೂ ಈಶ್ವರಪ್ಪನ ಹೇಳಿಕೆಯನ್ನ ಖಂಡಿಸಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್. ಮನೋಹರ್, ಜಿ.ಜನಾರ್ಧನ್,
ಎಂ.ಎ.ಸಲೀಮ್, ಎ.ಆನಂದ್,ಎಲ್.ಜಯಸಿಂಹ, ಮಹೇಶ್,ಪ್ರಕಾಶ್,ಪುಟ್ಟರಾಜು,ಚಂದ್ರಶೇಖರ,
ತೇಜಸ್ ಕುಮಾರ್, ಉಮೇಶ್, ಭಾಗವಹಿಸಿದ್ದರು