ಶಿವಮೊಗ್ಗ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಗಳೂರಿನಲ್ಲಿ ಅರೋಗ್ಯ ಇಲಾಖೆ ಡಿ ಹೆಚ್ ಓ ಕುರಿತು ಏಕವಚನದಲ್ಲಿ ಪದ ಪ್ರಯೋಗ ಮಾಡಿರುವುದನ್ನು ಖಂಡಿಸುವುದಾಗಿ ಶಿವಮೊಗ್ಗ ಜಿಲ್ಲಾ ಆರೋಗ್ಯ ಇಲಾಖೆ ನೌಕರರ ಸಂಘ ಪ್ರಭಾರ ಜಿಲ್ಲಾಧ್ಯಕ್ಷ ಮ.ಸ. ನಂಜುಂಡಸ್ವಾಮಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಳೆ ಅನಾಹುತ, ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಮುಖ್ಯಮಂತ್ರಿಗಳಾಗಿ ಜವಾಬ್ದಾರಿ ನಿರ್ವಹಿಸುವುದು ಸುಲಭವಲ್ಲ. ಇಂತಹ ಸಂಕೀರ್ಣ ಕಾಲದಲ್ಲಿ ಸಿಎಂ ಸ್ಥಾನ ವಹಿಸಿಕೊಂಡು ಸರ್ಕಾರವನ್ನು ಸಮರ್ಥವಾಗಿ ಮುನ್ನಡೆಸುವ ಪ್ರಯತ್ನ ನಡೆದಿದೆ. ಜತೆಗೆ ಕೊರೊನಾ ಮೂರನೇ ಅಲೆ ಆತಂಕದ ನಡುವೆ ಬೆಂಗಳೂರಿನ ಹೊರಗೂ ಪರಿಶೀಲನಾ ಸಭೆಗಳನ್ನು ನಡೆಸುತ್ತಿರುವುದು ಸ್ತುತ್ಯಾರ್ಹ ಎಂದು ತಿಳಿಸಿದ್ದಾರೆ.
ಅದೇ ರೀತಿ ಮಂಗಳೂರಿನಲ್ಲಿ ತಾವು ಜಿಲ್ಲಾ ಮಟ್ಟದ ಸಭೆ ನಡೆಸಿದ್ದೀರಿ. ಆದರೆ ಆರೋಗ್ಯ ಇಲಾಖೆಯಲ್ಲಿ ಸೂರ್ತಿ ತುಂಬಬೇಕಾದ ತಾವುಗಳು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದೀರಿ ಎಂಬ ಭಾವನೆ ರಾಜ್ಯದ ಜನರು ಹಾಗೂ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ನೌಕರರ ವರ್ಗದಲ್ಲಿ ಮೂಡಿಸುವಂತಹ ವಿಡಿಯೋ ದೃಶ್ಯವಳಿಗೂ ಹರಿದಾಡುತ್ತಿವೆ. ಇದರಿಂದಾಗಿ ಆರೋಗ್ಯ ಇಲಾಖೆಯನ್ನು ಪ್ರತಿನಿ„ಸುವ ನಮಗೂ ನಿರಾಶೆಯಾಗಿದೆ, ಬೇಸರವಾಗಿದೆ ಎಂದು ತಿಳಿಸಿದ್ದಾರೆ.
ಒಂದೆಡೆ ಕೊರೊನಾ ವಾರಿಯರ್ಸ್ ಎಂಬ ಬಹು ದೊಡ್ಡ ಬಿರುದು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ದೊರಕಿದೆ. ಆದರೆ ಜಿಲ್ಲಾ ಆರೋಗ್ಯಾ„ಕಾರಿಗಳ ಹುದ್ದೆಯಲ್ಲಿ ಇರುವವರನ್ನಾಗಲಿ ಅಥವಾ ಯಾವುದೇ ಅ„ಕಾರಿ ಅಥವಾ ನೌಕರರನ್ನಾಗಲಿ ಏಕವಚನದಲ್ಲಿ ಕರೆದು, ಎಲ್ಲರ ಸಮ್ಮುಖದಲ್ಲಿ ದೂಷಿಸುವುದು ಸರಿಯಲ್ಲ. ಅವರವರ ಗೌರವ ಅವರವರಿಗೆ ಇದ್ದೇ ಇರುತ್ತದೆ. ಇದನ್ನು ನಾವು ತೀವ್ರವಾಗಿ ವಿರೋ„ಸುವುದಾಗಿ ತಿಳಿಸಿದ್ದಾರೆ.
ಸರ್ಕಾರದ ನೀತಿ, ಕಾನೂನು, ನಿಯಮ, ಮಾರ್ಗಸೂಚಿ ಸುತ್ತೋಲೆಗಳ ಚಕ್ರವ್ಯೂಹದಲ್ಲಿ ಸ್ಥಳೀಯ ನಿರ್ವಹಣೆಯ ಸವಾಲುಗಳ ನಡುವೆ ಆರೋಗ್ಯ ಇಲಾಖೆಯ ಕೆಲಸ ಕಾರ್ಯಗಳನ್ನು ನಡೆಸುವುದು ಸುಲಭವಲ್ಲ. ಇಂತಹ ಒತ್ತಡದ ಸನ್ನಿವೇಶದಲ್ಲಿ ಒಂದೊಮ್ಮೆ ತಪ್ಪುಗಳಾಗಿದ್ದರೂ ಆ ಅಂಶಗಳನ್ನು ಪ್ರತ್ಯೇಕವಾಗಿ ಕರೆದು ಹೇಳಬಹುದು. ಇಲ್ಲವೆ, ಬಹುವಚನ ಉಪಯೋಗಿಸಬಹುದು. ಆದರೆ ಡಿಎಚ್‍ಓರನ್ನು ಪ್ರಶ್ನಿಸುವಾಗ ಏಕಾಏಕಿ ಏಕವಚನ ಬಳಸಿರುವುದು ಬೇಸರ ಮೂಡಿಸಿದೆ ಎಂದು ಹೇಳಿದ್ದಾರೆ.
ಜೀವದ ಹಂಗು ತೊರೆದು ಕೋವಿಡ್ ಮೊದಲಿನೆರಡು ಅಲೆಗಳ ಸಂದರ್ಭದಲ್ಲಿ ಕೆಲಸ ಮಾಡಿದ ಆರೋಗ್ಯ ಇಲಾಖೆಯ ವಿವಿಧ ಕೇಡರ್‍ನ ಉದ್ಯೋಗಿಗಳಿಗೆ ಸರ್ಕಾರ ಈವರೆಗೆ ತಾನೇ ಘೋಷಿಸಿದ ಕೋವಿಡ್ ರಿಸ್ಕ್ ಬೋನಸ್ ನೀಡಿಲ್ಲ ಎಂಬುದು ಸತ್ಯ. ಆದರೂ ಸರ್ಕಾರವನ್ನು ದೂಷಿಸದೆ, ಬರಬಹುದಾದ ಮತ್ತೊಂದು ಅಲೆಯನ್ನು ತಡೆಯಲು ಮಾನಸಿಕವಾಗಿ ಸಿದ್ಧರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಮುಖ್ಯಮಂತ್ರಿಗಳು ಸಭೆಯಲ್ಲಿ ಏಕವಚನ ಬಳಸಿರುವುದು ಇಲಾಕೆಯ ನೌಕರರಲ್ಲಿ ಬೇಸರ ತರಿಸಿದ ಎಂದು ತಿಳಿಸಿದ್ದಾರೆ.
ಕೋವಿಡ್ ಪ್ರತಿಬಂಧಕ ಲಸಿಕೆಯನ್ನು ಆರೋಗ್ಯ ಇಲಾಖೆ ಕುಟುಂಬ ವರ್ಗದವರಿಗೆ ಆದ್ಯತೆಯ ಮೇಲೆ ಕೊಡಿಸಲು `ಫ್ರಂಟ್‍ಲೈನ್ ವರ್ಕರ್’ ವಿಭಾಗದಲ್ಲಿ ಸೇರ್ಪಡೆ ಆಗಲು ಆದ ವಿಳಂಬದ ಬಗ್ಗೆ ನಿಮ್ಮದೇ ಐಎಎಸ್ ಅ„ಕಾರಿಗಳಿಂದ ಮಾಹಿತಿ ಪಡೆದುಕೊಳ್ಳಬೇಕು. ತರಾಟೆ ತೆಗೆದುಕೊಳ್ಳುವ ಮೂಲಕ ವ್ಯವಸ್ಥೆ ಸರಿಪಡಿಸಬಹುದು ಎಂಬ ನಂಬಿಕೆ ತಮ್ಮದಾಗಿರಬಹುದ. ಆದರೆ ವಸ್ತುಸ್ಥಿತಿ ಬೇರೆ ಇದೆ ಎಂದು ತಿಳಿಸಿದ್ದಾರೆ.
ಮಾಡುವ ಅವಮಾನಗಳು ಅತ್ಯಂತ ತಳ ಮಟ್ಟದ ನೌಕರನವರೆಗೆ ತಲುಪಿ ಅಂತಿಮವಾಗಿ ಜನಸಾಮಾನ್ಯರಿಗೇ ತೊಡಕಾಗುತ್ತದೆ. ಮುಖ್ಯಮಂತ್ರಿಗಳಾದ ತಮಗೆ ರಾಜ್ಯದಲ್ಲಿ ಆರೋಗ್ಯ ಸ್ಥಿತಿ ಸುಧಾರಿಸಲಿ ಎಂಬ ಆಶಯ ಇದೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಸಭೆಯಲ್ಲಿ ಅ„ಕಾರಿಗಳ ಮೇಲೆ ಏಕವಚನ ಪ್ರಯೋಗ ಸಮಂಜಸವಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *