75 ನೇ ಸ್ವಾತಂತ್ರ್ಯ ಸಂಭ್ರಮದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಹುತಾತ್ಮರಾದವರಿಗೆ ಗೌರವ ನಮನ ಸಲ್ಲಿಸಿ ಸ್ವಾತಂತ್ರ್ಯ ಹೋರಾಟಗಾರನ್ನು ಗೌರವಿಸಬೇಕೆಂದು ಎಐಸಿಸಿ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅದರ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಗೃಹಸಚಿವರಾದ ಶ್ರೀ. ರಾಮಲಿಂಗಾ ರೆಡ್ಡಿ ರವರು ಸ್ವತಂತ್ರ ಹೋರಾಟಗಾರರ ಮಹಾನ್ ತ್ಯಾಗ – ಬಲಿದಾನ ಹಾಗೂ ಅವರ ಕೊಡುಗೆಯನ್ನು ಸ್ಮರಿಸಿದರು ಹಾಗೂ ದೇಶಕ್ಕಾಗಿ ಪ್ರಾಮಾಣಿಕವಾಗಿ ಹೋರಾಡಿದವರನ್ನು ಆಡಳಿತ ಪಕ್ಷದವರು ಕಡೆಗಣಿಸುತ್ತಿದ್ದಾರೆ . ಹಾಗೂ ದೇಶಕ್ಕಾಗಿ ದ್ರೋಹ ಬಗೆದು ಬ್ರಿಟಿಷರೊಂದಿಗೆ ಶಾಮೀಲಾದವರನ್ನು ದೇಶ ಪ್ರೇಮಿಗಳೆಂದು ಬಿಂಬಿಸಲಾಗುತ್ತಿದೆ . ಇದೂ ದೇಶಕ್ಕೆ ಒದಗಿರುವ ಗಂಡಾಂತರ
75 ನೇ ವರ್ಷದ ಸ್ವತಂತ್ರದ ಅಂಗವಾಗಿ ದೇಶದ ಪರ ಹೋರಾಡಿದವರನ್ನು ಸನ್ಮಾನಿಸಬೇಕು ಹಾಗೂ ಅವರ ತ್ಯಾಗ ಬಲಿದಾನವನ್ನು ಸ್ಮರಿಸಬೇಕು , ಆದರೆ ಈ ಸಮಯದಲ್ಲಿ ಇವರನ್ನುಆಡಳಿತ ಪಕ್ಷದವರು ಹಾಗೂ ಬ್ರಿಟಿಷರೊಂದಿಗೆ ಶಾಮೀಲಾಗಿದ್ದ ನಕಲಿ ದೇಶಭಕ್ತರ ಅಂಧ ಭಕ್ತರು
ಅವಮಾನಿಸುತ್ತಿದ್ದಾರೆ .
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ರಾಜೀವಗಾಂಧೀ, ಇಂದೀರಾಗಾಂಧಿ ರವರ ಹೆಸರು ಬದಲಾಯಿಸುತ್ತಿದ್ದು , ರಾಜಕೀಯ ಲಾಭಕ್ಕಾಗಿ ಸರ್ದಾರ್ ಪಟೇಲ್ ರ ಪ್ರತಿಮೆ ಸ್ಥಾಪಿಸಿ ನಂತರ ಅವರ ಹೆಸರಿನ ಕ್ರೀಡಾಂಗಣಕ್ಕೆ ಕ್ರೀಡೆಯ ಬಗ್ಗೆಕಿಂಚಿತ್ತು ಗಂಧಗಾಳಿ ಗೊತ್ತಿಲ್ಲದ ಮೋದಿರವರು ತನ್ನ ಹೆಸರನ್ನೆ ನಾಮಕಾರಣ ಮಾಡಿಕೊಂಡಿದ್ದು ದೇಶದ ಇತಿಹಾಸಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಪ್ರಸ್ತುತ ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದ್ದು ಬಡತನ ತಾಂಡವಾಡುತ್ತಿದೆ ಆರ್ಥಿಕತೆ ನಿರಂತರವಾಗಿ ಕುಸಿಯುತ್ತಿದ್ದರೂ ಇದರ ಬಗ್ಗೆ ಕಿಂಚಿತ್ತೂ ಗಮನಹರಿಸದ ಪ್ರಧಾನಿ ಮೋದಿ ರವರು ದೇಶದ ಜನರ ತೆರಿಗೆ ಹಣವನ್ನು ತನ್ನ ಸ್ವಂತ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ .
ದೇಶದ ಪರ ತ್ಯಾಗ ಮಾಡಿದ ಮಹನೀಯರ ವಿರುದ್ದ ಬಾಲಿಶತನದ ಹೇಳಿಕೆಗಳನ್ನು ನೀಡುವ ಮುಖಾಂತರ ದೇಶದ ಹೋರಾಟಗಾರರನ್ನು ಅವಮಾನಿಸುತ್ತಿದ್ದಾರೆ, ಇದಕ್ಕೇ ಮುಂದಿನ ದಿನಗಳಲ್ಲಿ ನಿಜವಾದ ದೇಶಭಕ್ತರಾದ ನಾವೆಲ್ಲರೂ ಸೂಕ್ತ ಉತ್ತರವನ್ನು ನಕಲಿ ದೇಶಭಕ್ತರಿಗೆ ಹಾಗೂ ಬಿಜೆಪಿ ನಾಯಕರಿಗೆ ನೀಡಬೇಕಿದೆ .75ನೇ ಸ್ವತಂತ್ರ್ಸೋವದ ಸಂಭ್ರಮದಲ್ಲಿರುವ ನಾವೆಲ್ಲರು ತ್ಯಾಗ ಬಲಿದಾನ ಮಾಡಿದ ಹೋರಾಟಗಾರರನ್ನು ಸ್ಮರಿಸಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣವೆಂದು ಕಾರ್ಯಕ್ರಮದಲ್ಲಿ ಯುವ ಪೀಳಿಗೆಗೆ ಕರೆನೀಡಿದ್ದರು.
ಈ ಸಂದರ್ಭದಲ್ಲಿ ಸ್ವಾತಂತ್ರ ಹೋರಟಗಾರರಾದ ಶ್ರೀ ಸಿದ್ದಯ್ಯ , ವೆಂಕಟಸುಬ್ಬರಾಜು ಹಾಗೂ ಪ್ರೋ. ನರಸಿಂಹಯ್ಯ ರವರಿಗೆ ಸನ್ಮಾನಿಸಲಾಯಿತ್ತು. ಈ ಕಾರ್ಯಕ್ರಮದಲ್ಲಿ ಕವಿಕಾ ಮಾಜಿ ಅಧ್ಯಕ್ಷರಾದ ಎಸ್ ಮನೋಹರ್ ಕಾಂಗ್ರೆಸ್ ಮುಖಂಡರುಗಳಾದ ಎಂ ಎ ಸಲೀಂ ಹಾಗೂ ಪ್ರಚಾರ ಸಮಿತಿಯ ಅಧ್ಯಕ್ಷರುಗಳಾದ ಜಿ ಜನಾರ್ಧನ್ ಎಲ್ ಜಯಸಿಂಹ ಎ ಆನಂದ್ ಕೃಷಂರಾಜು ಮುಳುಗುಂದು ವಿ ಶಂಕರ್ ಪ್ರಕಾಶ್ ಕೆ ಟಿ ನವೀನ್ ಪುಟ್ಟರಾಜು ಹಾಗೂ ಶ್ರೀಮತಿ ಶೀಲಮ್ಮ ಶ್ರೀಮತಿ ಲಕ್ಷ್ಮೀಮೂರ್ತಿ ಶ್ರೀಮತಿ ಆಶಾ ಹಾಗೂ ಯುವಕರು ಭಾಗವಹಿಸಿದ್ದರು.