ಚಿತ್ರದುರ್ಗ ತಾಲೂಕು ಭರಮಸಾಗರ ಹೋಬಳಿ ಇಸಮುದ್ರ ಗೊಲ್ಲರಹಟ್ಟಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆಯಾದ ಮನೆಗೆ ಇಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು.
ಈ ಘಟನೆಯಿಂದ ನನ್ನ ಮನಸಿಗೆ ಬಹಳ ನೋವಾಗಿದೆ. ಈ ಘಟನೆ ಅತ್ಯಂತ ಖಂಡನೀಯ. ಆ ತಂದೆ ತಾಯಿ ಗೋಳು ಯಾರಿಗೂ ಬಾರದಿರಲಿ. ನಾನು ವೈಯುಕ್ತಿಕವಾಗಿ ಇನ್ನಿಬ್ಬರ ಮಕ್ಕಳ ಶಿಕ್ಷಣಕ್ಕೆ ಮತ್ತು ಅವರ ಜೀವನಕ್ಕೆ ಅನುಕೂಲವಾಗಲೆಂದು ಧನ ಸಹಾಯ ಮಾಡಿದೆನು. ತಪ್ಪು ಮಾಡಿದವನಿಗೆ ಅತ್ಯಂತ ಕಠಿಣ ಶಿಕ್ಷೆ ಆಗಲೇಬೇಕು.

Leave a Reply

Your email address will not be published. Required fields are marked *