ದಿನಾಂಕ 15-08-2021 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಘಟಪ್ರಭಾದ ಸೇವಾದಳದಲ್ಲಿ ಜನಪ್ರಿಯ ಯಮಕನಮರಡಿ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿಯವರ ನೇತೃತ್ವದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನೆರವೇರಿಸಲಾಯಿತು. ರಾಷ್ಟ್ರೀಯ ಸೇವಾದಳ ಉಸ್ತುವಾರಿ ಬಲಾರಮ ಸಿಂಗ್ ಬದೌದಿಯಾ ಅವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನಾಯಕರಾದ ಕು.ರಾಹುಲ್. ಸ.ಜಾರಕಿಹೊಳಿ ಹಾಗೂ ಪ್ರಿಯಾಂಕ.ಸ.ಜಾರಕಿಹೊಳಿಯವರು ಪುಷ್ಪ ನಮನ ಸಲ್ಲಿಸಿ ಎಲ್ಲರಿಗೂ 75 ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು.