ದಾವಣಗೆರೆ: ದೇಶದಲ್ಲಿನ ಎಲ್ಲಾ ಜಾತಿ, ಧರ್ಮ, ವರ್ಗವದವರನ್ನು ಒಂದೇ ವೇದಿಕೆಯಲ್ಲಿ ತೆಗೆದುಕೊಂಡು ಹೋಗುವ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ನಾಯಕರ ಪರಿಶ್ರಮಕ್ಕೆ ಕೃತಜ್ಞತೆ ಹೇಳಬೇಕಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಹೇಳಿದರು.

ನಗರದ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿನ ಜಿಲ್ಲಾ ಕಾಂಗ್ರೆಸ್ ಕಛೇರಿ(ಎಸ್.ಎಸ್.ಭವನ) ಆವರಣದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಸ್ವತಂತ್ರ ಸಂಗ್ರಾಮದಲ್ಲಿ ಹೋರಾಡಿದ ಮಹನೀಯರನ್ನು ನೆನೆದು ಮುನ್ನಡೆಯಬೇಕಾಗಿದೆ. ಅವರ ಹೋರಾಟದ ಪರಿಶ್ರಮವೇ ನಾವುಗಳು ಇಂದು ದೇಶದಲ್ಲಿ ನೆಮ್ಮದಿಯ ಜೀವನ ನಡೆಸಲು ಕಾರಣ ಎಂದು ತಿಳಿಸಿದರು.

ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತನಾಡಿ, ಸ್ವತಂತ್ರ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಮಹತ್ವದ ಪಾತ್ರ ವಹಿಸಿದ್ದು, ಇಂದು ವಿರೋಧ ಪಕ್ಷಗಳು ಆ ನಾಯಕರುಗಳ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ವಿಷಾದನೀಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಸೇವಾದಳದ ಅಧ್ಯಕ್ಷ ಡೋಲಿ ಚಂದ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಬಾಯಿ ಮಾಲತೇಶ್, ಪಾಲಿಕೆ ವಿಪಕ್ಷ ನಾಯಕ ನಾಗರಾಜ್, ಸೋಮಲಾಪುರದ ಹನುಮಂತಪ್ಪ, ಎಚ್. ಜಯಣ್ಣ, ಎಸ್.ಮಲ್ಲಿಕಾರ್ಜುನ್, ಎಚ್ ದುಗ್ಗಪ್ಪ, ಕೆ.ಎಲ್.ಹರೀಶ್ ಬಸಾಪುರ, ಸೂರ್ಯಪ್ರಕಾಶ, ಯುವ ಕಾಂಗ್ರೆಸ್‍ನ ಮೋಹಿನುದ್ದಿನ್, ಇಬ್ರಾಹಿಂ ಖಲೀಲ್, ಸಾಗರ್, ಎನ್‍ಎಸ್‍ಯುಐ ನ ಅಲಿ ರೆಹಮತ್, ಶಶಿಧರ್ ಪಾಟೀಲ್, ಮಹಿಳಾ ಕಾಂಗ್ರೆಸ್‍ನ ಅನಿತಾಬಾಯಿ ಮಾಲತೇಶ್, ಕವಿತಾ ಚಂದ್ರಶೇಖರ್, ಆಶಾ ಮುರುಳಿ, ಮಂಗಳಮ್ಮ, ನಾಗರತ್ನಮ್ಮ, ಶುಭಮಂಗಳ, ರಾಜೇಶ್ವರಿ, ದ್ರಾಕ್ಷಾಯಣಮ್ಮ, ಎಸ್ಸಿ ಘಟಕದ ರಾಕೇಶ್, ಅಲ್ಪಸಂಖ್ಯಾತರ ಘಟಕದ ದಾದಾಪೀರ್, ಅಸಂಘಟಿತ ಘಟಕದ ನಂಜನಾಯ್ಕ, ಲಿಯಾಖತ್ ಅಲಿ, ಹರೀಶ್, ಕಾರ್ಮಿಕ ಘಟಕದ ಸುಭಾನ್ ಸಾಬ್, ಇಂಟೆಕ್ ಘಟಕದ ಮಂಜುನಾಥ್, ಸೇವಾದಳದ ಅಬ್ದುಲ್ ಜಬ್ಬರ್, ರಾಜಭಕ್ಷಿ, ಮಂಜುನಾಥ್, ಕಿಸಾನ್ ಘಟಕದ ಬಾತಿ ಶಿವಕುಮಾರ್, ಮೊಹಮದ್ ಜಿಕ್ರಿಯ ಹಾಗೂ ನೂರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

ಇದಕ್ಕೂ ಮುನ್ನ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಜಿಲ್ಲಾಧ್ಯಕ್ಷ ಎಚ್.ಬಿ ಮಂಜಪ್ಪ ನೇತೃತ್ವದಲ್ಲಿ ಡಾ.ಎಂ.ಸಿ.ಮೋದಿ(ಗುಂಡಿ ಸರ್ಕಲ್) ವೃತ್ತದಿಂದ ನಿಜಲಿಂಗಪ್ಪ ಬಡಾವಣೆಯ ಜಿಲ್ಲಾ ಕಾಂಗ್ರೆಸ್ ಕಛೇರಿಯವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಯಿತು.

ಈ ಜಾಥಾದಲ್ಲಿ ಪಕ್ಷದ ಎಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿ ನೂರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *