ಜಿಲ್ಲೆಯ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕ
ಹಾಗೂ ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ
ಮೆಟ್ರಿಕ್ ನಂತರದ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ
ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ, ಹಾಗೂ ಇನ್ನಿತರೆ
ಸಾಮಗ್ರಿಗಳನ್ನು ನೀಡಲಾಗುತ್ತದೆ. ಅಲ್ಪಸಂಖ್ಯಾತ
ವರ್ಗದವರಾದ ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್, ಪಾರ್ಸಿ
ಸಮುದಾಯದ ವಿದ್ಯಾರ್ಥಿಳಿಗೆ ಶೇ.75 ಹಾಗೂ ಇತರೆ ಜನಾಂಗದ
ವಿದ್ಯಾರ್ಥಿಗಳಿಗೆ ಶೇ. 25 ಮೀಸಲಾತಿ ಇದ್ದು, ಆಸಕ್ತ ಅರ್ಹ
ಅಭ್ಯರ್ಥಿಗಳು ಸೆ.05 ರೊಳಗಾಗಿ ಅರ್ಜಿ ಪಡೆದು
ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಅಲ್ಪಸಂಖ್ಯಾತರ ಮೆಟ್ರಿಕ್ ನಂತರ
ಬಾಲಕಿಯರ ವಿದ್ಯಾರ್ಥಿನಿಲಯ ಕುಂದುವಾಡ ರಸ್ತೆ, ದಾವಣಗೆರೆ,
ಮೊ-8861042302, ಕೆರೆಬಿಳಚಿ ಮೊ-9740064732. ಬಾಲಕರ
ವಿದ್ಯಾರ್ಥಿನಿಲಯ ಶಿವಕುಮಾರ್ ಸ್ವಾಮಿ ಬಡಾವಣೆ, ದಾವಣೆರೆ ಮೊ-
- ಗುತ್ತೂರು ಕಾಲೋನಿ ಹರಿಹರ, ಮೊ-9743320041.
ಜಗಳೂರು ಮೊ-8217781447 ಹಾಗೂ ಅಲ್ಪಸಂಖ್ಯಾತರ ಕಲ್ಯಾಣ
ಇಲಾಖೆಯ ತಾಲ್ಲೂಕು ವಿಸ್ತಾರಣಾಧಿಕಾರಿಗಳು ದಾವಣಗೆರೆ ಉಪ
ವಿಭಾಗ ಮೊ: 7846062067 ಇಲ್ಲಿ ಪಡೆದು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಛೇರಿ ದೂರವಾಣಿ: 08192-250022
ಕ್ಕೆ ಸಂಪರ್ಕಿಸಬಹುದೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ
ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.