ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ,
ದಾವಣಗೆರೆ ವತಿಯಿಂದ 2021-22ನೇ ಸಾಲಿನ ವಿಶೇಷ ಘಟಕ
ಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ (6+01)
ಕುರಿ/ಮೇಕೆ ಘಟಕ ಪೂರೈಕೆ ಯೋಜನೆಗಾಗಿ ಅರ್ಹರಿಂದ ಅರ್ಜಿ
ಆಹ್ವಾನಿಸಲಾಗಿದೆ.
ಯೋಜನೆಯು ನಿಗಮದಲ್ಲಿ ನೊಂದಾಯಿತ ಕುರಿ ಮತ್ತು
ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಜಾತಿ ಹಾಗೂ
ಪರಿಶಿಷ್ಟ ಪಂಗಡದ 18 ರಿಂದ 60 ವರ್ಷ ವಯೋಮಿತಿಯ
ಮಹಿಳಾ ಸದಸ್ಯರಿಗೆ, ಒಂದು ವೇಳೆ ಮಹಿಳಾ ಸದಸ್ಯರು
ಲಭ್ಯವಿಲ್ಲದಿದ್ದಲ್ಲಿ 18 ರಿಂದ 60 ವರ್ಷ ವಯೋಮಿತಿಯ ಪುರುಷ
ಸದಸ್ಯರುಗಳನ್ನು, ಕುರಿ ಮತ್ತು ಉಣ್ಣೆ ಉತ್ಪಾದಕರ
ಸಹಕಾರ ಸಂಘಗಳು ಇಲ್ಲದೇ ಇರುವ
ತಾಲೂಕುಗಳಲ್ಲಿಯೂ ಸಹಾ ಕುರಿ
ಸಾಕಾಣಿಕೆದಾರರುಗಳನ್ನು ಫಲಾನುಭವಿಗಳನ್ನಾಗಿ
ಸರ್ಕಾರದಿಂದ ರಚಿಸಲಾಗಿರುವ ಜಿಲ್ಲಾ ಆಯ್ಕೆ ಸಮಿತಿ ಮೂಲಕ
ಆಯ್ಕೆ ಮಾಡಲಾಗುವುದು. ಈ ಹಿಂದೆ ಯೋಜನೆಯಡಿ
ಸಹಾಯಧನ ಪಡೆದಿರುವ ಫಲಾನುಭವಿಗಳನ್ನು
ಯಾವುದೇ ಕಾರಣಕ್ಕೂ ಪುನರ್ ಆಯ್ಕೆ ಮಾಡಲಾಗುವುದಿಲ್ಲ.
ಯೋಜನೆಗೆ ಸಂಬಂದಿಸಿದ ನಿಗದಿತ ಅರ್ಜಿಯನ್ನು ಆಯಾ
ತಾಲೂಕು ಮಟ್ಟದ ಸಹಾಯಕ ನಿರ್ದೇಶಕರು/ಮುಖ್ಯ
ಪಶುವೈದ್ಯಾಧಿಕಾರಿಗಳು (ಆಡಳಿತ) ಪಶುಪಾಲನಾ ಮತ್ತು
ಪಶುವೈದ್ಯಸೇವಾ ಇಲಾಖೆ ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿ
ಮತ್ತು ಸಂಬಂದಿಸಿದ ದಾಖಲೆಗಳನ್ನು ಆಯಾ ತಾಲೂಕು
ಮಟ್ಟದ ಸಹಾಯಕ ನಿರ್ದೇಶಕರು/ಮುಖ್ಯ
ಪಶುವೈದ್ಯಾಧಿಕಾರಿಗಳು (ಆಡಳಿತ) ಪಶುಪಾಲನಾ ಮತ್ತು
ಪಶುವೈದ್ಯಸೇವಾ ಇಲಾಖೆ ಇವರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು
ಆ. 28 ಕೊನೆಯ ದಿನವಾಗಿರುತ್ತದೆ ಎಂದು ದಾವಣಗೆರೆಯ
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ
ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.