ನ್ಯಾಮತಿ ತಾಲೂಕು ಕಂಕನಹಳ್ಳಿ ಗ್ರಾಮದಲ್ಲಿರುವ ಸರ್ವೇ ನಂಬರ್ 30 ರ ,ಕೆ ಜಿ ರವಿಕುಮಾರ್ ಬಿನ ಕೆ ಜಿ ಮಹೇಶ್ವರಪ್ಪಗೌಡ್ರು ರವರಿಗೆ ಸೇರಿದ ಒಂದುವರೆ ಎಕರೆ ಜಮೀನಿನಲ್ಲಿ ಜೆ ಕೆ 1174 ನಂಬರಿನ ಹೈಬ್ರಿಡ್ ತಳಿಯ ಮೆಣಸಿನಕಾಯಿಯನ್ನು ಬೆಳೆದಿದ್ದರು .
ಈ ತಳಿಯ ಬೆಳೆಯು ಹೇರಳವಾಗಿ ರೈತರಾದ ಕೆ ಜಿ ರವಿಕುಮಾರ್ ಗೌಡ್ರು ಅವರು ತಮ್ಮ ಸ್ವಂತ ಜಮೀನಿನಲ್ಲಿ ಮೆಣಸಿನ ಕಾಯಿ ಬೆಳೆದಿದ್ದರಿಂದ ಕಡಿಮೆ ಖರ್ಚು ಅಧಿಕ ಇಳುವರಿ ಬಂದಿರುವ ಕಾರಣ ಜೆ ಕೆ 1174 ಹೈಬ್ರಿಡ್ ಸೀಡ್ಸ್ ಕಂಪನಿಯವರು ಇವರ ಜಮೀನಿನಲ್ಲಿ ಮೆಣಸಿನಕಾಯಿ ಕ್ಷೇತ್ರೋತ್ಸವ ವನ್ನು ಆಚರಣೆ ಇಂದು ಮಾಡಲಾಯಿತು .ಇದರ ಅಧ್ಯಕ್ಷತೆಯನ್ನು ಕೆ ಜಿ ಮಹೇಶ್ವರಪ್ಪ ಗೌಡ್ರು ವಹಿಸಿದ್ದರು .
ನಂತರ ಅತ್ಯಧಿಕ ಮೆಣಸಿನಕಾಯಿ ಬೆಳೆದಂತಹ ರೈತರಾದ ಕೆ ಜಿ ರವಿಕುಮಾರ್ ಗೌಡ್ರು ರವರಿಗೆ ಕಂಪನಿಯ ವತಿಯಿಂದ ಅವರುಗಳಿಗೆ ಮೊಮೆಂಟ ಕೊಟ್ಟು ಶಾಲನ್ನು ಹೊದಿಸಿ ಹೂವಿನ ಹಾರವನ್ನು ಹಾಕುವುದರ ಮುಖೇನ ಇವರು ಗಳಿಗೆ ಸನ್ಮಾನಿಸಿದರು .
ಇವರ ಉಪಸ್ಥಿತಿಯಲ್ಲಿ ಮಹೇಶ್ವರಪ್ಪ ಗೌಡ್ರು ಕೆ ಜಿ ಸಂಜು ಆರ್ .ಎಸ್ ಎಮ್, ಶಂಭುಲಿಂಗ ಹಂಚಿನಮನೆ ಮಂಜು ಜೆ ಕೆ M D O.ಕೆ ಜಿ ರವಿಕುಮಾರ್ ಕರಿಬಸಪ್ಪ ಡಿ ಬಿ, ದೇವರಾಜ್ ಎ ಜಿ , ಶಾಂತಕುಮಾರ ಕೆ ಜಿ ,ಸತೀಶ್ ಕೆ ಜಿ, ಇನ್ನೂ ಹಲವಾರು ರೈತರು ಗಳು ಮತ್ತು ಕಂಕನಹಳ್ಳಿ ಗ್ರಾಮಸ್ಥರು ಹಾಗೂ ಕಂಪನಿಯ ಸಿಬ್ಬಂದಿ ವರ್ಗದ ವರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು.