ಗದಗ:18: ದೇಶಕ್ಕಾಗಿ ಹುತಾತ್ಮರಾದ ಮಾಜಿ ಪ್ರಧಾನಿ ದಿ ರಾಜೀವಗಾಂಧಿ ಹಾಗೂ ಕನರ್ಾಟಕದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಇವರುಗಳ ಜಯಂತಿಯನ್ನು ದಿನಾಂಕ 20.08.2021ರ ಶುಕ್ರವಾರದಂದು ಮುಂಜಾನೆ 11.00ಕ್ಕೆ ದಿ.ಕೋ-ಆಪ್ ಕಾಟನ್ ಸೇಲ ಸೋಸಾಯಿಟಿ ಆವರಣದಲ್ಲಿರುವ ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾಯರ್ಾಲಯದಲ್ಲಿ ಆಚರಿಸಲಾಗುವದು.
ಕಾರಣ ಯಾವತ್ತು ಪಕ್ಷದ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಪದಾಧಿಕಾರಿಗಳು ಬ್ಲಾಕ ಕಾಂಗ್ರೆಸ್ ಅಧ್ಯಕ್ಷರು, ಹಾಗೂ ಪದಾಧಿಕಾರಿಗಳು, ಪಕ್ಷದ ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ, ಗ್ರಾಮ ಪಂಚಾಯತ, ಎ.ಪಿ.ಎಂ.ಸಿ ಅಧ್ಯಕ್ಷರುಗಳು, ಹಾಗೂ ಸದಸ್ಯರುಗಳು ಹಾಗೂ ನಗರಸಭೆ, ಪಟ್ಟಣ ಪಂಚಾಯ್ತಿ, ಪುರಸಭೆ ಅಧ್ಯಕ್ಷರುಗಳು, ಹಾಗೂ ಸದಸ್ಯರುಗಳು, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ವಿದ್ಯಾಥರ್ಿ ಕಾಂಗ್ರೆಸ್, ಕಾಂಗ್ರೆಸ್ ಸೇವಾದಳ, ಕಿಸಾನ ಘಟಕ, ಹಿಂದುಳಿದ ವರ್ಗ ಕಾಂಗ್ರೆಸ ಘಟಕ, ಎಸ್ಸಿ/ಎಸ್ಟಿ, ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳು ಹಾಗೂ ಅಧ್ಯಕ್ಷರುಗಳು, ರಾಜೀವಗಾಂಧಿ ಪಂಚಾಯತ ರಾಜ್ ಸಂಘಟನೆ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು, ಪಕ್ಷದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಗದಗ-ಬೆಟಗೇರಿ ಶಹರ ಕಾಂಗ್ರೆಸ ಕಮೀಟಿಯ ಅಧ್ಯಕ್ಷರಾದ ಗುರಣ್ಣ ಬಳಗಾನೂರ ಹಾಗೂ ಗದಗ ಜಿಲ್ಲಾ ಯುವ ಕಾಂಗ್ರೆಸ ಸಮಿತಿಯ ಅಧ್ಯಕ್ಷರಾದ ಅಶೋಕ ಮಂದಾಲಿಯವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.