ಹೊನ್ನಾಳಿ ಸುಂಕದಕಟ್ಟೆ; ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರುರವರು 18 /8/21 ರಂದು ಸಂಜೆ ಏಳು ಗಂಟೆಗೆ ಸರಿಯಾಗಿ ತಾಲೂಕು ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗದ ಒಬಿಸಿ ಅಧ್ಯಕ್ಷರಾದ ಜಿ ಸಿ ಮೋಹನ್ಕುಮಾರ್ ಸುಂಕದಕಟ್ಟೆ ಅಣ್ಣನ ಮಗಳಾದ ಪ್ರಿಯಾಂಕ ಎಸ್ ಆರ ಈ ವಿದ್ಯಾರ್ಥಿನಿ 20 20 /20 21 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆ ಯಲ್ಲಿ 6 25 ಕೆ 619 ಅತಿ ಹೆಚ್ಚು ಅಂಕ ಪಡೆದು ಅವರ ಶಾಲೆಗೆ ಮತ್ತು ಪೋಷಕರುಗಳಿಗೆ ಗೌರವ ತಂದು ಕೊಟ್ಟಿದ್ದಾರೆ ಎಂದು ಈ ವಿಷಯ ತಿಳಿದ ತಕ್ಷಣ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನ ಗೌಡ್ರು ರವರು ಈ ವಿದ್ಯಾರ್ಥಿಯ ಮನೆಗೆ ತೆರಳಿ ಗೌರವಪೂರ್ವಕವಾಗಿ ಅವಳಿಗೆ ಸಂತೋಷದಿಂದ ಸನ್ಮಾನಿಸಿ ನೀನು ಇನ್ನಷ್ಟು ಓದಿಕೊಂಡು ಶಿಕ್ಷಣದಲ್ಲಿ ಹೆಚ್ಚಿಗೆ ಹೆಸರು ಮಾಡಿ ಊರಿಗೆ ಮತ್ತು ತಾಲೂಕಿಗೆ ರಾಜ್ಯಕ್ಕೆ ದೇಶಕ್ಕೆ ಹೆಸರು ತರುವಂತಹ ಕೆಲಸ ನಿನ್ನಿಂದ ಆಗಲಿ ಎಂದು ಅವಳಿಗೆ ಆಶೀರ್ವದಿಸಿದರು .
ನಂತರ ಅವರು ತೆಗೆದುಕೊಂಡ ಹೋಗಿದ್ದ 5 ಕೆಜಿ ಸಿಹಿ ಜಹಾಂಗೀರನ್ನು ಅದರಲ್ಲಿ ಒಂದು ತುಣಕ್ಕನ್ನು ಆ ವಿದ್ಯಾರ್ಥಿನಿಗೆ ತಿನ್ನಿಸಿ ಅವರ ಸಂಬಂಧಿಕರಿಗೂ ಮತ್ತು ಅಲ್ಲಿ ಸೇರಿರುವ ಜನರಿಗೆ ಜಹಾಂಗೀರನ ಸಿಹಿಯನ್ನು ಹಂಚಿ ಸುವುದರ ಮೂಲಕ ವಿದ್ಯಾರ್ಥಿ ಮತ್ತು ಕುಟುಂಬಸ್ಥರೊಂದಿಗೆ ಸಂತೋಷವನ್ನು ಹಂಚಿಕೊಂಡರು .ಇವಳ ಮನೆಯಲ್ಲಿ ಸೇರಿದ್ದ ಗ್ರಾಮ ಪಂಚಾಯಿತಿ ಸದಸ್ಯರುಗಳು ಮತ್ತು ಗ್ರಾಮಸ್ಥರು ಸೇರಿ ಡಿ ಜಿ ಶಾಂತನಗೌಡ್ರು ರವರ ಜೊತೆ ಅರ್ಧಗಂಟೆಗಳ ಕಾಲ ಗ್ರಾಮಸ್ಥರ ಸಮಸ್ಯೆಗಳಿಗೆ ಬಗ್ಗೆ ಚರ್ಚಿಸಿದರು .
ಪ್ರಿಯಾಂಕಾ ಎಸ್ ಆರ ವಿಧ್ಯಾರ್ಥಿ ನಿಯ ಪೋಷಕರು ಮತ್ತು ಸಂಬಂದಿಕರು ಡಿ ಜಿ ಶಾಂತನ ಗೌಡ್ರು ರವರಿಗೆ ಸಂತೋಷ ದಿಂದ ಗೌರವ ಪೂರ್ವಕವಾಗಿ ಸನ್ಮಾನಿಸಿದರು.
.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು , ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮಂಜುನಾಥ ಎಸ್ಆರ್ ,ಉಪಾಧ್ಯಕ್ಷರಾದ ಚಂದ್ರಮ್ಮ ,ಸಿದ್ದಪ್ಪ, ವಿದ್ಯಾರ್ಥಿನಿ ಪ್ರಿಯಾಂಕ ಮತ್ತು ಅವರ ತಂದೆ ತಾಯಿಗಳು ,ಹಾಗೂ ಸಂಬಂಧಿಕರು ಊರಿನ ಗ್ರಾಮಸ್ಥರು, ಹಿಂದುಳಿದ ವರ್ಗದ ಓಬಿಸಿ ಅಧ್ಯಕ್ಷರಾದ ಮೋಹನ್ ಕುಮಾರ್, ಎ ಪಿ. ಎಮ ಸಿ ಸದಸ್ಯ ಪ್ರಕಾಶ ಆರ ನಾಗಪ್ಪ. ಸಹ ಭಾಗಿಯಾಗಿದ್ದರು.