ಭಾರತ ಚುನಾವಣಾ ಆಯೋಗವು ಕಳೆದ ಆಗಸ್ಟ್ 13 ರಂದು
ನೀಡಿರುವ ಸೂಚನೆಯಂತೆ ಸಹಾಯಕ ಮತದಾರ
ನೋಂದಣಾಧಿಕಾರಿಗಳು ಮತದಾರರ ದಾಖಲೆಗಳ
ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು, ಉಲ್ಲಂಘಿಸುವವರ ವಿರುದ್ಧ
ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ
ಮಹಾಂತೇಶ್ ಬೀಳಗಿ ಸೂಚನೆ ನೀಡಿದ್ದಾರೆ.
ಸಹಾಯಕ ಮತದರರ ನೊಂದಣಾಧಿಕಾರಿಗಳು ಮತದಾರರ
ಪಟ್ಟಿಯ ಸಿದ್ಧತೆ, ಮತದಾರರ ಗುರುತಿನ ಚೀಟಿಯನ್ನು
ವಿತರಿಸುವ ಮಹತ್ವದ ಕಾರ್ಯಗಳನ್ನು ತಂತ್ರಾಂಶದ ಮೂಲಕ
ನಿರ್ವಹಿಸುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ತಮ್ಮ ಲಾಗಿನ್ ಐಡಿ
ಮತ್ತು ಪಾಸ್‍ವರ್ಡ್‍ಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು
ಹಾಗೂ ಮತದಾರರ ದಾಖಲೆಗಳನ್ನು ಗೌಪ್ಯವಾಗಿಟ್ಟುಕೊಳ್ಳಬೇಕು.
ಇದರ ಉಲ್ಲಂಘನೆ ಕಂಡುಬಂದಲ್ಲಿ ಅಂತಹ ಅಧಿಕಾರಿ ಅಥವಾ
ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
ಜಿಲ್ಲೆಯ ಎಲ್ಲಾ ಮತದಾರÀ ನೋಂದಣಾಧಿಕಾರಿಗಳು, ಸಹಾಯಕ
ಮತದಾರÀ ನೋಂದಣಾಧಿಕಾರಿಗಳು ಮತ್ತು ಡಾಟಾ ಎಂಟ್ರಿ
ಆಪರೇಟರ್‍ಗಳು ಗೌಪ್ಯತೆಗೆ ಬದ್ಧರಾಗಿದ್ದು,
ಸಾರ್ವಜನಿಕರು hಣಣಠಿs://ಟಿvsಠಿ.iಟಿ/ ಅಥವಾ ಗಿoಣeಡಿ ಊeಟಠಿಟiಟಿe ಒobiಟe ಚಿಠಿಠಿ (ಂಟಿಜಡಿoiಜ/iಔS),
ಅಥವಾ hಣಣಠಿ://voಣeಡಿಠಿoಡಿಣeಟ.eಛಿi.gov.iಟಿ/ ವಿಧಾನಗಳ ಮುಖಾಂತರ
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬಹುದು.
ಒಂದು ವೇಳೆ ಮತದಾರರು ಮೃತರಾಗಿದ್ದಲ್ಲಿ ಅಥವಾ
ವರ್ಗಾವಣೆವಾಗಿದ್ದಲ್ಲಿ ಮತದಾರರ ಪಟ್ಟಿಯಿಂದ ಅವರನ್ನು
ತೆಗೆದುಹಾಕಲಾಗುವುದು. ಮತದಾರರ ಪಟ್ಟಿಯಲ್ಲಿ ಹೆಸರು,
ವಿಳಾಸ, ಲಿಂಗ, ವಯಸ್ಸು ಇತರೇ ದೋಷಗಳಿದ್ದಲ್ಲಿ
ಸರಿಪಡಿಸಿಕೊಳ್ಳಬಹುದು.
ಹೆಚ್ಚಿನ ತಾಂತ್ರಿಕ ಸಹಾಯಕ್ಕಾಗಿ ಕಚೇರಿ ವೇಳೆಯಲ್ಲಿ ಜಿಲ್ಲಾ
ಮತದಾರ ಸಹಾಯವಾಣಿ 08192-272953 ಗೆ ಕರೆಮಾಡಬಹುದು
ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.