ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಎಐಸಿಟಿಇ
ಯಿಂದ ಅನುಮೋದಿಸಲಾದ ಸರ್ಕಾರಿ ಉಪಕರಣಾಗಾರ ಮತ್ತು
ತರಬೇತಿ ಕೇಂದ್ರದಲ್ಲಿ ಎಸ್ಎಸ್ಎಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ ಉತ್ತಮವಾದ
ಉದ್ಯೋಗಾವಕಾಶ ಕಲ್ಪಿಸುವ ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ
ಮೇಕಿಂಗ್ ಕೋರ್ಸ್ 3+1 ವರ್ಷಗಳ ಅವಧಿಯ ತರಬೇತಿಗೆ ಅರ್ಜಿ
ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆ.28 ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸುವವರು ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ
ಉತ್ತೀರ್ಣರಾಗಿರಬೇಕು. ಪ್ರವೇಶಕ್ಕೆ ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 5
ವರ್ಷ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ
ಸಲ್ಲಿಸಬಹುದು. ಹಾಗೂ ಮೆರಿಟ್-ಕಂ-ರೋಸ್ಟರ್ ಪದ್ದತಿ ಮೂಲಕ
ಶೇಕಡ 30 ರಷ್ಟು ಸೀಟುಗಳನ್ನು ವಿದ್ಯಾರ್ಥಿನಿಯರಿಗೆ ಕಾದಿರಿಸಲಾಗಿದೆ.
2 ವರ್ಷದ ಐಟಿಐ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಗೆ ಎಐಸಿಟಿಇ ಅಥವಾ
ಡಿಟಿಇ ನಿಯಮದ ಪ್ರಕಾರ 2ನೇ ವರ್ಷದ ಡಿಪ್ಲೋಮಾ
ತರಗತಿಗಳಿಗೆ ನೇರ ಪ್ರವೇಶ ಕಲ್ಪಿಸಲಾಗುವುದು.
ಸುಸಜ್ಜಿತ ಮೂಲಸೌಕರ್ಯಗಳು, ಆಧುನಿಕ ಹೈಟೆಕ್
ಯಂತ್ರೋಪಕರಣಗಳು, ಪ್ರಾಕ್ವಿಕಲ್ ಇಂಟಿಗ್ರೇಟೆಡ್ ಆನ್ಜಾಬ್
ತರಬೇತಿ, ಅನುಭವಿ ತರಬೇತುದಾರರು ಮತ್ತು ಪ್ಲೇಸ್ಮೆಂಟ್
ಸಹಯೋಗದೊಂದಿಗೆ ತರಬೇತಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಸರ್ಕಾರಿ ಉಪಕರಣಾಗಾರ
ಮತ್ತು ತರಬೇತಿ ಕೇಂದ್ರ, 22 ಸಿ ಮತ್ತು ಕೆಐಎಡಿಬಿ ಇಂಡಸ್ಟ್ರಿಯಲ್
ಏರಿಯಾ, ಕೆಎಸ್ಆರ್ಟಿಸಿ ಬಸ್ ಡಿಪೋ ಹತ್ತಿರ, ಹರ್ಲಾಪುರ, ಹರಿಹರ
ದೂರವಾಣಿ ಸಂಖ್ಯೆ:08192-243937/296840, ಮೊಬೈಲ್-8711913947 ಹಾಗೂ
9845941245 ಅಥವಾ ಜಾಲತಾಣ ತಿತಿತಿ.ಞಚಿಡಿuಟಿಚಿಜu.ಞಚಿಡಿಟಿಚಿಣಚಿಞಚಿ.gov.iಟಿ/gಣಣಛಿ ಅಥವಾ
ತಿತಿತಿ.gಣಣಛಿ.ಛಿo.iಟಿ ಗೆ ಸಂಪರ್ಕಿಸಬಹುದು ಎಂದು ಸರ್ಕಾರಿ ಉಪಕರಣಾಗಾರ
ಮತ್ತು ತರಬೇತಿ ಕೇಂದ್ರ ಪ್ರಾಂಶುಪಾಲರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.