ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ
ಮಂಡಳಿ, ಕರ್ನಾಟಕ ರಾಜ್ಯದ ಅಸಂಘಟಿತ ಕಾರ್ಮಿಕರ ಸಾಮಾಜಿಕ
ಭದ್ರತಾ ಮಂಡಳಿ ಹಾಗೂ ಇಲಾಖೆಯಲ್ಲಿ ಬಾಕಿ ಇರುವ ಎಲ್ಲಾ
ಅರ್ಜಿಗಳನ್ನು ಇತ್ಯರ್ಥ ಮಾಡಲು ಕಾರ್ಮಿಕ ಸಚಿವರ ನಿರ್ದೇಶನದ
ಮೇರೆಗೆ ದಾವಣಗೆರೆ, ಚನ್ನಗಿರಿ, ಹೊನ್ನಾಳಿ, ಹರಿಹರ ಮತ್ತು
ಜಗಳೂರಿನ ಕಾರ್ಮಿಕ ನಿರೀಕ್ಷಕರ ಕಛೇರಿಗಳಲ್ಲಿ ಕಾರ್ಮಿಕ ಅದಾಲತ್
ಪ್ರಾರಂಭಿಸಿದ್ದು, ಸೆ.16 ರವರೆಗೆ ಕಾರ್ಮಿಕ ಅದಾಲತ್
ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ
ಮಂಡಳಿ, ಕರ್ನಾಟಕ ರಾಜ್ಯದ ಅಸಂಘಟಿತ ಕಾರ್ಮಿಕರ ಸಾಮಾಜಿಕ
ಭದ್ರತಾ ಮಂಡಳಿ ಹಾಗೂ ಇಲಾಖೆಯಲ್ಲಿ ಬಾಕಿ ಇರುವ ಎಲ್ಲಾ
ಅರ್ಜಿಗಳನ್ನು ಇತ್ಯರ್ಥ ಮಾಡಲು ಕಡತ ವಿಲೇವಾರಿ ಕಾರ್ಯಕ್ರಮ
ಹಮ್ಮಿಕೊಂಡು ಕಾರ್ಮಿಕ ಅದಾಲತ್ ಮೂಲಕ ಕ್ರಮ
ವಹಿಸಲಾಗುವುದು.
ಜಿಲ್ಲೆಯ ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿ, ಕಾರ್ಮಿಕ
ಅಧಿಕಾರಿ, ದಾವಣಗೆರೆ, ಕಾರ್ಮಿಕ ನಿರೀಕ್ಷಕರು 1,2 ಮತ್ತು 3ನೇ ವೃತ್ತ
ದಾವಣಗೆರೆ, ಕಾರ್ಮಿಕ ನಿರೀಕ್ಷಕರು ಚನ್ನಗಿರಿ, ಹೊನ್ನಾಳಿ, ಹರಿಹರ
ಮತ್ತು ಜಗಳೂರು ಈ ಎಲ್ಲಾ ಕಛೇರಿಗಳಲ್ಲಿ ವಿವಿಧ ಕಾರ್ಮಿಕ
ಕಾಯ್ದೆಗಳಡಿ ಹಾಗೂ ವಿವಿಧ ಮಂಡಳಿಗಳ ಮೂಲಕ
ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಡಿ ಸ್ವೀಕೃತವಾಗಿ
ಇದುವರೆಗೆ ಇತ್ಯರ್ಥವಾಗದೆ ಬಾಕಿ ಉಳಿದಿರುವ ಪ್ರಕರಣಗಳನ್ನು
ಅಥವಾ ಕಡತಗಳನ್ನು ಹಾಗೂ ವಿವಿಧ ಯೋಜನೆಗಳಡಿ ಬಾಕಿ ಇರುವ
ಅರ್ಜಿಗಳನ್ನು ತ್ವರತಗತಿಯಲ್ಲಿ ವಿಲೇವಾರಿ ಮಾಡಲು ಸೆ. 16 ರವರೆಗೆ
ಕಾರ್ಮಿಕ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಮಿಕರು ಹಾಗೂ ಕಾರ್ಮಿಕ ಸಂಘಟನೆಗಳು, ಸಂಬಂಧಿಸಿದ
ಕಛೇರಿಗಳಿಗೆ ಅಗತ್ಯ ದಾಖಲೆಗಳೊಂದಿಗೆ ಖುದ್ದಾಗಿ ಹಾಜರಾಗಿ, ಬಾಕಿ
ಇರುವ ಕಡತಗಳನ್ನು ವಿಲೇವಾರಿ ಮಾಡಿಕೊಳ್ಳಲು ಇದರ
ಸದುಪಯೋಗ ಪಡೆದುಕೊಳ್ಳುವಂತೆ ಬಳ್ಳಾರಿ ವಿಭಾಗದ
ಸಹಾಯಕ ಕಾರ್ಮಿಕ ಆಯುಕ್ತರಾದ ಎಸ್.ಆರ್. ವೀಣಾ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.