ಗಂಡ ಹೆಂಡತಿ ಇಬ್ಬರೂ
ದುಡಿಯುತ್ತಿರುವುದರಿಂದ,
ಮನೆಯಲ್ಲಿರುವ ಹಿರಿಯರಿಗೆ, ಊಟ
ಉಪಚಾರಗಳನ್ನು, ಔಷಧಗಳನ್ನು
ನೀಡಿ, ಆರೈಕೆ ಮಾಡುವ ಮನೆಯ
ಸದಸ್ಯರೇ ಇಲ್ಲದೇ, ಅವರ ಪರಿಸ್ಥಿತಿ
ಬಿಗಡಾಯಿಸುತ್ತಿದೆ. ಅಂಥವರನ್ನ ನೋಡಿ
ನೋಡಿಕೊಳ್ಳಲು ಕೆಲವು ಆರೈಕೆ
ಕೇಂದ್ರಗಳನ್ನು ತೆರೆದು, ಅದರಲ್ಲಿ
ಅವರನ್ನ ಇಟ್ಟು, ವಾರಕ್ಕೊಮ್ಮೆಯಾದರೂ
ಅವರನ್ನು ಭೇಟಿ ಮಾಡಿ, ಅವರನ್ನು
ಮಾನಸಿಕವಾಗಿ ಉಲ್ಲಾಸಿತವಾಗಿರಿಸಬೇಕು ಎಂದು
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ
ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ
ನುಡಿದರು.

ಅವರು ನಗರದ ತಮಟಕಲ್ಲು
ರಸ್ತೆಯಲ್ಲಿರುವ ಸುಡುಗಾಡು ಸಿದ್ಧರ
ಕಾಲೊನಿಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ

ಸಮಿತಿ ಮತ್ತು ಮೆದೇಹಳ್ಳಿ ಗ್ರಾಮದ
ಜನರ ಸಹಯೋಗದೊಂದಿಗೆ ಆಯೋಜಿಸಿದ್ದ
“ಅಂತಾರಾಷ್ಟ್ತ್ರೀಯ ಹಿರಿಯ ನಾಗರಿಕರ
ದಿನಾಚರಣೆ” ಜನಜಾಗೃತಿ
ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನೆಗಳಲ್ಲಿ ಒಟ್ಟು ಕುಟುಂಬಗಳು
ಕಡಿಮೆಯಾಗುತ್ತಿರುವುದರಿಂದ,
ಹಿರಿಯರಿಗೆ ಭದ್ರತೆ ಕಡಿಮೆಯಾಗುತ್ತಿದೆ.
ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಿ,
ಮಕ್ಕಳು ದೂರದೂರಿಗೆ ಕೆಲಸಕ್ಕೆ
ಹೋಗುತ್ತಿರುವುದರಿಂದ, ಅವರ
ಆರೋಗ್ಯ ಪಾಲನೆ, ಪ್ರೀತಿ, ಪ್ರೇಮ, ವಾತ್ಸಲ್ಯ,
ಎಲ್ಲವೂ ದೂರವಾಗಿ ಮಾನಸಿಕ ಖಿನ್ನತೆಗೆ
ಒಳಗಾಗುವ ಸಂಭವವಿರುತ್ತದೆ. ಹೊಸ
ನಾಗರಿಕತೆಯಲ್ಲಿ, ಒಟ್ಟು ಕುಟುಂಬ
ಇರುವುದೇ ಕಷ್ಟಕರವಾಗಿದೆ, ಆದಷ್ಟು
ಬೇಗ ನಾವು ಹಿರಿಯರ ಬಗ್ಗೆ ಕಾಳಜಿವಹಿಸಿ,
ಕುಟುಂಬದಲ್ಲಿ ಹೊಂದಾಣಿಕೆ ಮಾಡಿಕೊಂಡು
ಬದುಕುವುದನ್ನು ಕಲಿಯಬೇಕಾಗಿದೆ
ಎಂದರು.
ಹಿರಿಯರು ಮಕ್ಕಳಿಗಾಗಿ ತಮ್ಮ ಎಲ್ಲಾ
ಜೀವನವನ್ನೇ ತ್ಯಾಗ ಮಾಡಿ, ಆಸ್ತಿ ಅಡವು
ಮಾಡಿ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ,
ತಮಗೆ ಆಸರೆಯಾಗುತ್ತಾರೆ ಎನ್ನುವ
ಸಂದರ್ಭದಲ್ಲಿ, ಮಕ್ಕಳು ತಮ್ಮಿಂದ

ಕೈಜಾರಿ ಹೋಗುತ್ತಿರುವುದರಿಂದ,
ಹಿರಿಯರಿಗೆ ನೋವಿನ ಸಂಗತಿಯಾಗಿದೆ.
ಹಾಗಾಗಿ ಮಕ್ಕಳು ತಮ್ಮ ಹಿರಿಯರ ಬಗ್ಗೆ,
ಸ್ವಲ್ಪವಾದರೂ ತ್ಯಾಗ ಮನೋಭಾವನೆ
ಹೊಂದಿ, ಅವರನ್ನ ಕೊನೆಯ ಗಳಿಗೆಯಲ್ಲಿ
ಚೆನ್ನಾಗಿ ನೋಡಿಕೊಳ್ಳುವುದ
ಕಲಿಯಬೇಕಾಗಿದೆ ಎಂದರು.
ವಿಶ್ವ ಹಿರಿಯ ನಾಗರಿಕರ ದಿನಾಚರಣೆಗಳು,
ಇಂತಹ ನೆನಪುಗಳನ್ನ ಹೊರತಂದು,
ಮೊಮ್ಮಕ್ಕಳ ಜತೆ ಆಟ ಆಡಿಸಿ, ಹಿರಿಯರು ತಮ್ಮ
ನೋವುಗಳನ್ನ ಮರೆಯುವಂತೆ
ಮಾಡುತ್ತದೆ. ಅದೇ ರೀತಿ, ಮೊಮ್ಮಕ್ಕಳು
ಸಹ. ಹಿರಿಯರ ಜೊತೆ ಬೆರೆತು, ಅವರ
ಅನುಭವಗಳನ್ನು ಪಡೆಯಲು, ಕಥೆ
ಕೇಳಿಸಿಕೊಳ್ಳಲು ಅವಕಾಶ
ಮಾಡಿಕೊಡುತ್ತವೆ. ವಯಸ್ಸಾದವರನ್ನ
ತಿರಸ್ಕರದಿಂದ ನೋಡುವುದು ಸಹ,
ಸಮಾಜದ ಸುಸ್ಥಿತಿಗೆ ಗಂಡಾಂತಕಾರಿ.
ಹಿರಿಯರನ್ನು ಗೌರವಿಸಿ, ಮಕ್ಕಳು
ಮುಂದಿನ ಜೀವನವನ್ನು ರೂಪಿಸಿಕೊಳ್ಳಲು
ಅನುಕೂಲಕರವಾಗುವುದು. ಹಾಗಾಗಿ
ಪ್ರತಿ ಹಿರಿಯ ನಾಗರಿಕರಿಗೆÀ, ಗೌರವ
ಕೊಡುವಂತಹ ಸಂಸ್ಕೃತಿಯನ್ನು ನಾವು
ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸಣ್ಣ ಮಕ್ಕಳು
ಹಿರಿಯರ ಮುಂದೆ ನೃತ್ಯವನ್ನು ಮಾಡಿ,
ಹಿರಿಯರ ಮನಸ್ಸನ್ನು
ಉಲ್ಲಾಸಗೊಳಿಸಿದರು ಹಾಗೂ ಮಕ್ಕಳಿಗೆ
ಹಿರಿಯರ ಕೈಯಿಂದ ಲೇಖನ
ಸಾಮಗ್ರಿಗಳನ್ನು ವಿತರಿಸಲಾಯಿತು .

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಎಚ್. ಎಸ್.
ಪ್ರೇರಣಾ ಎಚ್. ಎಸ್. ರಚನಾ, ಸವಿತ,
ಗೌರಮ್ಮ, ಸಿಂಹಾದ್ರಿ, ಶಿವಕುಮಾರ, ರವಿ,
ರಕ್ಷಿತ ಶಿವಕುಮಾರ ಹಾಜರಿದ್ದರು.

Leave a Reply

Your email address will not be published. Required fields are marked *