75ನೇ ಭಾರತ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಾವಣಗೆರೆ ಹಾಗೂ ಚಿರಂತನ ಸಂಯುಕ್ತಾಶ್ರಯದಲ್ಲಿ 21/8/21 ರಂದು ನಗರದ ಸದ್ಯೋಜಾತ ಶಿವಾಚಾರ್ಯ ಹಿರೇಮಠದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು, ಭಾರತೀಯ ಸೇನೆಯಲ್ಲಿ 28 ವರ್ಷ ಸೇವೆಯನ್ನು ಸಲ್ಲಿಸಿರುವ ಎಲೆಬೇತೂರನಾ ಶ್ರೀ N M ಬಸಪ್ಪರವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಅವರ ಭಾರತೀಯ ಸೇನೆಯ ಅನುಭವಗಳು, ಸೈನಿಕನಾಗಿ ಅವರು ಎದುರಿಸಿದ ಸವಾಲುಗಳು ಹಾಗೂ ಅವರ ಸೇನಾ ಜೀವನದ ಮರೆಯಲಾಗದ ಘಟನೆಗಳನ್ನು ಸಂದರ್ಶನದ ಮುಖಾಂತರ ಎಳೆ ಎಳೆಯಾಗಿ ಬಿಚ್ಚಿಡಲಾಯಿತು, ಒಬ್ಬ ಯೋಧನ ಜೀವನದ ಚಿತ್ರಣ ಕಾರ್ಯಕ್ರಮವನ್ನು ವೀಕ್ಷಿಸಿದ ಎಲ್ಲರ ಕಣ್ಣು ಕಟ್ಟುವಂತೆ ಸಂದರ್ಶಕಿ ದೀಪ ರಾವ್ ಪ್ರಶ್ನೆಗಳನ್ನು ಕೇಳುತ್ತಾ ಹೋದರು, ಕಾರ್ಯಕ್ರಮಕ್ಕೆ ಆಗಮಿಸಿದ್ದ ಇನ್ನೋರ್ವ ಅತಿಥಿ ದಿ \ ಲೆಫ್ಟಿನೆಂಟ್ ಜನರಲ್ ಸಂದೇಶ್ ಕುಮಾರ್ ಅವರ ತಾಯಿ ಹಾಗೂ

ಎಜು ಏಶಿಯಾ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀಮತಿ ನೀಲಾ ಕುಮಾರಿಯವರನ್ನು ಕಾರ್ಯಕ್ರಮದಲ್ಲಿ ಸಂದರ್ಶಿಸಲಾಯಿತು, ಹೆತ್ತಮಗನನ್ನು ದೇಶ ಸೇವೆಗಾಗಿ ಕಳುಹಿಸಲು ಅವರು ಹೇಗೆ ಮನಸ್ಸು ಮಾಡಿದರು? ಮಗನ ಸೇನಾ ಜೀವನದ ಚಿತ್ರಣ ಹಾಗೂ ಮುಖ್ಯವಾಗಿ ಸೇನೆಯ ಶಿಸ್ತಿನ ಜೀವನವನ್ನು ಶ್ರೀಮತಿ ನೀಲ ಕುಮಾರಿಯವರು ಮನಮುಟ್ಟುವಂತೆ ಹೇಳಿದಾಗ ಅಲ್ಲಿದ್ದ ವೀಕ್ಷಕರ ಕಣ್ಣಂಚಿನಲ್ಲಿ ಭಾವೋದ್ವೇಗದ ಆನಂದ ಭಾಷ್ಪ ಒಬ್ಬ ಶಿಕ್ಷಣ ತಜ್ಞೆಯಾಗಿ ಮಕ್ಕಳಿಗೆ ಉಪಯುಕ್ತವಾದ ವಿಷಯಗಳನ್ನು ಅವರು ತಿಳಿಸಿದರು. ಚಿರಂತನ ಪರವಾಗಿ ಅವರಿಗೆ ಆತ್ಮೀಯ ಸನ್ಮಾನವನ್ನು ಮಾಡಲಾಯಿತು.

ನಂತರ ಚಿರಂತನ ಕಲಾವಿದೆಯರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮಗಳು ನಡೆದವು ತ್ರಿವರ್ಣ ಪೋಷಾಕಿನಲ್ಲಿ ‘ವಂದೇ ಮಾತರಂ’ ನೃತ್ಯ ಲಘು ಶಾಸ್ತ್ರೀಯ ಶೈಲಿಯಲ್ಲಿ ಎಲ್ಲರ ಗಮನಸೆಳೆಯಿತು, ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮ ಬಹಳ ಸುಂದರವಾಗಿ ಹಾಗೂ ಅರ್ಥಗರ್ಭಿತವಾಗಿ ಮೂಡಿಬಂದಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ರವಿಚಂದ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು ಚಿರಂತನ ದ ದೀಪ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಮಾಧವ ಪ್ರಸಾದ್ ಪದಕಿ ಶ್ರೀಮತಿ ಅಲಕಾನಂದ ಎಂ ಎಸ್ ಹಾಗೂ ವೆಂಕಟೇಶ್ ಹಾಜರಿದ್ದರು.

Leave a Reply

Your email address will not be published. Required fields are marked *