ಹೊನ್ನಾಳಿ : ಕೊರೊನಾ ಮೂರನೇ ಅಲೆ ಮಕ್ಕಳಿಗೆ ಬರತ್ತದೆಂದು ಆರೋಗ್ಯ ತಜ್ಞರು ಹೇಳುತ್ತಿದ್ದು, ಮಕ್ಕಳ ಆರೋಗ್ಯ ತಪಾಸಣೆ ಮಾಡಲು ಸರ್ಕಾರ ಆರೋಗ್ಯ ನಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪೋಷಕರು ಮಕ್ಕಳನ್ನು ಕರೆ ತಂದು ಆರೋಗ್ಯ ತಪಾಸಣೆ ಮಾಡಿಸುವಂತೆ ಶಾಸಕ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.
ನಗರದ ಪೇಟೆ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ನಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ತಜ್ಞರು ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಪ್ರಬಾವ ಬೀರುತ್ತದೆಂದು ಹೇಳುತ್ತಿದ್ದು ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೊನ್ನೆಯಿಂದ ಹದಿನೆಂಟು ವರ್ಷದ ಮಕ್ಕಳಿಗೆ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ 58 ಸಾವಿರಕ್ಕೂ ಹೆಚ್ಚು ಮಕ್ಕಳಿದ್ದು ಪೋಕಷರು ತಮ್ಮ ಮಕ್ಕಳನ್ನು ಕರೆತಂದು ಆರೋಗ್ಯ ತಪಾಸಣೆ ಮಾಡಿಸುವಂತೆ ಕರೆ ನೀಡಿದ ಶಾಸಕರು, ಆರೋಗ್ಯ ನಂದನ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಜೀ, ರಾಜ್ಯದಲ್ಲಿ ಮುಖ್ಯಮಂತ್ರಿಗಳು ಮೊದಲನೇ ಹಾಗೂ ಎರಡನೇ ಅಲೆಯನ್ನು ಸಮರ್ಥವಾಗಿ ನಿಬಾಯಿಸಿದ್ದಾರೆ ಎಂದ ಶಾಸಕರು, ಮೂರನೇ ಅಲೆ ಬರುತ್ತದೆಂದು ಹೇಳುತ್ತಿದ್ದು ಈಗಾಗಲೇ ದೇಶದ ಉದ್ದಗಲಕ್ಕೂ ಮೂರನೇ ಅಲೆಗೆ ಸಿದ್ದತೆ ಮಾಡಿಕೊಂಡಿದ್ದು ಇದಕ್ಕೆ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕು ಹೊರತಾಗಿಲ್ಲಾ ಎಂದರು
.
ಈಗಾಗಲೇ ಅವಳಿ ತಾಲೂಕಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಲಸಿಕೆಯನ್ನು ಅವಳಿ ತಾಲೂಕಿನಲ್ಲಿ ನೀಡಿದ್ದು ಇದು ಯಶಸ್ವಿಯಾಗಲು ಆರೋಗ್ಯ ಇಲಾಖೆ ಸಿಬ್ಬಂದಿಗಳು, ಗ್ರಾಮಪಂಚಾಯಿತಿಯ ಸದಸ್ಯರು ಕಾರಣ ಎಂದರು.
ಲಸಿಕೋತ್ಸದಲ್ಲಿ ಪಾಲ್ಗೊಂಡ ಶಾಸಕರು : ತಾಲೂಕಿನ ನೆಲವೊನ್ನೆ,ನೆಲವೊನ್ನೆ ತಾಂಡ,ನೆಲವೊನ್ನೆ ಆಂಧ್ರಕ್ಯಾಂಪ್,ಕುಳಘಟ್ಟೆ,ಕ್ಯಾಸಿನಕೆರೆ,ಹುಣಸಘಟ್ಟ ಗ್ರಾಮಗಳಿಗೆ 1100 ಲಸಿಕೆಗಳನ್ನು ನೀಡಲಾಗಿದ್ದು ಹಳ್ಳಿಹಳ್ಳಿಗಳಿಗೂ ಭೇಟಿ ನೀಡಿದ ಶಾಸಕರು ಜನರಿಗೆ ಕೊರೊನಾ ಜಾಗೃತಿ ಮೂಡಿಸಿ ಲಸಿಕೆಯ ಮಹತ್ವ ಸಾರಿಸಿದರು. ರಾಜ್ಯದಲ್ಲಿ ಹಳ್ಳಿಹಳ್ಳಿಗಳಿಗೂ ಲಸಿಕೆ ನೀಡಿದ ತಾಲೂಕು ಯಾವುದಾದರೂ ಇದ್ದರೇ ಅದು ಹೊನ್ನಾಳಿ ನ್ಯಾಮತಿ ಅವಳಿ ತಾಲೂಕು ಮಾತ್ರ. ಇದು ಯಶಸ್ವಿಯಾಗಲು ಆಶಾ ಕಾರ್ಯಕರ್ತರು ವೈದ್ಯರು ದಾದಿಯರು,ಗ್ರಾಮಪಂಚಾಯಿತಿ ಸದಸ್ಯರೇ ಕಾರಣ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಕೆ.ವಿ.ಶ್ರೀಧರ್, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಸುರೇಂದ್ರ ನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಕೆಂಚಪ್ಪ, ಇಓ ರಾಮಾಬೋವಿ,ಪುರಸಭೆ ಮುಖ್ಯಾಧಿಕಾರಿ ಪಂಪಾಪತಿ ಸೇರಿದಂತೆ ವೈದ್ಯರು,ದಾದಿಯರು ಸೇರಿದಂತೆ ಮತ್ತೀತರರಿದ್ದರು.