1. ಕೇಂದ್ರ ಸರ್ಕಾರದ ನೂತನ ಸಚಿವರು ರಾಜ್ಯವ್ಯಾಪ್ತಿ ಜನಾಶೀರ್ವಾದ ಯಾತ್ರೆ ಹೆಸರಿನಲ್ಲಿ ಕೋವಿಡ್ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಇದರ ಬಗ್ಗೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ.
  2. ರಾಜ್ಯ ಪೊಲೀಸ್ ಇಲಾಖೆ ಆಡಳಿತ ಪಕ್ಷದವರು ಕಾನೂನು ಉಲ್ಲಂಘಿಸಿದ್ದರು ಅವರ ವಿರುದ್ಧ ಕ್ರಮ ಕೈಗೊಳ್ಳದೇ ವಿರೋಧ ಪಕ್ಷಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಇಬ್ಬಗೆ ನೀತಿ ಅನುಸರಿಸುತ್ತಿದೆ. ಇದು ರಾಜ್ಯ ಪೊಲೀಸ್ ಇಲಾಖೆಗೆ ಶೋಭೆ ತರುವುದಿಲ್ಲ.
    ಬಿಜೆಪಿ ರಾಜ್ಯಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್‌, ಗೃಹ ಸಚಿವರಾದ ಅರಗ ಜ್ಞಾನೇಂದ್ರ ಬಹಿರಂಗವಾಗಿ ಯಾದಗಿರಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಗೃಹ ಸಚಿವರಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಕಾಳಜಿ ವಹಿಸಬೇಕಾದವರು ಇದು ನಮ್ಮ ಸಂಸ್ಕೃತಿ ಎಂದು ಹೇಳಿಕೆ ನೀಡಿರುವುದು ಅತ್ಯಂತ ವಿಪರ್ಯಾಸ ಇವರಿಂದ ಕಾನೂನು ಸುವ್ಯವಸ್ಥೆ ಕಾಪಾಡುವುದು ಅಸಾಧ್ಯ.
  3. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡದೇ ತಾರತಮ್ಯ ಅನುಸರಿಸುತ್ತಿದೆ. ಮಾಜಿ ಸಚಿವರಾದ ವಿನಯ್ ಕುಲಕರ್ಣಿರವರನ್ನು ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸ್ವಾಗತಿಸಿದ ವೇಳೆ ಅವರ ಮೇಲೆ ಕೋವಿಡ್ ನಿಯಮ ಪಾಲಸಿಲ್ಲ ಎಂದು ನೂರಾರು ಕಾರ್ಯಕರ್ತರ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ ಇದು ಪೊಲೀಸ್ ಇಲಾಖೆಯ ಪಕ್ಷಪಾತ ನೀತಿಯನ್ನು ಎತ್ತಿ ತೋರುತ್ತದೆ.
  1. ಯಾದಗಿರಿಯಲ್ಲಿ ಮಾಜಿ ಸಚಿವರಾದ ಬಾಬುರಾವ್ ಚಿಂಚನಸೂರ್ ಬಂದೂಕು ಹಿಡಿದು ರಾಲಿ ಸಂಘಟಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದರೂ ಅವರ ವಿರುದ್ಧ ಪ್ರಕರಣ ದಾಖಲಿಸಿಲ್ಲ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಈ ಪ್ರಕರಣವನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ವಿರುದ್ಧ ಕ್ರಮವನ್ನು ಕೈಗೊಂಡಿರುವುದಿಲ್ಲ.
  2. ಕಾಂಗ್ರೆಸ್ ಪಕ್ಷದ ನಾಯಕರು ಸೆರೆಮನೆ ವಾಸದಿಂದ ಬಂದವರಿಗೆ ಸ್ವಾಗತವನ್ನು ಕೋರುತ್ತಿರುವುದು ಅಪಹಾಸ್ಯ ಎಂದು ಬಿಜೆಪಿ ಟೀಕಿಸಿದೆ. ಆದರೆ ಕೇಂದ್ರದ ಗೃಹ ಸಚಿವರಾದ ಅಮೀತ್ ಶಾ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಇನ್ನೂ ಅನೇಕ ಬಿಜೆಪಿ ಸಚಿವರು, ಶಾಸಕರು ಅರಮನೆ ವಾಸದಿಂದ ಬಂದು ಅಧಿಕಾರ ನಡೆಸುತ್ತಿದ್ದಾರೆಯೇ? ಎಂಬುದನ್ನು ಬಿಜೆಪಿಯೇ ಜನತೆಗೆ ಬಹಿರಂಗ ಪಡಿಸಬೇಕು.
  3. ಕೇಂದ್ರ ಸಚಿವರು ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ತೋರದೇ ಕೇವಲ ಅಧಿಕಾರ ಪಡೆದು ಜನಗಳ ಮುಂದೆ ಜನಾಶೀರ್ವಾದ ಪಡೆಯಲು ಮುಂದಾಗಿರುವುದು ದುರಂತವೇ ಸರಿ. ಹಬ್ಬ, ಜಾತ್ರೆ, ಜಾಥಾಕ್ಕೆ ನಿರ್ಬಂದ ಏರಿರುವ ಈ ಸಮಯದಲ್ಲಿ ಯಾವ ಆಧಾರದಲ್ಲಿ ಜನಾಶಿರ್ವಾದ ಯಾತ್ರೆಗೆ ಅನುಮತಿ ನೀಡಲಾಗಿದೆ? ನಿರಂತರವಾಗಿ ಬೆಲೆ ಏರಿಕೆ ತಡೆಯಲು ವಿಫಲವಾಗಿರುವ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಬೆಲೆ ಏರಿಕೆಗೆ ಕಡಿವಾಣ ಹಾಕಲು ಮನವಿ ಸಲ್ಲಿಸುವ ಶಕ್ತಿಯನ್ನೇ ಕೇಂದ್ರ ಸಚಿವರು ಹಾಗೂ ಬಿಜೆಪಿ ಸಂಸದರು ಕಳೆದು ಕೊಂಡಿದ್ದಾರೆ.
    ಕುಡಿಯುವ ನೀರಿನ ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರದ ಮೇಲೆ ಬಿಜೆಪಿಯ ಯಾವ ಸಚಿವರು ಮತ್ತು ಸಂಸದರು ಪ್ರಯತ್ನಿಸುತ್ತಿಲ್ಲ. ಕೇವಲ ಜನಾಶೀರ್ವಾದ ಯಾತ್ರೆಯಲ್ಲೇ ಮುಳುಗಿ ಹೋಗಿದ್ದಾರೆ.
  4. ಕೊರೋನ ಸಂಕಷ್ಟದ ವೇಳೆ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಬಿಜೆಪಿಯ ಜನ ಪ್ರತಿನಿಧಿಗಳು ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯದ ಸಮಸ್ಯೆಗಳನ್ನು ತಿಳಿಸಿ ಪರಿಹಾರ ದೊರಕಿಸಿಕೊಡಲು ಸಂಪೂರ್ಣ ವಿಫಲವಾಗಿದ್ದರೆ ಇಂತಹವರು ಜನಾಶೀರ್ವಾದ ನಡೆಸುತ್ತಿದ್ದಾರೆ. ಇದು ಜನಾಶೀರ್ವಾದವಲ್ಲ ಜನ ವಿರೋಧಿ ಯಾತ್ರೆಯಾಗಿದೆ.
  5. ರಾಜ್ಯದಲ್ಲಿ ಪೊಲೀಸ್ ಇಲಾಖೆ ಬಿಜೆಪಿ ಪಕ್ಷದ ಪರ ಕಾರ್ಯ ನಿರ್ವಹಿಸುತ್ತಿರುವುದು ಎತ್ತಿ ತೋರುತ್ತದೆ. ಬಿಜೆಪಿ ಕಾರ್ಯಕರ್ತರ ಹಾಗೂ ಸಚಿವರ ಕ್ಯಾಲಿಗಳಿಗೆ ಯಾವ ಆಧಾರದ ಮೇಲೆ ಅನುಮತಿಯನ್ನು ನೀಡಲಾಗಿದೆ ಹಾಗೂ ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆಯ ವೇಳೆ ಬಿಜೆಪಿಯವರು ಕೋವೀಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೇ ಹೋದರೆ ಪೊಲೀಸ್ ಇಲಾಖೆಯ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಜಂಟಿ ಪತ್ರಿಕಾಗೊಷ್ಟಿಯಲ್ಲಿ ಆಗ್ರಹಪಡಿಸಿದರು. ಈ ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ಎಸ್. ಮನೋಹರ್, ಎಂ.ಎ. ಸಲೀಂ, ವಿ.ಶಂಕರ್‌, ಶಫೀಉಲ್ಲಾ ಹಾಜರಿದ್ದರು.

Leave a Reply

Your email address will not be published. Required fields are marked *