ಹರಪನಹಳ್ಳಿಯ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಪ್ರಸಕ್ತ ಸಾಲಿನ
ಶೈಕ್ಷಣಿಕ ವರ್ಷದ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ,
ಪಿಯುಸಿ, ಐಟಿಐ ಪಾಸ್ ಅಥವಾ ಫೇಲಾದ, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ
ಆಹ್ವಾನಿಸಲಾಗಿದೆ.
ಅರ್ಹ ವಿದ್ಯಾರ್ಥಿಗಳು ಅಗತ್ಯ ಎಲ್ಲಾ ಮೂಲ ದಾಖಲೆಗಳನ್ನು
ತಂದು ನಿಗದಿಪಡಿಸಿದ ಶುಲ್ಕದೊಂದಿಗೆ ಸೀಟ್ ಮ್ಯಾಟ್ರಿಕ್ಸ್ ಅನುಸಾರ ಆ.
31ರೊಳಗೆ ಪ್ರವೇಶ ಪಡೆಯಬಹುದಾಗಿದೆ. ಪ್ರವೇಶವು
ಯಾವುದೇ ಮೆರಿಟ್ ಅನುಗುಣವಾಗಿ ಅಥವಾ ಆನ್ಲೈನ್ ಕೌನ್ಸ್ಲಿಂಗ್
ಮುಖಾಂತರ ನಡೆಯದೇ, ಮೊದಲು ಬಂದವರಿಗೆ ಮೊದಲ
ಆದ್ಯತೆಯಂತೆ ಪ್ರವೇಶ ನಡೆಯುತ್ತದೆ.
ಡಿಪ್ಲೋಮಾ ಕೋರ್ಸ್ಗಳಾದ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್
ಇಂಜಿನಿಯರಿಂಗ್- 63 ಸೀಟ್ಗಳು, ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ –
63 ಸೀಟ್ಗಳು, ಮೆಕ್ಯಾನಿಕಲ್ ಇಂಜಿನಿಯರಿಂಗ್- 63 ಸೀಟ್ಗಳು, ಸಿವಿಲ್
ಇಂಜಿನಿಯರಿಂಗ್- 63 ಸೀಟ್ಗಳು ಲಭ್ಯವಿದೆ.
ಎಸ್.ಎಸ್.ಎಲ್.ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ, ವ್ಯಾಸಂಗ
ಪ್ರಮಾಣ ಪತ್ರ, ಕನ್ನಡ ಮಾಧ್ಯಮ ಪತ್ರ, (ಲಭ್ಯವಿದ್ದಲ್ಲಿ),
ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ (ಲಭ್ಯವಿದ್ದಲ್ಲಿ), ಹೈದ್ರಾಬಾದ್
ಕರ್ನಾಟಕ ಪ್ರಮಾಣ ಪತ್ರ (ಲಭ್ಯವಿದ್ದಲ್ಲಿ) ಅಗತ್ಯ ದಾಖಲೆಗಳೊಂದಿಗೆ
ಅರ್ಜಿ ಸಲ್ಲಿಸಬೇಕು.
ಅರ್ಹ ವಿದ್ಯಾರ್ಥಿಗಳು ತಡಮಾಡದೇ ಪ್ರವೇಶ
ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ
ಗಂಗಾಂಭೆ, ಎಸ್.ಬಿ. ಪ್ರಾಚಾರ್ಯರು- 9916552149, ರವಿಕುಮಾರ್ ಎಸ್.ಎಸ್.
ರಿಜಿಸ್ಟ್ರಾರ್-9686316845, ಕಚೇರಿ ದೂ.ಸಂ. 9448523484 ಹಾಗೂ ಇಲಾಖೆಯ
ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ಪಡೆದುಕೊಳ್ಳಬಹುದು ಎಂದು
ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.