ಸಮೀಕ್ಷೆ
ಬೆಳೆ ಸಮೀಕ್ಷೆ ಯೊಜನೆಯು ಸರ್ಕಾರದ ಮಹತ್ವಾಂಕ್ಷಿ
ಯೋಜನೆಯಾಗಿದ್ದು, ರೈತರು ಬೆಳೆದ ಬೆಳೆಗಳಿಗೆ ಸರ್ಕಾರದ
ಯೋಜನೆಗಳನ್ನು ಪಡೆಯಲು ಬೆಳೆ ಸಮೀಕ್ಷೆ ಅಡಿಯಲ್ಲಿ ನಿಖರವಾಗಿ
ಬೆಳೆಯನ್ನು ನಮೂದಿಸುವುದು ಅಗತ್ಯವಾಗಿದ್ದು, ರೈತರ
ಮುಂಗಾರು ಬೆಳೆ ಸಮೀಕ್ಷೆ 2020-2021 (ಞhಚಿಡಿiಜಿ seಚಿsoಟಿ ಜಿಚಿಡಿmeಡಿ ಛಿಡಿoಠಿ suಡಿveಥಿ
ಚಿಠಿಠಿ 2021-22) ಆ್ಯಪ್‍ನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್‍ಲೋಡ್
ಮಾಡಿಕೊಳ್ಳಬಹುದು.
ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ಕೃಷಿ, ರೇಷ್ಮೆ,
ತೋಟಗಾರಿಕಾ ಬೆಳೆಗಳ ವಿಸ್ತೀರ್ಣ ಎಣಿಕೆ ಕಾರ್ಯಗಳಲ್ಲಿ, ಬೆಳೆ ವಿಮೆ
ಯೋಜನೆಯ ಸರ್ವೆ ನಂಬರ್‍ವಾರು ಬೆಳೆ ಪರಿಶೀಲನೆ ಹಾಗೂ ಬೆಳೆ
ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಸರ್ವೆ ನಂಬರ್
ಆಯ್ಕೆ, ಕನಿಷ್ಠ ಬೆಂಬಲ ಬೆಲೆ ನಿಗದಿ, ಅರ್ಹ ಫಲಾನುಭವಿಗಳನ್ನು
ಗುರುತಿಸಲು, ಆರ್.ಟಿ.ಸಿ.ಯಲ್ಲಿ ಬೆಳೆ ವಿವರಗಳ ದಾಖಲು, ಎನ್.ಡಿ.ಆರ್.ಎಫ್
ಅಡಿಯಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಹಾನಿಗೊಳಗಾದ
ಬೆಳೆಯ ವಿಸ್ತೀರ್ಣದ ವಿವರ ಹಾಗೂ ಅರ್ಹ ಫಲಾನುಭವಿಗಳ ಪಟ್ಟಿ
ತಯಾರಿಸುವ ಸಂದರ್ಭ ಸೇರಿದಂತೆ ವಿವಿಧ ಕಾರ್ಯಗಳಿಗೆ ಬೆಳೆ
ಸಮೀಕ್ಷೆಯ ಮಾಹಿತಿಯು ಅತ್ಯಗತ್ಯವಾಗಿರುತ್ತದೆ. ರೈತರು
ತಪ್ಪದೇ ತಮ್ಮ ಜಮೀನಿನಲ್ಲಿರುವ ಕೃಷಿ, ತೋಟಗಾರಿಕೆ, ಅರಣ್ಯ,
ರೇಷ್ಮೆ ಇತರೆ ಬೆಳೆಗಳ ವಿವರಗಳನ್ನು ದಾಖಲಿಸಬಹುದಾಗಿದೆ.
ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ವಿವರಗಳನ್ನು ರೈತರೇ
ಖುದ್ದಾಗಿ ಅಥವಾ ಖಾಸಗಿ ನಿವಾಸಿಗಳ ಸಹಾಯ ಪಡೆದು ಬೆಳೆ ಸಮೀಕ್ಷೆ
ಮಾಡುವಂತೆ ಸೂಚನೆ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಕೃಷಿ
ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ
ಲೆಕ್ಕಾಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿಕಾರಿಗಳು, ರೇಷ್ಮೆ
ಇಲಾಖೆ ಅಧಿಕಾರಿಗಳನ್ನು ಸಂರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ
ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.