ಹೊನ್ನಾಳಿ :ಆಗಸ್ಟ್ 23 ಎಂ ಪಿ ರೇಣುಕಾಚಾರ್ಯ ಎಕ್ಸ್ ಎಮ್ಮೆಲ್ಲೆ ಗೆ ಸವಾಲ್
ಎಂ ಪಿ ರೇಣುಕಾಚಾರ್ಯ ಸಾಗುವಾನಿ ನಾಟಾವನ್ನು ಅಕ್ರಮವಾಗಿ ಎಪಿಎಂಸಿ ಗೋದಾಮುಗಳಲ್ಲಿ ದಾಸ್ತಾನಿರಿಸುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಕೇಸು ನೋಂದಾಯಿಸಿರುವ ಎಕ್ಸ್ ಎಮ್ಮೆಲ್ಲೆಯವರ ವಿರುದ್ಧ ಗುಡುಗಿದ್ದಾರೆ ತಾಕತ್ತಿದ್ದರೆ ಅಕ್ರಮ ನಾಟ ಸಾಗೋನಿ ಎಂದು ದಾಖಲೆ ಇದ್ದರೆ ತೋರಿಸಲಿ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ನಾನು ದಾಖಲೆ ಸಮೇತವಾಗಿ ಕಾಂಗ್ರೆಸ್ ಮುಖಂಡರಾದ ಈಶ್ವರಪ್ಪ ಗೌಡ ಗೌಡರ 20 ಲಕ್ಷ ಮೌಲ್ಯದ 55 ಮರಗಳನ್ನು ಖರೀದಿ ಮಾಡಿ ಸಾಮಿಲಿ ನಲ್ಲಿ ಲೈಸೆನ್ಸ್ ಪಡೆದುಕೊಂಡು ಮರಗ ಳನ್ನು ಕೊರೆಸಿ ಬಿಸಿಲಿನಲ್ಲಿ ಇಡಬಾರದೆಂದು ಎಪಿಎಂಸಿ ಗೋದಾಮಿನಲ್ಲಿ ಇರಿಸಿದ್ದೇನೆ ಇದಕ್ಕೆ ದಾಖಲೆ ಇದೆ ಸುಳ್ಳು ಆರೋಪ ಮಾಡುವ ಎಕ್ಸ್ ಎಮ್ಮೆಲ್ಲೆಯವರು ಮಠಕ್ಕೆ ಬಂದು ಪ್ರಮಾಣ ಮಾಡಲಿ ನಾನೂ ಬರುತ್ತೇನೆ ಇಲ್ಲವಾದರೆ ಅವರ ಮನೆದೇವರಾದ ಅಥವಾ ಬೆನಕೇಶ್ವರನ ದೇವಸ್ಥಾನಕ್ಕೆ ಬಂದರೆ ನಾನು ಬರುತ್ತೇನೆ ಅವರೂ ಬರಲಿ ಎಲ್ಲಿಗೆ ಪ್ರಮಾಣ ಮಾಡಲು ಕರೆದರೂ ನಾನು ಪ್ರಮಾಣ ಮಾಡುತ್ತೇನೆ ಅವರು ಬಂದು ಪ್ರಮಾಣ ಮಾಡಲಿ ಅವರು ಸಹ ಬಹಿರಂಗವಾಗಿ ಸಾರ್ವ ಸಾರ್ವಜನಿಕರ ಮುಂದೆ ಪ್ರೆಸ್ ಮೀಟ್ ಮಾಡಲಿ ನಾನೂ ಸಹ ಬಹಿರಂಗವಾಗಿ ಸಾರ್ವಜನಿಕರ ಮುಂದೆ ಕರೆದರೆ ನಾನು ಬಹಿರಂಗವಾಗಿ ಪ್ರೆಸ್ ಮೀಟ್ ಮಾಡಲು ಸಿದ್ಧನಿದ್ದೇನೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಸಾಕ್ಷಿ ಆಧಾರವನ್ನಿಟ್ಟುಕೊಂಡು ಆರೋಪ ಮಾಡಬೇಕು ಕೇಸ್ ಮಾಡಬೇಕು ಇಲ್ಲವಾದಲ್ಲಿ ದಿಢೀರನೆ ಎಮ್ಮೆಲ್ಲೆಯಾಗುವ ಕನಸು ದೂರವಾಗುತ್ತದೆ ಎಂದು ಎಚ್ಚರಿಸಿದರು ನನ್ನ ಮೇಲೆ ಆರೋಪ ಮಾಡಲು ಯಾವುದೇ ಕಾರಣಗಳು ಸಿಕ್ಕಿಲ್ಲ ಸುಖಾಸುಮ್ಮನೆ ಆರೋಪಗಳನ್ನು ಮಾಡುತ್ತಾ ಕಾಲಹರಣ ಮಾಡುವುದು ಹಾಗೆ ಕರೋನ ಸಂದರ್ಭದಲ್ಲಿ ಮನೆಯಲ್ಲಿ ಕೂತುಕೊಂಡು ಈಗ ಹಳ್ಳಿ ಹಳ್ಳಿಗೆ ಹೋಗಿ ಸತ್ತವರ ಮನೆಗೆ ಹೋಗಿ ಫೋಟೋಗೆ ಹಾರ ಹಾಕಿ ಬಂದರೆ ಏನು ಪ್ರಯೋಜನ ಸಾಯುವ ಮೊದಲು ಜನಗಳ ಯೋಗಕ್ಷೇಮ ವಿಚಾರಿಸಿ ಅವರಿಗೆ ಆದಂತ ತೊಂದರೆಗಳಿಗೆ ಸ್ಪಂದಿಸಿದ್ದರೆ ಅದಕ್ಕೊಂದು ಅರ್ಥವಿತ್ತು ಎಂದರು ಹಾಗೆ ಕಟ್ಟಡ ಕಾರ್ಮಿಕರ ಫುಡ್ ಕಿಟ್ ನಲ್ಲಿ ಹಗರಣವಾಗಿದೆ ಎಂದು ಕಾಂಗ್ರೆಸ್ನವರು ಆರೋಪಿಸುತ್ತಿದ್ದಾರೆ ಆದರೆ ಫುಟ್ ಕೆಟ್ಟಿರುವುದು ಕಾಂಗ್ರೆಸ್ ಮುಖಂಡರ ಗೋಡೌನಿನಲ್ಲಿ ನಮ್ಮ ಹತ್ತಿರ ಇಲ್ಲ ನಮ್ಮ ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರ ಹತ್ತಿರ ಇಲ್ಲ.
ಫುಡ್ ಕಿಟ್ ಅವರ ಗೋಡೋನ್ ನಲ್ಲಿ ಇದೆ ಸತ್ಯಾಂಶ ತಿಳಿಯಬೇಕು ಎನ್ನುವುದಿದ್ದರೆ ಹೋಗಿ ಆ ಸಿಸಿ ಕ್ಯಾಮೆರಾದ ಫೂಟೇಜ್ ಗಳನ್ನು ತೆಗೆದು ನೋಡಲಿ ನಮ್ಮ ಕುಟುಂಬದವರಾಗಲೀ ನಮ್ಮ ಕಾರ್ಯಕರ್ತರಾಗಲಿ ಮುಖಂಡರಾಗಲಿ ಯಾರಾದರೂ ಕಿಟ್ಟುಗಳನ್ನು ಸರಬರಾಜು ಮಾಡಿದರೆ ನೋಡಿಕೊಳ್ಳಲಿ ಅಧಿಕಾರಿಗಳ ಕೈಯಲ್ಲಿ ಕೀ ಇದೆ ಅವರನ್ನು ಸಹ ಕೇಳಿಕೊಳ್ಳಲಿ ನಿಮ್ಮ ಕಾಂಗ್ರೆಸ್ಸಿನವರೇ 5ಜನ ಬ್ರೋಕರ್ ಗಳಿದ್ದರೆ ಆ ಬ್ರೋಕರ್ ಗಳು ಪದೇ ಪದೆ ಕಟ್ಟಡ ಕಾರ್ಮಿಕರ ಕಿಟ್ಟುಗಳ ಬಗ್ಗೆ ಅಧಿಕಾರಿಗಳ ಹತ್ತಿರ ಹಿಂಸೆ ಮಾಡುತ್ತಿದ್ದಾರೆ.ಅವರೇ ಹಿಂಸೆಮಾಡುವುದು ಹೊರತು ನಾನು ಯಾವತ್ತೂ ಸಹ ಪ್ರಾಮಾಣಿಕವಾಗಿ ಕಟ್ಟಡ ಕಾರ್ಮಿಕರಿಗೆ ಕಿಟ್ಟುಗಳನ್ನು ಒದಗಿಸಿದ್ದೇವೆ ಅದರಲ್ಲಿ ಯಾವ ಸಂದೇಹವೂ ಇಲ್ಲ ಬೇಕಾದಲ್ಲಿ ತನಿಖೆ ಮಾಡಿಕೊಳ್ಳಲಿ ಎನ್ನುತ್ತ ನೇರವಾಗಿ ಜಿಲ್ಲಾಧಿಕಾರಿಗಳಿಗೆ ಫೋನ್ ಕರೆ ಮಾಡಿ ನಾನು ಮಾಡಿರುವ ಕಿಟ್ಟುಗಳ ಅವ್ಯವಹಾರಗಳ ಬಗ್ಗೆ ತನಿಖೆ ಮಾಡಿಸಿ ಹಾಗೆ ಜಿಲ್ಲಾ ವರಿಷ್ಠಾಧಿಕಾರಿ ರಿಷ್ಯಂತ್ ಅವರಿಗೂ ಸಹ ಫೋನಿನ ಮುಖಾಂತರ ಕರೆ ಮಾಡಿ ನಾನು ಸಾಗುವಾನಿ ಮರಗಳ ಅಕ್ರಮ ದಾಸ್ತಾನಿನ ಬಗ್ಗೆ ದೂರು ಮಾಡಿರುವ ಬಗ್ಗೆ ತಂಡ ರಚಿಸಿ ಸಮಗ್ರ ತನಿಖೆ ಆದೇಶ ಮಾಡಬೇಕು ಎಂದು ಇನ್ನು ಮುಂದೆಯಾದರೂ ಸಾಕ್ಷಿ ಗಳನ್ನಿಟ್ಟುಕೊಂಡು ಕೇಸುಗಳನ್ನಾಗಲಿ ಆರೋಪಗಳನ್ನು ಮಾಡಲಿ ನೈತಿಕತೆ ಇದ್ದಲ್ಲಿ ತಾವು ಸಹ ಸಾರ್ವಜನಿಕರ ಮಧ್ಯೆ ಇದ್ದು ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಒಳ್ಳೆಯ ಕೆಲಸಗಳನ್ನು ಮಾಡಿ ಮುಂದೆ ಎಮ್ಮೆಲ್ಲೆ ಆಗಬಹುದು ಎಂದು ಹೇಳಿದರು.