ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕರ್ನಾಟಕ
ಸಹಸ್ರ ಕ್ರೀಡಾ ಪ್ರತಿಭಾ ಯೋಜನೆಯಡಿ ಯುವ ಪ್ರತಿಭಾನ್ವಿತ
ಕ್ರೀಡಾಪಟುಗಳನ್ನು ಗುರುತಿಸಿ, ರಾಷ್ಟ್ರೀಯ ಮತ್ತು
ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ
ತೋರಲು ಬೆಂಬಲ ನೀಡುವ ಉದ್ದೇಶದಿಂದ ಅರ್ಹ ಕ್ರೀಡಾಪಟುಗಳಿಂದ
ಅರ್ಜಿ ಆಹ್ವಾನಿಸಲಾಗಿದೆ.
ಕಳೆದ 3 ವರ್ಷಗಳಲ್ಲಿ ಅಂದರೆ 2018 ರ ಏ.01 ರಿಂದ 2021 ರ
ಮಾ.31 ರ ಅವಧಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಗಣನೀಯ
ಸಾಧನೆ ದಾಖಲಿಸಿದ 23 ವರ್ಷ ವಯೋಮಾನದೊಳಗಿನ ಯುವ
ಕ್ರೀಡಾಪಟುಗಳು ಆನ್‍ಲೈನ್ ಲಿಂಕ್ hಣಣಠಿs://ಜಥಿes-
ಞಡಿeeಜಚಿ.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಅರ್ಜಿ ಸಲ್ಲಿಸಬಹುದು.
ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಸೆ.06 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ವಿವರಗಳಿಗೆ 08192-237480 ಸಂಪರ್ಕಿಸಬಹುದು ಎಂದು
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ
ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.