ಗೌರವಾಧ್ಯಕ್ಷರು ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಶ್ರೀಕ್ಷೇತ್ರ ಕಾಗಿನೆಲೆ,
ರವರಿಗೆ, ಮಾನ್ಯ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ ಮುಖ್ಯ ಮಂತ್ರಿಯವರಿಂದ ದೇಶಭಕ್ತ ಸಂಗೊಳ್ಳಿ ರಾಯಣ್ಣನವರಿಗೆ ಗೌರವ ಸಮರ್ಪಣೆಗೆ ಆದೇಶ, ಮತ್ತೊಂದು ಕಡೆ
ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ರವರಿಗೆ
ಮಾಜಿ ಮುಖ್ಯ ಮಂತ್ರಿ ಸ್ವಕ್ಷೇತ್ರ ಶಿಕಾರಿಪುರದಲ್ಲಿ ರಾತ್ರೋರಾತ್ರಿ ರಾಯನವರಿಗೆ ಅಪಮಾನ, ದಂಗೆಯ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಚ್ಚುಚ್ಚಿದ ಶಿಕಾರಿಪುರದಲ್ಲಿ ಬ್ರಿಟಿಷರಿಗೆ ಸೋಲುಣಿಸಿ ದೇಶದ ತಂತ್ರಕ್ಕಾಗಿ ಜೀವ ತ್ಯಾಗ ಮಾಡಿದ ಹುತಾತ್ಮ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರಿಗೆ ಅನ್ಯಾಯ, ತಾಲ್ಲೂಕು ಆಡಳಿತ ಶಿಕಾರಿಮಠ ನಗರದಲ್ಲಿ ತೆರೆವುಗೊಳಿಸಿರುವ ಸ್ಥಳದಲ್ಲಿ ಮೂರ್ತಿ ಸ್ಥಾಪನೆ ಮಾಡಬೇಕು.
ಸ್ವಾತಂತ್ರ ಸಂಗ್ರಾಮದಲ್ಲಿ ಪ್ರಥಮ ಬಾರಿಗೆ ಬ್ರಿಟೀಷರಿಗೆ ಸೋಲಿನ ರುಚಿಯನ್ನು ತೋರಿಸಿದ ದೇಶಕ್ಕಾಗಿ ಪ್ರಾಣವನ್ನು ಕೊಟ್ಟ ತಾತ್ಮ, ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯರಂತಹ ಮಹಾನ್ ವೀರ ಹುಟ್ಟಿದ ದಿನ ಆಗಸ್ಟ್ 15 ಅಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ, ರಾಯಣ್ಣನವರನ್ನು ಬ್ರಿಟೀಷರು ನೇಣಿಗೆ ಹಾಕಿದ್ದು, ಜನವರಿ 26 ಅಂದು ಭಾತರ ದೇಶ ಗಣರಾಜ್ಯವಾದ ದಿನ. ಇಂತಹ ರಾಷ್ಟ್ರಪೀರರನ್ನು ಪಡೆದ ಭಾರಕ ಧನ್ಯವಾಗಿದೆ. ಇಂತಹ ಮಹಾನ್ ಮರುಷ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ನಗರದಲ್ಲಿ ರಾತ್ರೋರಾತ್ರಿ ಹೇಡಿಗಳ ರೀತಿಯಲ್ಲಿ ತೆರವುಗೊಳಿಸಿರುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿರುವ ಘೋರ ಅಪರಾಧ
ಶಿಕಾರಿಪುರ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚುತ್ತಿರುವ ಭೂಮಿಯಲ್ಲಿ ಸ್ವಾತಂತ್ರ್ಯ ಹೋರಟಗಾರರಿಗೆ ಅವಮಾನ ಮಾಡಿರುವುದು – ಈಸೂರು ದಂಗೆಗೂ ಮಾಡಿರುವ ಅವಮಾನ, ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರು ಸಂಗೊಳ್ಳಿ ರಾಯಣ್ಣನವರಿಗೆ ಗೌರವಸಲ್ಲಿಸಲು ಆದೇಶ ಹೊರಡಿಸಿದ್ದಾರೆ. ಅದೇ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರ ಸಕ್ಷೇತ್ರ ಶಿಕಾರಿಪುರದಲ್ಲಿ ದೇಶಭಕ್ತನ ಮೂರ್ತಿ ತೆರವುಗೊಳಿಸಲಾಗಿದೆ. ರಾಯಣ್ಣ ಹುಟ್ಟಿದರೆ “ಸ್ವಾತಂತ್ರಯೋತ್ಸವ ದಿನ ರಾಯಣ್ಣ ದೇಶಕ್ಕಾಗಿ ಜೀವಕೊಟ್ಟ ದಿನ, “ಗಣರಾಜ್ಯೋತ್ಸವ ದಿನ
1947 ರ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಯಣ್ಣನ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರಮಾಡಬೇಕಿತ್ತು. ದೇಶವ್ಯಾಪಿ, ರಾಜ್ಯ, ಜಿಲ್ಲಾ, ತಾಲ್ಲೂಕು, ಕೇಂದ್ರಗಳಲ್ಲಿ ರಾಯಣ್ಣನವರ ಮೂರ್ತಿಗಳನ್ನು ಸರ್ಕಾರಗಳ ಸ್ಥಾಪಿಸಬೇಕಿತ್ತು. ಆದರೆ ಸರ್ಕಾರಗಳು ಮಹಾವೀರನನ್ನು ಮರತೇ ಬಿಟ್ಟಿತು. ಆದರೆ ರಾಯಣ್ಣನ ಅಭಿಮಾನಿಗಳು, ಲಕ್ಷಾಂತರ ಯುವಕರು ಸಂಗೊಳ್ಳಿ ರಾಯಣ್ಣನವರನ್ನು ಆರಾಧಿಸುತ್ತಿದ್ದಾರೆ. ಪೂಜಿಸುತ್ತಿದ್ದಾರೆ. ತಮ್ಮ ಕೈಲಾದಷ್ಟು ರಾಯಣ್ಣನ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿದ್ದಾರೆ. ರಾಯಣ್ಣ ಯುವಕರಿಗೆ ಆದರ್ಶವಾಗಿದ್ದಾರೆ. ಯುವಕರು ದುಶ್ಚಟಗಳಿಂದ ಮುಕ್ತರಾಗುತ್ತಿದ್ದಾರೆ.
ರಾಜಕಾರಣಿಗಳ ನೂರಾರು ಅಡಿ ವಿಗ್ರಹಗಳು ಯಾವುದೇ ಅಡೆತಡೆಗಳಿಲ್ಲದೆ ಸರ್ಕಾರಗಳು ಸ್ಥಾಪನೆ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ, ರಾಯಣ್ಣ ರಾಜಕಾರಣಿ ಅಲ್ಲ, ರಾಯಣ್ಣ ನಿಶ್ವಾರ್ಥ ಮನಸುಳ್ಳ, ಸ್ವಾಮಿ ನಿಷ್ಟೆಗೆ ಹೆಸರಾದಂತಹ ಕ್ರಾಂತಿವೀರ ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರರಿಗಾಗಿ ಸ್ವಯಂ ಪ್ರೇರಿತರಾಗಿರುವವರನ್ನು ಸರ್ಕಾರ ಪ್ರೋತ್ಸಾಹಿಸಬೇಕಾಗಿತ್ತು.
ತೆರವುಗೊಳಿಸಿರುವ ಸಂಗೊಳ್ಳಿ ರಾಯಣ್ಣ ನವರ ಮೂರ್ತಿಯನ್ನು ಅದೇ ಸ್ಥಳದಲ್ಲಿ ಸ್ಥಾಪನೆ ಮಾಡಿ ಗೌರವ ಸಲ್ಲಿಸಲು
ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದರು. ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ಶಾಶಕರಾಗಿರುವ
ಶಿಕಾರಿಪುರದಲ್ಲಿ ತಾಲ್ಲೂಕು ಆಡಳಿತಕ್ಕೆ ಮಾರ್ಗದರ್ಶನ ನೀಡಬೇಕಾಗಿ ಈ ಮೂಲಕ ಆಗ್ರಹಪಡಿಸುತ್ತಿದ್ದೇವೆ.ಎಂದು ಹೊನ್ನಾಳಿ ತಾಲೂಕಿನ ಕುರುಬ ಸಮಾಜದ ಪರವಾಗಿ ಹೊನ್ನಾಳಿ ತಹಸೀಲ್ದಾರರಾದ ಬಸನಗೌಡ ಕೋಟೂರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.