ದಾವಣಗೆರೆ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ
ಚಾಲ್ತಿಯಲ್ಲಿರುವ ಅಂತ್ಯೋದಯ ಅನ್ನ ಮತ್ತು ಆದ್ಯತಾ (ಬಿ.ಪಿ.ಎಲ್)
ಹಾಗೂ ಆದ್ಯತೇತರ (ಎಪಿಎಲ್) ಪಡಿತರ ಚೀಟಿಗಳಲ್ಲಿ
ಸೇರ್ಪಡೆಗೊಂಡಿರುವ ಪ್ರತಿಯೊಬ್ಬ ಸದಸ್ಯರುಗಳ ಗುರುತಿನ
ಮರು ನೊಂದಾವಣಿ ಕಾರ್ಯವನ್ನು (ಇ-ಕೆವೈಸಿ) ಎಲ್ಲಾ ನ್ಯಾಯಬೆಲೆ
ಅಂಗಡಿಗಳಲ್ಲಿ ಈ ಹಿಂದೆ ಪ್ರಾರಂಭಿಸಲಾಗಿತ್ತು. ಅನೇಕ ಜನರು
ಈಗಾಗಲೇ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಕಾರ್ಯ
ಮಾಡಿಸಿಕೊಂಡಿರುತ್ತಾರೆ. ಕಾರಣಾಂತರಗಳಿಂದ ತಾತ್ಕಾಲಿಕವಾಗಿ
ಸ್ಥಗಿತಗೊಳಿಸಲಾಗಿತ್ತು. ಆನಂತರ ಕೋವಿಡ್-2019 ಕಾರಣದಿಂದ ಈ
ಕಾರ್ಯ ಮುಂದೂಡಲಾಗಿತ್ತು.
ಇದೀಗ ಇ-ಕೆವೈಸಿ ಸಂಗ್ರಹಣೆ ಕಾರ್ಯಕ್ರಮವನ್ನು
ಪುನರಾರಂಭಿಸಲು ಆದೇಶ ನೀಡಲಾಗಿದ್ದು, ತಾಲ್ಲೂಕಿನಾದ್ಯಂತ
ಪಡಿತರ ಚೀಟಿದಾರರು ಬೆರಳಚ್ಚು ನೀಡಿ ತಮ್ಮ ಗುರುತು ಮರು
ನೊಂದಣೆ ಮಾಡಿಸದೇ ಇರುವ ಎಲ್ಲಾ ಸದಸ್ಯರುಗಳ ಇ-ಕೆವೈಸಿ
ಸಂಗ್ರಹಣೆ ಕಾರ್ಯವನ್ನು ನ್ಯಾಯಬೆಲೆ ಅಂಗಡಿಗಳಲ್ಲಿ
ಪ್ರಾರಂಭಿಸಲು ದಾವಣಗೆರೆ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ
ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರುಗಳಿಗೆ ಈಗಾಗಲೇ ಸೂಚನೆ
ನೀಡಲಾಗಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಸಂಗ್ರಹಣೆಯನ್ನು ಸೆ.01
ರಿಂದ ಸೆ.10 ರವರೆಗೆ ಸಂಗ್ರಹಿಸಲು ಬಾಕಿ ಉಳಿದಿರುವ ಸದಸ್ಯರುಗಳಿಗೆ
ಅಂತಿಮ ಅವಕಾಶವನ್ನು ನೀಡಲಾಗಿದೆ. ಈ ಅವಧಿಯಲ್ಲಿ ನ್ಯಾಯಬೆಲೆ
ಅಂಗಡಿಗಳಲ್ಲಿ ಪಡಿತರ ವಿತರಣೆ ಕಾರ್ಯ ಇರುವುದಿಲ್ಲ.
ನ್ಯಾಯಬೆಲೆ ಅಂಗಡಿಗಳಲ್ಲಿ ತಮ್ಮ ಹೆಬ್ಬೆರಳು ನೀಡಿ ಇ-ಕೆವೈಸಿ
ನೊಂದಾಯಿಸಲು ಜನರು ನ್ಯಾಯಬೆಲೆ ಅಂಗಡಿಗಳಲ್ಲಿ ಯಾವುದೇ ಹಣ
ನೀಡುವಂತಿಲ್ಲ. ಆದರೆ ಮಾಸ್ಕ್ ಧರಿಸಿಕೊಂಡು ಕೋವಿಡ್
ನಿಯಮಾವಳಿಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ.
ಸರ್ಕಾರದ ಆದೇಶದಂತೆ ಇ-ಕೆವೈಸಿ ಕಾರ್ಯವು ಸೆ. 10 ಕ್ಕೆ
ಮುಕ್ತಾಯವಾಗಲಿದ್ದು, ಈ ಅವಧಿಯಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳದ
ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಸಹ
ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ತಮ್ಮ ಹೆಬ್ಬರಳು ನೀಡಿ, ಹೆಸರು
ಮರು ನೊಂದಾವಣೆ (ಇ-ಕೆವೈಸಿ) ಮಾಡಿಸಿಕೊಳ್ಳಬೇಕು ಎಂದು
ದಾವಣಗೆರೆ ತಾಲ್ಲೂಕು ತಹಶೀಲ್ದಾರ್ರಾದ ಬಿ.ಎನ್.ಗಿರೀಶ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.