ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆ.28 ಮತ್ತು 29 ರಂದು
ನಿಗದಿಯಾಗಿರುವ ಸಿಇಟಿ – 2021 ಪರೀಕ್ಷೆಗಳನ್ನು ಜಿಲ್ಲೆಯ 17 ಪರೀಕ್ಷಾ
ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಕೋವಿಡ್ ಪಾಸಿಟಿವ್ ಬಂದ
ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ನಗರದ ಸರ್ಕಾರಿ ನರ್ಸಿಂಗ್
ಕಾಲೇಜು, ಸಿ.ಜೆ. ಆಸ್ಪತ್ರೆ ಕೇಂದ್ರವನ್ನು ಕೋವಿಡ್ ಆರೋಗ್ಯ
ಕೇಂದ್ರವನ್ನಾಗಿ (ಸಿಸಿಸಿ) ಗುರುತಿಸಿ ಕಾಯ್ದಿರಿಸಲಾಗಿದೆ.
ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯನ್ವಯ ಸಿಇಟಿ
ಪರೀಕ್ಷೆ ಜರುಗುವ ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿಯೊಂದು
ಕೊಠಡಿಗೆ 24 ಅಭ್ಯರ್ಥಿಗಳು ಮೀರದಂತೆ ಕನಿಷ್ಟ 6 ಅಡಿ ಅಂತರದಲ್ಲಿ
ಆಸನ ವ್ಯವಸ್ಥೆಯ ಕ್ರಮ ಕೈಗೊಳ್ಳಲಾಗಿದೆ.
ಪರೀಕ್ಷಾ ಮೇಲ್ವಿಚಾರಕರು ಕೋವಿಡ್ ಪಾಸಿಟಿವ್ ಅಭ್ಯರ್ಥಿಗೆ ಪರೀಕ್ಷೆಗೆ
ಹಾಜರಾಗಲು ಅನುಕೂಲವಾಗುವಂತೆ ಸಂಚಾರ ವ್ಯವಸ್ಥೆ ಹಾಗೂ
ಮಧ್ಯಾಹ್ನನದ ಅವಧಿಗೆ ಊಟೋಪಾಚಾರ ವ್ಯವಸ್ಥೆ ಮಾಡಬೇಕು.
ಮಾರ್ಗಧಿಕಾರಿಗಳು ಜಿಲ್ಲಾ ಖಜಾನೆಯಿಂದ ಕೋವಿಡ್ ಪರೀಕ್ಷಾ
ದಿನದಂದು ಕೋವಿಡ್ ಆರೈಕೆ ಕೇಂದ್ರಕ್ಕೆ ಪರೀಕ್ಷಾ ಗೌಪ್ಯ
ಸಾಮಗ್ರಿಗಳನ್ನು ತಲುಪಿಸಬೇಕು ಮತ್ತು ಪರೀಕ್ಷೆ ಮುಗಿದ
ನಂತರ ಅವುಗಳನ್ನು ಸ್ವೀಕರಿಸಿ ಜಿಲ್ಲಾ ಖಜಾನೆಯಲ್ಲಿ ಇರಿಸಬೇಕು.
ಈ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ದಿನದಂದು ಕರ್ತವ್ಯ
ನಿರ್ವಹಿಸಲು ಡಾ. ವೆಂಕಟೇಶ್ ಎಲ್.ಡಿ. ತಾಲ್ಲೂಕು
ಆರೋಗ್ಯಧಿಕಾರಿಗಳನ್ನು ಪರೀಕ್ಷಾ ಮೇಲ್ವಿಚಾರಕರನ್ನಾಗಿ
ನೇಮಿಸಲಾಗಿದ್ದು, ಮೊ.ಸಂ. 9731066582, ನಳೀನಾಕ್ಷಿ ಎಸ್.
ಪ್ರಾಂಶುಪಾಲರು, ಸರ್ಕಾರಿ ನರ್ಸಿಂಗ್ ಕಾಲೇಜು, ಸಿಜೆ ಆಸ್ಪತ್ರೆ
(ಸಂವೀಕ್ಷಕರು)-8197401965, ಡಾ.ಧೀರಜ್ ಹೆಚ್.ವಿ. ವೈದ್ಯಾಧಿಕಾರಿ,
ಪ್ರಾ.ಆ.ಕೇಂದ್ರ, ಹುಚ್ಚವ್ವನಹಳ್ಳಿ (ವೈದ್ಯಾಧಿಕಾರಿಗಳು)-7019952617,
ಹಾಗೂ ಮಾರ್ಗಾಧಿಕಾರಿಯನ್ನಾಗಿ ಶಿಕ್ಷಣಾಧಿಕಾರಿ ನಿರಂಜನಮೂರ್ತಿ-
9916416166 ಇವರನ್ನು ನೇಮಿಸಲಾಗಿದೆ.
ಪರೀಕ್ಷಾ ಕೇಂದ್ರಗಳಿಗೆ ನೇಮಿಸಲಾದ ಅಧಿಕಾರಿ, ಸಿಬ್ಬಂದಿಗಳು
ಪರೀಕ್ಷಾ ದಿನದಂದು ಕೋವೀಡ್ ಪರೀಕ್ಷಾ ಕೇಂದ್ರದಲ್ಲಿ
ನಿಗದಿಪಡಿಸಲಾದ ಸಮಯಕ್ಕೆ ಹಾಜರಿದ್ದು, ಪರೀಕ್ಷೆಗೆ ಸಂಬಂಧಪಟ್ಟ
ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡು
ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ಕರ್ನಾಟಕ ಪರೀಕ್ಷಾ
ಪ್ರಾಧಿಕಾರದ ಮಾರ್ಗಸೂಚಿಯನುಸಾರ ನಡೆಸಿ ವರದಿ ಸಲ್ಲಿಸುವಂತೆ
ಸೂಚನೆ ನೀಡಿರುವುದಾಗಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.