ಅಂದು ಸೈಟ್ ವಾಪಸ್ ನೀಡದಿದ್ದರೆ ಸೂಕ್ತ ಕ್ರಮ ಎಂದು ಹೇಳಿ….. ಇಂದು ಅವರಿಗೆ ಅಧಿಕಾರವನ್ನ ಹಸ್ತಾಂತರ ಮಾಡುವ ಸ್ಥಿತಿ

ರಾಜಕೀಯದಲ್ಲಿ ಏನಾದರೂ ಆಗಬಹುದು ಎನ್ನುವುದಕ್ಕೆ ತಾಜಾ ಉದಾಹರಣೆಯೇ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಸ್ಥಾನ.

ಕೆಲವು ತಿಂಗಳುಗಳ ಹಿಂದೆ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ ರವರು, ಪಾಲಿಕೆ ಸದಸ್ಯರಾಗಿದ್ದ ದೇವರಮನಿ ಶಿವಕುಮಾರ್ ಹಾಗೂ ಅವರ ಸಹೋದರರು ದೂಡ ದಿಂದ ಸುಳ್ಳು ಮಾಹಿತಿ ನೀಡಿ ಪಡೆದ ಸೈಟ್ಗಳನ್ನು ವಾಪಸ್ ನೀಡದಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು, ಆದರೆ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಇಂದು ಅದೇ ರಾಜನಹಳ್ಳಿ ಶಿವಕುಮಾರ್ ಅವರು ದೇವರಮನೆ ಶಿವಕುಮಾರ್ ಅವರಿಗೆ ತಮ್ಮ ಅಧ್ಯಕ್ಷ ಪದವಿಯನ್ನು ಹಸ್ತಾಂತರ ಮಾಡಿದ್ದು ಮಾತ್ರ ವಿಪರ್ಯಾಸ.

ಬಡವರು ತಮ್ಮ ಕನಸಿನ ಮನೆ ಕಟ್ಟಿಕೊಳ್ಳಲು ಕಡಿಮೆ ಮೊತ್ತದಲ್ಲಿ ಜಾಗ ಸಿಗುತ್ತದೆ ಎಂದು ನಗರದಿಂದ ದೂರ ಪ್ರದೇಶಗಳಲ್ಲಿ ರೆವೆನ್ಯೂ ಸೈಟ್ ತೆಗೆದುಕೊಂಡರೆ ಅಂತಹ ಜಾಗಗಳ ಮೇಲೆ ದಾಳಿ ಮಾಡಿ ತಮಗೆ ಬರಬೇಕಾದ ಶುಲ್ಕವನ್ನು ವಸೂಲಿ ಮಾಡುವ ಪ್ರಾಧಿಕಾರದ ಕ್ರಮ ಸರಿ ಎನ್ನುವುದಾದರೆ… ಸುಳ್ಳು ಮಾಹಿತಿ ನೀಡಿ ಸೈಟ್ಗಳನ್ನು ಪಡೆದಿದ್ದಾರೆ ಎಂದು ತಮ್ಮ ಪಕ್ಷವೇ ಆಪಾದನೆ ಮಾಡಿದ್ದ ವ್ಯಕ್ತಿಗೆ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನೆ ನೀಡುತ್ತಿರುವುದು ಎಷ್ಟು ಸರಿ????

ಇಲ್ಲಿ ಬಡವರಿಗೆ ಒಂದು ಕಾನೂನು… ಸಿರಿವಂತರಿಗೆ ಒಂದು ಕಾನೂನಾ…..?????

ಕೆ.ಎಲ್.ಹರೀಶ್ ಬಸಾಪುರ
ರಾಜ್ಯ ಕಾರ್ಯದರ್ಶಿ
ಕೆಪಿಸಿಸಿ ಸಾಮಾಜಿಕ ಜಾಲತಾಣ.

Leave a Reply

Your email address will not be published. Required fields are marked *