ಹೊನ್ನಾಳಿ,26: ಖಾಸಗಿ ಮಳಿಗೆಯಲ್ಲಿ ಫುಡ್ ಕಿಟ್ ಮತ್ತು ನಾಟಾ ದಾಸ್ತಾನು ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ದೋರಣೆ ಬಗ್ಗೆ ಆರೋಪ ಮಾಡದ್ದೇನೆಯೇ ಹೊರತು ಶಾಸಕರ ಹೆಸರನ್ನು ಎಲ್ಲಿಯೂ ಬಳಕೆ ಮಾಡಿಲ್ಲ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಅವರು ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಲವಾರು ಜನ ಕಟ್ಟಡ ಕಾರ್ಮಿಕರು ತಮ್ಮ ಬಳಿ ಬಂದು ತಾಲೂಕಿಗೆ ಫುಡ್ ಕಿಟ್‍ಗಳು ಬಂದಿದ್ದು ಆದರೆ ತಿಂಗಳುಗಳಾದರು ಎಲ್ಲರಿಗೂ ಸಮರ್ಪಕವಾಗಿ ವಿತರಿಸಿಲ್ಲ ಎಂದು ಆರೋಪ ಮಾಡಿದ ವೇಳೆ ತಾವು ಖುದ್ದು ಕಾರ್ಮಿಕ ಇಲಾಖೆ ಅಧಿಕಾರಿಗೆ ಈ ಬಗ್ಗೆ ವಿಚಾರಿಸಿದಾಗ ಅವರು ತಾಲೂಕಿಗೆ 12 ಸಾವಿರ ಫುಡ್ ಕಿಟ್ ಬಂದಿದ್ದು ಅದರಲ್ಲಿ ಸುಮಾರು 3 ಸಾವಿರ ಕಿಟ್ ವಿತರಿಸಿದೆ , ಳಿದವುಗಳನ್ನು ಮುಂದಿನ ದಿನಗಳಲ್ಲಿ ವಿತರಿಸಲು ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ನಂತರ ದಾಸ್ತಾನು ಮಾಡಿರುವ ಮಳಿಗೆಗಳನ್ನು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅವು ಖಾಸಗಿ ವ್ಯಕ್ತಿಯ ಮಳಿಗೆಯಲ್ಲಿದ್ದವು ಅಗ್ರಿಮೆಂಟ್ ಬಗ್ಗೆ ಅಧಿಕಾರಿಯನ್ನು ವಿಚಾರಿಸಿದಾಗ ಸಮರ್ಪಕ ಉತ್ತರ ನೀಡಲಿಲ್ಲ ಎಂದರು.
ಎ.ಪಿ.ಎಂ.ಸಿ.ಯಲ್ಲಿ ಪುಡ್ ಕಿಟ್ ಇಡಲು ನಿಗದಿಪಡಿಸಿದ ಮಳಿಗೆಯ ಬದಲಿಗೆ ಬೇರೆ ಮಳಿಗೆಯಲ್ಲಿ ಕಿಟ್‍ಗಳನ್ನು ಇಡಲಾಗಿತ್ತು, ನಿಗದಿಪಡಿಸಿದ ಮಳಿಗೆಯಲ್ಲಿ ನಾಟಾಗಳನ್ನು ಇಡಲಾಗಿತ್ತು ಈ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಕ್ರಮ ಜರುಗಿಸುವ ಬಗ್ಗೆ ಹೇಳಲಾಯಿತು.
ನಂತರ ಈ ಕುರಿತು ತಾವು ಪತ್ರಿಕಾಗೋಷ್ಠಿಯಲ್ಲಿ ಈ ಎಲ್ಲಾ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದು ಅದರೆ ಶಾಸಕರ ಹೆಸರನ್ನು ಎಲ್ಲಿಯೂ ಬಳಕೆ ಮಾಡಿಲ್ಲ ಅದಾಗ್ಯೂ ಕೂಡ ಶಾಸಕ ರೇಣುಕಾಚಾರ್ಯ ಅವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿನೋಡಿಕೊಂಡರು ಎನ್ನುವ ಗಾದೆಯಂತೆ ವರ್ತಿಸಿ ತಮ್ಮ ಬಗ್ಗೆ ಸುಖಾಸುಮ್ಮನೆ ಆರೋಪ ಮಾಡಿದ್ದಾರೆ ಎಂದು ಹೇಳಿದರು .
ಈ ಹಿಂದೆ ಕೂಡ ಶಾಸಕರು ಆಣೆ ಪ್ರಮಾಣದ ಬಗ್ಗೆ ಮಾತನಾಡಿದ್ದರು ನಾನು ಸಿದ್ದನಿದ್ದರೂ ಕೂಡ ಅವರು ಗೈರುಹಾಜರಾಗಿದ್ದು ಇದೀಗ ಪುನಃ ಅಣೆ ಪ್ರಮಾಣದ ಮಾತನಾಡಿದ್ದಾ,ರೆ, ಅವರ ಸಾವಾಲ್‍ನ್ನು ನಾನೂ ಕೂಡ ಸ್ವೀಕರಿಸುತ್ತೇನೆ ನಾನು ಅಣೆ ಮಾಡಲು ಸಿದ್ದನಿದ್ದೇನೆ ಶಾಸಕರೆ ದಿನಾಂಕ ನಿಗದಿಪಡಿಸಲಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ವಿಧಾನಪರಿಷತ್ ಸದಸ್ಯ ಪ್ರಸನ್ನಕುಮಾರ್ ಅವರು ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ವಿತರಿಸಲು ಲೈಸನ್ಸ ಫೀ ಮೂಲಕ ಹಣ ಸಂಗ್ರಹ ಮಾಡಲಾಗಿರುತ್ತದೆ ಈ ಹಣವನ್ನು ಕಾರ್ಮಿಕ ಕಲ್ಯಾಣಕ್ಕಾಗಿ ಬಳಕೆ ಮಾಡಲಾಗುತ್ತದೆ .
ಕಿಟ್‍ಗಳು ದುರ್ಬಳಕೆಯಾಗದಂತೆ ಹಾಗೂ ಅವುಗಳು ಹಾಳಾಗದಂತೆ ನೋಡಿಕೊಳ್ಳುವುದು ಸ್ಥಳೀಯ ಶಾಸಕರ ಜವಾಬ್ದಾರಿಯಾಗಿದೆ . ಶಾಸಕರು ಬಡ ಕಾರ್ಮಿಕರಿಗೆ ಕಿಟ್ ಗಳು ತಲುಪುವಂತೆ ನೋಡಿಕೊಳ್ಳುಬೇಕಾಗುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಮುಖಂಡ ಎಂ. ರಮೇಶ್, ಕಾಂಗ್ರೇಸ್ ಸಾಸ್ವೇಹಳ್ಳಿ ಬ್ಲಾಕ್ ಅಧ್ಯಕ್ಷ ಗದ್ದಿಗೇಶ್,ಆರ್.ನಾಗಪ್ಪ, ಯುವ ಕಾಂಗ್ರೇಸ್ ಅಧ್ಯಕ್ಷ ಪ್ರಶಾಂತ್ ಬಣ್ಣಜ್ಜಿ, ಅಲ್ಪಸಂಖ್ಯಾತ ಮುಖಂಡ ಚೀಲೂರು ವಾಜೀದ್, ದರ್ಶನ್ ಬಳ್ಳೇಶ್ವರ, ವಕೀಲ ಕುಬೇರ ನಾಯ್ಕ, ಶಿವಾನಂದ್ ಇತರರು ಇದ್ದರು.