ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ದಾವಣಗೆರೆಯ ಸರ್ಕಾರಿ
ಐಟಿಐ ತರಬೇತಿ ಸಂಸ್ಥೆಗೆ ನೀಡಲಾಗಿರುವ ಕಂಪ್ಯೂಟರ್ ಲ್ಯಾಬ್ ಹಾಗೂ
ಸ್ಮಾರ್ಟ್ ಕ್ಲಾಸ್ಗಳ ಉದ್ಘಾಟನೆ ಮತ್ತು ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ
ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ವಿತರಣೆ
ಸಮಾರಂಭ ಆ.27 ರಂದು ಮಧ್ಯಾಹ್ನ 2 ಗಂಟೆಗೆ ಸರ್ಕಾರಿ ಐ.ಟಿ.ಐ
ತರಬೇತಿ ಸಂಸ್ಥೆ ಆವರಣದ ಸರ್ ಎಂ.ವಿಶ್ವೇಶ್ವರಯ್ಯ ವೇದಿಕೆಯಲ್ಲಿ
ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಡಾ.ಜಿ.ಎಂ.ಸಿದ್ದೇಶ್ವರ
ಹಾಗೂ ಶಾಸಕ ಎಸ್.ಎ.ರವೀಂದ್ರನಾಥ್ ನೆರವೇರಿಸುವರು.
ಅಧ್ಯತಕ್ಷತೆಯನ್ನು ಪ್ರಥಮ ದರ್ಜೆ ಸರ್ಕಾರಿ ಐಟಿಐ ಕಾಲೇಜಿನ
ಪ್ರಾಚಾರ್ಯ ಏಕನಾಥ ಎನ್ ವಹಿಸುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ,
ಮಹಾನಗರಪಾಲಿಕೆ ಮಹಾಪೌರ ಎಸ್.ಟಿ.ವೀರೇಶ್, ಸ್ಮಾರ್ಟ್ ಸಿಟಿ ಲಿಮಿಟೆಡ್ನ
ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಟಿ. ಮಲ್ಲಾಪುರ
ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.