ದಾವಣಗೆರೆ: ಮೈಸೂರು ಗ್ಯಾಂಗ್ ರೇಪ್, ಸಚಿವರ
ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲಾ ಮಹಿಳಾ
ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರಾದ
ಡಾ|| ಶಾಮನೂರು ಶಿವಶಂಕರಪ್ಪನವರು ಮಹಿಳೆಯರ
ಮೇಲೆ ಅತ್ಯಾಚಾರ ಪ್ರಕರಣಗಳು
ನಡೆಯುತ್ತಿರುವುದು ಖಂಡನೀಯ. ಇಂತಹ
ಪ್ರಕರಣಗಳು ಮರುಕಳುಹಿಸದಂತೆ ಸರ್ಕಾರ
ಅತ್ಯಾಚಾರ ಪ್ರಕರಣದಲ್ಲಿ ಭಾಗವಹಿಸಿದ ಆರೋಪಿಗಳಿಗೆ ಕಠಿಣ
ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿದರು.
ಮೈಸೂರಿನಲ್ಲಿ ನಡೆದ ಅಮಾನವೀಯ, ಅನಾಗರಿಕ
ಗ್ಯಾಂಗ್ ರೇಪ್ ಪ್ರಕರಣ ನಡೆಯಬಾರದಾಗಿತ್ತು, ನಡೆದು
ಹೋಗಿದೆ, ಇಲ್ಲಿ ಸರ್ಕಾರದ ತಪ್ಪಿದೆ, ಸರ್ಕಾರದ ವೈಫಲ್ಯವಿದೆ.
ಸಾರ್ವಜನಿಕವಾಗಿ ನಿರ್ಜನ ಪ್ರದೇಶಗಳಲ್ಲಿ ಮದ್ಯಪಾನ
ಮಾಡಲು ಸ್ವೇಚ್ಛಾಚಾರವಾಗಿ ಬಿಡುವುದೇ ಸರ್ಕಾರದ ಗೃಹ
ಇಲಾಖೆಯ ವೈಫಲ್ಯವಾಗಿದೆ ಎಂದು ದೂರಿದರು.
ಉತ್ತರ ಪ್ರದೇಶ, ದೆಹಲಿಯಲ್ಲಿ ಇಂತಹ ರಾಜ್ಯಗಳಲ್ಲಿ
ನಡೆಯುತ್ತಿದ್ದ ಇಂತಹ ಅಮಾನುಷ ಘಟನೆಗಳು ನಮ್ಮ

ರಾಜ್ಯದಲ್ಲಿ ಅದರಲ್ಲೂ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದ್ದು
ನಿಜಕ್ಕೂ ಆಘಾತಕರಿ ಸಂಗತಿ ಎಂದರು.
ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತಾರೆ,
ಕೆಲವು ಸಮಯ ಕಳೆದ ನಂತರ ಜಾಮೀನು ಮೇಲೆ
ಹೊರಬರುತ್ತಾರೆ, ಆರೋಪಿಗಳಿಗೆ ಇದು ಕಠಿಣ
ಶಿಕ್ಷೆಯಾಗುವುದಿಲ್ಲ, ಸರ್ಕಾರ ಆರಂಭದಲ್ಲಿಯೇ ಚಿವುಟಿ
ಹಾಕುವ ಕೆಲಸ ಮಾಡಬೇಕು, ಈ ನಿಟ್ಟಿನಲ್ಲಿ ಖಂಡಿತಾ ಕಠಿಣ
ಕ್ರಮ ತೆಗೆದುಕೊಳ್ಳಲೇಬೇಕು ಎಂದು
ಒತ್ತಾಯಿಸಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಅನಿತಾಬಾಯಿ
ಮಾಲತೇಶ್ ಅವರು ಮಾತನಾಡಿ ಅತ್ಯಾಚಾರಿಗಳಿಗೆ ಶಿಕ್ಷೆ
ಕೊಡಿಸುವ ಬದಲು ಯುವತಿಯದ್ದೇ ತಪ್ಪು ಎಂಬಂತೆ
ಮಾತನಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಇಂತಹ
ಘಟನೆಗಳು ನಡೆದಾಗಿ ಮಹಿಳೆಯನ್ನು
ದೂಷಿಸಲಾಗುತ್ತಿದೆ. ಮಹಿಳೆಯರ ಮೇಲೆ ಶೋಷಣೆ
ನಡೆದಾಗ ಮಹಿಳೆಯರದ್ದೇ ತಪ್ಪು ಎಂಬಂತೆ ವಾದ
ಮಾಡುವವರಿಗೆ ಛೀಮಾರಿ ಹಾಕಬೇಕು ಎಂದು ಆಗ್ರಹಿಸಿದರು.
ಅತ್ಯಾಚಾರ ಆಗಿರಬಹುದು, ದೈಹಿಕ ದೌರ್ಜನ್ಯ ಅಥವಾ
ಮೌಖಿಕ ಶೋಷಣೆ ಆಗಿರಬಹುದು. ಆದರೆ ಇಲ್ಲಿ
ಮಹಿಳೆಯನ್ನೇ ದೂಷಿಸಲಾಗುತ್ತದೆ. ನಿನ್ನದೇ ತಪ್ಪು
ಎಂದು ಮಹಿಳೆಯರತ್ತ ಬೊಟ್ಟು ಮಾಡುತ್ತಿರುವುದು
ರ್ದುದೈವ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ
ಶ್ರೀಮತಿ ಅಶ್ವಿನಿ ಪ್ರಶಾಂತ್, ಪ್ರಧಾನ ಕಾರ್ಯದರ್ಶಿ ಸುಷ್ಮಾ
ಪಾಟೀಲ್, ನಾಗರತ್ನಮ್ಮ, ಆಶಾ ಮುರುಳಿ, ಉಮಾ ಕುಮಾರ್,
ಗೀತಾ ಚಂದ್ರಶೇಖರ್, ಮಂಗಳಮ್ಮ, ಪುಷ್ಪ, ಗೀತಾ
ಪ್ರಶಾಂತ್, ಸುನೀತಾ ಭೀಮಣ್ಣ, ಹರೀಶ್ ಕೆ.ಎಲ್. ಬಸಾಪುರ,
ಶಶಿಧರ ಪಾಟೀಲ್, ಮನು ಮತ್ತಿತರರಿದ್ದರು.

Leave a Reply

Your email address will not be published. Required fields are marked *