: ಕರ್ನಾಟಕ ರಾಜ್ಯದ ಗೃಹ ಸಚಿವರಾದ ಶ್ರೀ. ಅರಗ ಜ್ಞಾನೇಂದ್ರ ರವರು ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದಿರುವ ಅತ್ಯಾಚಾರ ವಿಷಯವನ್ನು ಪ್ರಸ್ತಾಪಿಸುವ ವೇಳೆಯಲ್ಲಿ ಕಾಂಗ್ರೆಸ್ಸಿಗರು ನನ್ನ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದಾರೆ ಎಂಬ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಗೃಹ ಸಚಿವರ ಮೇಲೆ ಯಾರು ಅತ್ಯಾಚಾರ ನಡೆಸಿದ್ದಾರೆ. ಎಂಬುದನ್ನು ಕೂಡಲೇ ತನಿಖೆ ನಡೆಸಿ ಬಹಿರಂಗಪಡಿಸಬೇಕು, ಇಲ್ಲದೆ ಹೋದರೆ ಗೃಹ ಸಚಿವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಸತ್ಯಾಂಶವನ್ನು ರಾಜ್ಯದ ಜನತೆಯ ಮುಂದೆ ಬಹಿರಂಗ ಪಡಿಸಬೇಕೆಂದು ದೂರು ಸಲ್ಲಿಸುತ್ತಿದ್ದೇವೆ.
ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಿಮ್ಸ ರಸ್ತೆ ಬೆಂಗಳೂರು ಕಾಂಗ್ರೆಸ್ ಪಕ್ಷದ ಮುಖಂಡರಾದ ಸಲೀಂ ಮತ್ತು ಮನೋಹರ ಸಿ ಅವರು ತಿಳಿಸಿದರು.