ಹೊನ್ನಾಳಿ : ಕೊರೊನಾ ಮೂರನೇ ಅಲೆ ಅಟ್ಟಹಾಸ ಮೆರೆಯಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದ ಗ್ರಾಮೀಣ ಭಾಗದ ಜನರು ಕೊರೊನಾ ಮೂರನೇ ಅಲೆಯ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಶಾಸಕ ಎಂ.ಪಿ.ರೇಣುಕಾಚಾರ್ಯ ಕಿವಿ ಮಾತು ಹೇಳಿದರು.
ತಾಲೂಕಿನ ಬೀರಗೊಂಡನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಲಸಿಕೋತ್ಸವದಲ್ಲಿ ಪಾಲ್ಗೊಂಡು ಲಸಿಕೆ ಬಗ್ಗೆ ಸಿಬ್ಬಂದಿಗಳಿಂದ ಮಾಹಿತಿ ಪಡೆದು, ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದರು.
ಅವಳಿ ತಾಲೂಕಿನಲ್ಲಿ ಕೊರೊನಾ ಮೊದಲನೇ ಅಲೆ ಹಾಗೂ ಎರಡನೇ ಅಲೆಯಲ್ಲಿ ಜನರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಪ್ರತಿನಿತ್ಯ ವೈರಸ್ನೊಂದಿಗೆ ಕಾಲ ಕಳೆದಿದ್ದು, ಮೊದಲನೇ ಅಲೆಗಿಂತ ಎರಡನೇ ಅಲೆಯಲ್ಲಿ ಸಾಕಷ್ಟು ಸಾವು ನೋವು ಉಂಟಾಗಿದ್ದು, ಮೂರನೇ ಅಲೆ ಎರಡನೇ ಅಲೆಗಿಂತ ಕ್ಲಿಷ್ಟಕರವಾಗಲಿದ್ದು ಜನರು ಎಚ್ಚರಿಕೆಯಿಂದ ಇರುವಂತೆ ಕಿವಿ ಮಾತು ಹೇಳಿದರು.
ರಾಜ್ಯದಲ್ಲಿ ಗ್ರಾಮೀಣ ಭಾಗದ ಹಳ್ಳಿಹಳ್ಳಿಗಳಿಗೂ ಲಸಿಕೆ ನೀಡುತ್ತಿರುವ ಯಾವುದಾದರೂ ತಾಲೂಕು ಇದ್ದರೇ ಅದು ಹೊನ್ನಾಳಿ-ನ್ಯಾಮತಿ ತಾಲೂಕು ಎಂದ ಶಾಸಕರು, ಜನರು ಲಸಿಕೆ ಬಗ್ಗೆ ಅಸಡ್ಡೆ ತೋರದೇ ಲಸಿಕೆ ಹಾಕಿಸಿಕೊಳ್ಳುವಂತೆ ಕರೆ ನೀಡಿದರು.
ಈಗಾಗಲೇ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾಧ್ಯಂತ ಶೇ 60 ರಷ್ಟು ಜನರಿಗೆ ಲಸಿಕೆ ಹಾಕಲಾಗಿದೇ ಎಂದ ಶಾಸಕರು ಎಲ್ಲರಿಗೂ ಲಸಿಕೆ ದೊರೆಯಲಿದೇ ಎಂದರು. ಲಸಿಕೆ ವಿಚಾರದಲ್ಲಿ ನಾನು ಎಂದೂ ಕೂಡ ರಾಜಕೀಯ ಮಾಡಿಲ್ಲಾ, ಚುನಾವಣೆ ಬಂದಾಗ ನಾನು ರಾಜಕೀಯ ಮಾಡುತ್ತೇನೆ ಆದರೇ ಲಸಿಕೆ ವಿಚಾರದಲ್ಲಿ ನಾನು ರಾಜಕಾರಣ ಮಾಡುವುದಿಲ್ಲಾ ಎಂದರು.
ಅವಳಿ ತಾಲೂಕಿನಾಧ್ಯಂತ 12 ಸಾವಿರ ಲಸಿಕೆ :
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾಧ್ಯಂತ 12 ಸಾವಿರ ಜನರಿಗೆ ಲಸಿಕೆ ಹಾಕಲಾಗಿದೆ ಎಂದ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು. ತಾಲೂಕಿನ ಚಿಕ್ಕಬಾಸೂರು, ವಿಜಯಪುರತಾಂಡ,ಉಜ್ಜನಿಪುರ,ಬೀರಗೊಂಡನಹಳ್ಳಿ,ಹಿರೇಬಾಸೂರು,ಹೊಟ್ಯಾಪುರ,ರಾಂಪುರ,ಬುಳ್ಳಾಪುರ,ಐನೂರು,ಸಾಸ್ವೇಹಳ್ಳಿ,ಹೊಸಹಳ್ಳಿ, ಉರುಳೇಹಳ್ಳಿ,ಬಾಗವಾಡಿ,ಹನಗವಾಡಿ,ಲಿಂಗಾಪುರ,ಹೊಸಹಳ್ಳಿ ಮೊದಲನೆ,ಎರಡನೇ ಕ್ಯಾಂಪ್, ಹಳೇಗೊಲ್ಲರಹಳ್ಳಿ,ಬೇಲಿಮಲ್ಲೂರು,ಕೋಟೆಮಲ್ಲೂರು, ಚಿಕ್ಕಗೋಣಿಗೆರೆ,ಹಿರೇಗೋಣಿಗೆರೆ, ಹರಗನಹಳ್ಳಿ,ಕೋಣನತಲೆ,ಹೊನ್ನೂರುಒಡ್ಡರಹಟ್ಟಿ,ಅರಕೆರೆ,ನರಸಗೊಂಡನಹಳ್ಳಿ,ಅರಕೆರೆ ಎಕೆ ಕಾಲೋನಿ,ಮಾಸಡಿ,ಹಳೇದೇವರಹೊನ್ನಾಳಿ ಸೇರಿದಂತೆ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ 12 ಸಾವಿರ ಲಸಿಕೆ ಹಾಕಿಸುವ ಮೂಲಕ ಲಸಿಕೋತ್ಸವ ಆಚರಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ವೇತ, ಮಾಜಿ ಅಧ್ಯಕ್ಷರಾದ ಬಸವನಗೌಡ್ರು ಸೇರಿದಂತೆ ಗ್ರಾಮದ ಮುಖಂಡರಾದ ಮಂಜುನಾಥ್,ವೆಂಕಟೇಶ್,ಶಿವಮೂರ್ತಿ,ನಾಗರಾಜ್ ಸೇರಿದಂತೆ ಆಶಾ ಕಾರ್ಯಕರ್ತರು, ದಾದೀಯರು ಸೇರಿದಂತೆ ಮತ್ತೀತತರಿದ್ದರು.