ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊನ್ನಾಳಿ ವತಿಯಿಂದ ತಾಲೂಕಿನ ಸವಳಂಗ ವಲಯದ ಸೂರಹೊನ್ನೆಯಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮಹಿಳಾ ಗೊಷ್ಠಿ ಕಾರ್ಯಕ್ರಮ ಆಯೋಜಿಸಲಾಯಿತು. ಸ್ವಾವಲಂಭಿ ಕುಟುಂಬ ನಿರ್ವಯಣೆಯಲ್ಲಿ ಮಹಿಳೆಯ ಪಾತ್ರ ಎಂಬ ವಿಷಯದ ಬಗ್ಗೆ ವಿಚಾರಗೊಷ್ಠಿ ವಿಷಯದ ಕೂರಿತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸರಕಾರಿ ಪದವಿ ಕಾಲೆಜಿನ ಉಪನ್ಯಾಸಕಿಯಾದ ಶ್ರೀಮತಿ ಸಾಕಮ್ಮ ಉಪನ್ಯಾಸ ನಿಡಿದರು. ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀ ಹಾಲೆಶ್ ಕಾರ್ಯಕ್ರಮ ಉಧ್ಘಾಟಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಳ್ಳುವ ಕೆಲಸ ಉತ್ತಮ ವಾಗಿವೆ ಮಹಿಳಾ ಸಬಲಿಕರಣ ಮಹತ್ತರ ಉದ್ದೇಶ ಎಂದು ಮಾತನಾಡಿದರು, ಯೋಜನಾಧಿಕಾರಿ ಶ್ರೀ ಬಸವರಾಜ್ ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.ASI ಶ್ರೀ ಚಂದ್ರು, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶ್ರೀ ಮತಿ ರುಕ್ಮಿಣಿ, ಒಕ್ಕೂಟದ ಅಧ್ಯಕ್ಷೆ ಶ್ರೀ ಮತಿ ರೇಣುಕಾ ಭಾಗವಹಿಸಿದ್ದರು. ಮೇಲ್ವಿಚಾರಕ ಮಧೂಸೂದನ ಕಾರ್ಯಕ್ರಮ ನಿರ್ವಹಿಸಿದರು, ಜ್ಞಾನವಿಕಾಸ ಸಮನ್ವಯಧಿಕಾರಿ ಶ್ರೀಮತಿ ಮಂಜುಳಾ ಸ್ವಾಗತಿಸಿದರು, ಮೆಲ್ವಿಚಾರಕ ಗಣಪತಿ ವಂದಿಸಿದರು ಸೇವಾಪ್ರತಿನಿಧಿಗಳು ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.