ಇತ್ತೀಚಿಗೆ ಮೈಸೂರು ನಗರದಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂಬ ಪೊಲೀಸ್ ಮಹಾನಿರ್ದೇಶಕರ ಮಾಹಿತಿ ಹಿನ್ನೆಲೆಯಲ್ಲಿ ಆರೋಪಿಗಳಾಗಿ ಪೊಲೀಸರ ವಶದಲ್ಲಿರುವ ಕಿಡಿಗೇಡಿಗಳನ್ನು ಕೂಡಲೇ ತನಿಖೆ ನಡೆಸಿ ಕಾಮುಕರಿಗೆ ಶಿಕ್ಷೆ ವಿಧಿಸಲು ತ್ವರಿತವಾಗಿ ನ್ಯಾಯಾಲಯಕ್ಕೆ ಸೂಕ್ತ ಮಾಹಿತಿಯನ್ನು ಒದಗಿಸಲು ಮುಂದಾಗಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಅಮಾನವೀಯ ಕೃತ್ಯಗಳನ್ನು ಎಸಗಿರುವ ಕಿಡಿಗೇಡಿಗಳಿಗೆ ಈ ಪ್ರಕರಣದಲ್ಲಿ ಕೊಡುವ ಶಿಕ್ಷೆಯು ಅತ್ಯಂತ ಕಠಿಣ ಸಂದೇಶ ಹಾಗೂ ಮಾದರಿ ತೀರ್ಪು ಆಗಲೂ ಪೊಲೀಸರ ಮಾಹಿತಿ ಸಂಗ್ರಹಣೆ ಅತ್ಯಂತ ಮುಖ್ಯವಾಗಿರುತ್ತದೆ. ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಸೂಕ್ತ ತನಿಖೆ ಮಾಡಿ ಜರೂರಾಗಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಬೇಕು.
ರಾಜ್ಯದ ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ಕಾನೂನು ಸುವ್ಯವಸ್ಥೆ ಕಾಪಾಡಲು ನನ್ನಿಂದ ಸಾಧ್ಯವಿಲ್ಲ ಎಂಬುದನ್ನು ತೋರಿಸಿದ್ದಾರೆ.
ಇನ್ನು ಬಿಜೆಪಿ ಸಂಸದರು ಮತ್ತು ಶಾಸಕರು ಅತ್ಯಾಚಾರ ಪ್ರಕರಣವನ್ನು ಬೇಜವಬ್ದಾರಿ ಹೇಳಿಕೆ ಮತ್ತು ವರ್ತನೆಗಳ ಮೂಲಕ ನಿರ್ಲಕ್ಷ್ಯ ಮನೋಭಾವ ಹೊಂದಿದ್ದಾರೆ. ಬಿಜೆಪಿಯ ಸಂಸದರು ಮತ್ತು ಶಾಸಕರು ರಾಜ್ಯದ ಜನತೆಯ ಕ್ಷಮೆ ಯಾಚಿಸಿ ತೊಲಗಬೇಕು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೇವಲ ಪ್ರಚಾರಕ್ಕಾಗಿ ಇಂತಹ ಸಂದರ್ಭದಲ್ಲಿ ಪ್ರತಿ ಮನೆಗೂ ತೆರಳುತ್ತಿದ್ದರು ಆದರೆ ಇಂತಹ ಘೋರ ಅತ್ಯಾಚಾರವನ್ನು ಖಂಡಿಸಿರುವ ಪ್ರವೃತ್ತಿಯನ್ನೇ ಮರೆತಿದ್ದಾರೆ, ಕೇವಲ ಇವರು ಹೆಣ್ಣು ಮಕ್ಕಳ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯಲು ಮುಂದಾಗುವುದು ಇವರ ಒಂದಂಶದ ಕಾರ್ಯಕ್ರಮವಾಗಿರುತ್ತದೆ.
ರಾಜ್ಯ ಪೊಲೀಸ್ ಇಲಾಖೆ ಈ ಪ್ರಕರಣದಲ್ಲಿ ಗೃಹ ಸಚಿವರ ಸಲಹೆ ಸೂಚನೆಯನ್ನು ಪಡೆಯುವುದಕ್ಕಿಂತ ಮುಖ್ಯಮಂತ್ರಿಗಳು ನೀಡಿರುವ ಸೂಚನೆಗಳನ್ನು ಪಾಲಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತ್ತು.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕವಿಕಾ ಮಾಜಿ ಅಧ್ಯಕ್ಷರಾದ ಎಸ್ ಮನೋಹರ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಜಿ ಜನಾರ್ಧನ್ ಎ ಆನಂದ ಎಲ್ ಜಯಸಿಂಹ ನವೀನ್ ಪುಟ್ಟರಾಜು ಚಂದ್ರು ಉಮೇಶ್ ಆನಂದ್ ಸುಪ್ರಜ್ ಶ್ರೀಮತಿ ಶೀಲಮ್ಮಾ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿದ್ದರು.