ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಗತಿಸಿದರೂ ಕೂಡಾ ಇನ್ನೂ ಭಾರತೀಯ ನಾರಿಯರಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬ ಅನುಮಾನ ಕಾಡುತ್ತಿದೆ ಇತ್ತೀಚಿಗೆ ಸಂಸ್ಕೃತಿ ನಗರಿ ಎಂದೇ ಖ್ಯಾತಿಯಾಗಿರುವ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ನಿಜವಾಗಿಯೂ ಸಮಸ್ತ ಕನ್ನಡಿಗರು ತಲೆ ತಗ್ಗಿಸುವಂತಾಗಿದೆ ದೇಶದಲ್ಲಿ ಪದೇ ಪದೇ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಅನಾಚಾರ ಪ್ರಕರಣಗಳು ದಾಖಲಾಗುತ್ತಿದ್ದರೂ ಕೂಡಾ ಅತ್ಯಾಚಾರಿಗಳಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಏಕೆ ಕಠಿಣ ಶಿಕ್ಷೆಗೆ ಒಳಪಡಿಸುತ್ತಿಲ್ಲ ಎಂಬ ಮಾತುಗಳು ನಾಡಿನ ಆರೂವರೆ ಕೋಟಿ ಜನರಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ. ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದಿರುವ ಮಾನ್ಯ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಈ ಪ್ರಕರಣದ ಸಂಪೂರ್ಣ ಜವಾಬ್ದಾರಿ ಹೊತ್ತು ಕೃತ್ಯದ ಹಿಂದಿರುವ ಜಾಲವನ್ನು ಬೇದಿಸಿ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆ ಜಿಲ್ಲಾಘಟಕ ತೀವ್ರ ಒತ್ತಾಯ ಪಡಿಸುತ್ತದೆ.ಪ್ರಪಂಚದ ಭೂಪಟದಲ್ಲಿ ಕರ್ನಾಟಕ ರಾಜ್ಯ ಸುರಕ್ಷಿತ ರಾಜ್ಯ ಎಂದೆನಿಸಿತ್ತು, ಆದರೆ ರಾಮ,ಗಾಂಧೀಜಿ ಕಂಡ ಕನಸು ನನಸಾಗಿಯೇ ಉಳಿದಿದೆ,ಆದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿವೆ ರಾಜ್ಯ ಮಹಿಳಾ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ರಾಜ್ಯದಿಂದ ಕೇಂದ್ರ ಸಚಿವೆಯಾಗಿ ನೇಮಕಗೊಂಡಿರುವ ಶೋಭಾ ಕರಂದ್ಲಾಜೆಯವರು ಕೃತ್ಯದ ಬಗ್ಗೆ ಬಾಯಿ ಬಿಡದೆ ಕಣ್ಣು ಮುಚ್ಚಿ ಕುಳಿತಿರುವುದು ಬೇಸರ ವಾಗುತ್ತಿದೆ. ಇದೇ ರೀತಿ ಮುಂದು ವರಿದರೆ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ. ಇದೆಲ್ಲದರ ನೈತಿಕ ಹೊಣೆ ಹೊತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು.ಅತ್ಯಾಚಾರಕ್ಕೆ ಕಾರಣರಾದ ಆರೋಪಿಗಳನ್ನು ಬಂಧಿಸಲಾಗಿದ್ದು ಅಂತಹ ಕೃರಿಗಳಿಗೆ ಜೀವಾವಿಧಿ ಶಿಕ್ಷೆ ನೀಡಬೇಕು.ಅತ್ಯಾಚಾರ ಪ್ರಕರಣಗಳು ಮರುಕಳಿಸದಂತೆ ಅಂತ್ಯವಾಗಬೇಕಾದರೆ ಭಾರತೀಯ ಕಾನೂನಿನಲ್ಲಿ ಮಹತ್ತರ ಬದಲಾವಣೆಯ ಅವಶ್ಯಕತೆ ಇದೆ. ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳನ್ನು ಕೇವಲ ಸತ್ಯಾಗ್ರಹ ಪ್ರತಿಭಟನೆಗಳಿಂದ ತಡೆಯಲು ಸಾಧ್ಯವಿಲ್ಲ ತೆಲಂಗಾಣ ಅತ್ಯಾಚಾರ ಪ್ರಕರಣದಲ್ಲಿ ಅಲ್ಲಿನ ಪೊಲೀಸರ ಕ್ರಮವನ್ನು ಕರವೇ ಸ್ವಾಗತಿಸುತ್ತದೆ. ಎನ್ ಕೌಂಟರ್ ಹಾಗೂ ಜೀವಾವಧಿ ಶಿಕ್ಷೆಯ ಮೂಲಕ ಅತ್ಯಾಚಾರಕ್ಕೆ ತೆರೆ ಎಳೆಯಬೇಕು ಎಂದು ಸರ್ಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಬಿ.ಎಂ.ಪಾಟೀಲ ಒತ್ತಾಯ ಪಡಿಸಿದರು..
ಕರವೇ ಒತ್ತಾಯ ಪಡಿಸುತ್ತದೆ.