ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾಧ್ಯಕ್ಷ ನಿಖಿಲ್ ಕೊಂಡಜ್ಜಿ ನೇತೃತ್ವದಲ್ಲಿ ನಗರದ ಜಯದೇವ ವೃತ್ತದಲ್ಲಿ ಮೈಸೂರಿನಲ್ಲಿ ನಡೆದ ಯುವತಿಯ ಅತ್ಯಾಚಾರದ ಕುರಿತು ಸಂಸದ ಜಿ.ಎಂ. ಸಿದ್ದೇಶ್ವರ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ರವರ ಉಡಾಫೆ ಹೇಳಿಕೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ರಾಜ್ಯ, ದೇಶದ ದೈನಂದಿನ ಚಟುವಟಿಕೆ ಮಾಹಿತಿಯೇ ಇಲ್ಲ ಎಂದ ಮೇಲೆ ಸಂಸದರು ಸಾರ್ವಜನಿಕ ಕ್ಷೇತ್ರದಲ್ಲಿ ಇರುವುದು ಎಷ್ಟು ಸೂಕ್ತ ಎಂದರು ಮುಂದೆ ಜಿಲ್ಲೆಯ ಜನರ ಸಮಸ್ಯೆಗಳ ಬಗ್ಗೆ ಪತ್ರಿಕೆಗಳಲ್ಲಿ ಬಂದರೆ ನಾನು ಪತ್ರಿಕೆಯನ್ನು ನೋಡುವುದಿಲ್ಲ ಎಂದು ಸುಮ್ಮನಿರುವಿರ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ರವರನ್ನು ಖಾರವಾಗಿ ಪ್ರಶ್ನಿಸಿದರು, ಸಂಸದರು ಕಳೆದ ಕೆಲವು ತಿಂಗಳುಗಳಿಂದ ಉಡಾಫೆ ಮಾತುಗಳು ಸರಣಿಯನ್ನು ಮುಂದುವರಿಸುತ್ತಾ ಬಂದಿದ್ದು ಮೊದಲು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದರೆ ನಡೆದುಕೊಂಡು ಓಡಾಡಿ ಎಂದರು ನಂತರ ಪೆಟ್ರೋಲ್-ಡೀಸೆಲ್ ಹಾಕಿಸಲು ಹಣವಿಲ್ಲದಿದ್ದರೆ ನನ್ನ ಬಳಿ ಬನ್ನಿ ಎಂದ ಅವರು, ಈಗ ಯುವತಿಯ ಅತ್ಯಾಚಾರದ ಬಗ್ಗೆ ಪ್ರಶ್ನಿಸಿದರೆ ನನಗೆ ಮಾಹಿತಿಯೇ ಇಲ್ಲ ಎನ್ನುತ್ತಿರುವುದುನ್ನು ನೋಡಿದರೆ ಸಂಸದರು ತಾವು ಜನಪ್ರತಿನಿಧಿ ಎಂಬುದನ್ನು ಮರೆತಂತಿದೆ ಎಂದರು.
ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ದಾವಣಗೆರೆ ಯುವ ಕಾಂಗ್ರೆಸ್ ಉಸ್ತುವಾರಿಗಳಾದ ಸವಿತಾ ರಘು ಮಾತನಾಡಿ ಮಹಿಳೆಯರ ಬಗ್ಗೆ ದೊಡ್ಡ ಭಾಷಣ ಮಾಡುವ ಬಿಜೆಪಿ ನಾಯಕರುಗಳು ಅವರ ರಕ್ಷಣೆ ವಿಷಯದಲ್ಲಿ ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ, ಮಹಿಳೆಯರಿಗೆ ರಕ್ಷಣೆ ನೀಡಬೇಕಾದ ಸರ್ಕಾರವೇ ಅವರಿಗೆ ಕಡಿವಾಣ ಹಾಕಲು ಹೊರಟಿರುವುದು ವಿಪರ್ಯಾಸ, ತಪ್ಪಿತಸ್ಥರನ್ನು ಬಂಧಿಸಿ, ಸುಮ್ಮನಿರದೆ ಆದಷ್ಟು ಬೇಗ ಕಠಿಣ ಶಿಕ್ಷೆ ವಿಧಿಸಿ ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ಯುವ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಇನ್ನೋರ್ವ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿಗಳಾದ ಇಲಾಹಿ ಸಿಕಂದರ್ ಮಾತನಾಡಿ ಗೃಹ ಸಚಿವರು ತಮ್ಮ ಖಾತೆಯ ಮಹತ್ವವನ್ನೇ ತಿಳಿದಂತಿಲ್ಲ ರಾಜ್ಯದ ಜನರ ರಕ್ಷಣೆ ನೀಡಬೇಕಾದಂತಹ ಮಹತ್ತರ ಖಾತೆಯಲ್ಲಿ ಇರುವಂತಹ ಅರಗ ಜ್ಞಾನೇಂದ್ರ ರವರು ತಮ್ಮ ಉಡಾಫೆ ಮಾತುಗಳಿಂದ ಗೃಹಖಾತೆಯ ಮಹತ್ವವನ್ನೇ ಕಳೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಯುವ ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರ ಮೋಹಿನುದ್ದಿನ್ ಮಾತನಾಡಿ ದೇಶದಲ್ಲಿ ತಮಗೆ ಬೇಕಾದ ವಿಷಯಗಳ ಬಗ್ಗೆ ಕಾನೂನು ತಿದ್ದುಪಡಿ ಮಾಡುತ್ತಿರುವ ಸರ್ಕಾರ ಅತ್ಯಾಚಾರದ ಬಗ್ಗೆ ಮಾತ್ರ ಮೃದು ದೋರಣೆ ತೋರುತ್ತಿರುವುದು ವಿಷಾದನೀಯ ಎಂದರು.
ಸಾಮಾಜಿಕ ಜಾಲತಾಣ ರಾಜ್ಯ ಕಾರ್ಯದರ್ಶಿ ಕೆ. ಎಲ್.ಹರೀಶ್ ಬಸಾಪುರ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂಜಿತ್, ವಿನಯ್ ಜೋಗಪ್ಪನವರ್, ಇಮ್ರಾನ್ ಖಾನ್, ವಾಜಿದ್, ದಾವಣಗೆರೆ ದಕ್ಷಿಣ ಅಧ್ಯಕ್ಷ ಇರ್ಫಾನ್ ಉಪಾಧ್ಯಕ್ಷೆ ಅಭಿ ಬಾ ಉನ್ನಿಸ, ಬಸವಪಟ್ಟಣ ಬ್ಲಾಕ್ ಅಧ್ಯಕ್ಷ ಕಿರಣ ಓ ಜಿ, ಹರಿಹರ ಬ್ಲಾಕ್ ಅಧ್ಯಕ್ಷ ಐಜ್ ಅಹಮದ್, ಮಲೆಬೆನ್ನೂರು ಬ್ಲಾಕ್ ಅಧ್ಯಕ್ಷ ಜಫರುಲ್ಲ, ಚನ್ನಗಿರಿ ಬ್ಲಾಕ್ ಅಧ್ಯಕ್ಷ ಫ್ಯಾೀಮುದ್ದಿನ್, ಸಂತೆಬೆನ್ನೂರು ಬ್ಲಾಕ್ ಅಧ್ಯಕ್ಷ ನದೀಮ್, ದಾವಣಗೆರೆ ಉತ್ತರ ಪ್ರಧಾನ ಕಾರ್ಯದರ್ಶಿ ನವೀನ್ ನಾಲವಾಡಿ, ಜಬಿ ಉಲ್ಲಾ, ಖ್ವಾಜಾ, ಮೈನುದ್ದಿನ್, ಮೊಹಮದ್ ಬಾಷಾ, ತಿಪ್ಪೇಶ್, ಬಿಲಾಲ್,ವಿನೋದ್, ಸಂತೋಷ್ ಇನ್ನು ಮುಂತಾದವರು ಭಾಗವಹಿಸಿದ್ದರು.