ದಾ-ಹ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿ ಪಡಿಸಲು
ಉದ್ದೇಶಿಸಿರುವ ವಸತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ
ನಿವೇಶನಗಳ ಬೇಡಿಕೆ ಸಮೀಕ್ಷೆಗೆ ನೊಂದಾವಣಿ ಶುಲ್ಕ
ಪಾವತಿಸಿಕೊಳ್ಳಲು ಪ್ರಾಧಿಕಾರದ ವತಿಯಿಂದ ಬೇಡಿಕೆ ಸಮೀಕ್ಷೆ
ದಿನಾಂಕವನ್ನು ಸೆ.04 ರವೆರೆಗೆ ವಿಸ್ತರಿಸಲಾಗಿದೆ.
ಸೆ.02 ರಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ,
ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಯಿ ಹಾಗೂ ಸಚಿವರುಗಳು
ಜಿಲ್ಲೆಗೆ ಆಗಮಿಸುತ್ತಿರುವುದರಿಂದ ಹಾಗೂ ವಿವಿಧ
ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದರಿಂದ ಸೆ.02 ರಂದು
ಜಿಲ್ಲೆಯ ಆರಕ್ಷಕ, ಅಧಿಕಾರಿ/ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ
ಬಂದೂಬಸ್ತು ಮಾಡುವುದರಿಂದ ಪ್ರಾಧಿಕಾರದ ಬೇಡಿಕೆ ಸಮೀಕ್ಷೆ
ನೊಂದಾಣಿ ಶುಲ್ಕ ಪಾವತಿಸಿಕೊಳ್ಳಲು ಅನಾನುಕೂಲವಾಗುವುದರಿಂದ
ಪ್ರಾಧಿಕಾರದಲ್ಲಿ ನೊಂದಾಣಿ ಶುಲ್ಕ ಪಾವತಿಸಿಕೊಳ್ಳಲಾಗುವುದಿಲ್ಲ ಎಂದು
ದಾ-ಹ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ
ಕುಮಾರಸ್ವಾಮಿ.ಬಿ.ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.