ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಚಾಲ್ತಿಯಲ್ಲಿರುವ
ಎಎವೈ, ಪಿಹೆಚ್‍ಹೆಚ್(ಬಿಪಿಎಲ್), ಹಾಗೂ ಎನ್‍ಪಿಹೆಚ್‍ಹೆಚ್(ಎಪಿಎಲ್) ಪಡಿತರ ಚೀಟಿದಾರು ಸೆ.01
ರಿಂದ ಸೆ.10 ರ ವರೆಗೆ ನ್ಯಾಯಬೆಲೆ ಅಂಗಡಿ ಕೇಂದ್ರಗಳಲ್ಲಿ ಇ-ಕೆವೈಸಿ
ಮಾಡಿಸಿಕೊಳ್ಳಬಹುದು.
 ಪಡಿತರ ಚೀಟಿದಾರರ ಹೆಬ್ಬೆರಳು ಗುರುತು ಪಡೆದು,
ಮರುನೊಂದಣಿ ಮಾಡುವ ಕಾರ್ಯವು ನಡೆಯುತ್ತಿದ್ದು, ಈ
ವರೆಗೂ ಇ-ಕೆವೈಸಿ ಮಾಡಿಸಿಕೊಳ್ಳದೆ ಇರುವ ಪಡಿತರ ಚೀಟಿಯಲ್ಲಿನ
ಪ್ರತಿಯೊಬ್ಬ ಸದಸ್ಯರು, ಸಹ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿ
ಕೇಂದ್ರಕ್ಕೆ ಹೋಗಿ ಹೆಬ್ಬೆರಳಿನ ಗುರುತು ನೀಡಿ, ಉಚಿತವಾಗಿ ಇ-ಕೆವೈಸಿ,
ಮಾಡಿಸಿಕೊಳ್ಳಬಹುದು ಇ-ಕೆವೈಸಿ ಮಾಡಿಸಿಕೊಳ್ಳದ ಪಡಿತರ ಚೀಟಿಗಳಿಗೆ
ಮುಂದಿನ ದಿನಗಳಲ್ಲಿ ಪಡಿತರ ಕಡಿತವಾಗುವ ಸಾಧ್ಯತೆಯಿರುತ್ತದೆ
ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ
ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *