ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ವಿತರಿಸುವ ಉಚಿತ ಹಾಗೂ ರಿಯಾಯಿತಿ
ಪಾಸುಗಳನ್ನು ಪಡೆಯಲು ಸಕಾಲ ಸೇವಾಸಿಂಧು ಆನ್‍ಲೈನ್
ವ್ಯವಸ್ಥೆಯಡಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿದ್ಯಾರ್ಥಿಗಳ ಉಚಿತ, ರಿಯಾಯಿತಿ
ಬಸ್‍ಪಾಸ್‍ಗಳನ್ನು ಸೇವಾಸಿಂಧು ಯೋಜನೆಯಡಿ ಆನ್‍ಲೈನ್ ಪೋರ್ಟಲ್‍ನಲ್ಲಿ
ವಿದ್ಯಾರ್ಥಿ ಪಾಸ್‍ಗಳನ್ನು ವಿತರಿಸಲು ಕ್ರಮ ವಹಿಸಲಾಗಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ಸೇವಾಸಿಂಧು ತಂತ್ರಾಂಶವನ್ನು
ಇನ್ನಷ್ಟು ಸರಳೀಕರಿಸಿ ಇಡಿಸಿಎಸ್ ಇಲಾಖೆಯು (ವಿದ್ಯುನ್ಮಾನ ನಾಗರೀಕ
ಸೇವಾವಿತರಣಾ ನಿರ್ದೇಶನಾಲಯ) ವಿದ್ಯಾರ್ಥಿಗಳಿಗೆ ಉಚಿತ ಹಾಗೂ ರಿಯಾಯಿತಿ
ಬಸ್ ಪಾಸ್‍ಗಳನ್ನು ಸೇವಾಸಿಂಧು ಪೋರ್ಟಲ್‍ನಲ್ಲಿ ವಿತರಿಸಲು
ತಂತ್ರಾಂಶವನ್ನು ಪುನರ್ ಅಭಿವೃದ್ಧಿ ಪಡಿಸಲಾಗಿರುತ್ತದೆ.
ವಿದ್ಯಾರ್ಥಿಗಳಿಗೆ ಆನ್‍ಲೈನ್ ಮುಖಾಂತರ ಬಸ್‍ಪಾಸ್‍ಗೆ ಅರ್ಜಿ ಸಲ್ಲಿಸಲು ಈ
ದಿನದಿಂದಲೆ ಅವಕಾಶ ಕಲ್ಪಿಸಲಾಗಿದ್ದು, ಶಾಲಾ, ಕಾಲೇಜು ವಿದ್ಯಾರ್ಥಿಗಳು
ಇದರ ಸದುಪಯೋಗ ಪಡಿಸಿಕೊಂಡು ಉಚಿತ, ರಿಯಾಯಿತಿ
ಬಸ್‍ಪಾಸ್‍ಗಳನ್ನು ಪಡೆಯಬಹುದು.
ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವಾಗ ಸಂಬಂಧಪಟ್ಟ ದಾಖಲೆಗಳನ್ನು
ಅಪ್‍ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ.
ಫಲಾನುಭವಿಗಳು ಆನ್‍ಲೈನ್ ಮುಖಾಂತರ ದಾಖಲಾತಿಗಳನ್ನು
ಅಪ್‍ಲೋಡ್ ಮಾಡಿದ್ದಾಗ್ಯೂ, ಭೌತಿಕವಾಗಿ ಬಸ್‍ಪಾಸ್‍ಗಳನ್ನು ಪಡೆಯಲು
ಬಂದಾಗ ಅಗತ್ಯ ದಾಖಲಾತಿಗಳು ಮತ್ತು ಮೂಲ ದಾಖಲೆಗಳು ಹಾಗೂ
ಜೆರಾಕ್ಸ್ ಪ್ರತಿಯನ್ನು ಹಾಜರು ಪಡಿಸಿ ಪಾಸ್‍ಗಳನ್ನು ಪಡೆಯುವುದು
ಎಂದು ಕ.ರಾ.ರ.ಸಾ.ನಿಗಮ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.