ಜಿಲ್ಲೆಯಾದ್ಯಂತ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ
ಕಾರ್ಯಕ್ರಮದಡಿ ಜಾನುವಾರುಗಳಲ್ಲಿ ಕಂದುರೋಗ ನಿಯಂತ್ರಣ
ಕಾರ್ಯಕ್ರಮವನ್ನು ಸೆ.6 ರಿಂದ ಸೆ.15 ರ ವರೆಗೆ
ಹಮ್ಮಿಕೊಳ್ಳಲಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ 4 ರಿಂದ 8 ತಿಂಗಳವರೆಗಿನ ಹೆಣ್ಣು ಕರುಗಳಿಗೆ
ಉಚಿತವಾಗಿ ಲಸಿಕೆ ಹಾಕಲಾಗುತ್ತದೆ. ಲಸಿಕೆದಾರರು ತಮ್ಮ ಮನೆ ಬಾಗಿಲಲ್ಲೇ
ತಮ್ಮ ಕರುಗಳಿಗೆ ಕಿವಿಯೋಲೆ ಅಳವಡಿಸಿ ನೋಂದಾಣಿ ಮಾಡಿಕೊಂಡು
ಲಸಿಕೆ ಹಾಕುತ್ತಾರೆ. ಎಲ್ಲಾ ರೈತ ಬಾಂಧವರು ಮತ್ತು ಪಶು ಪಾಲಕರು
ಈ ಅವಕಾಶ ಬಳಸಿಕೊಂಡು ತಮ್ಮಲ್ಲಿರುವ ಅರ್ಹ ಹೆಣ್ಣು ಕರುಗಳಿಗೆ ಲಸಿಕೆ
ಹಾಕಿಸಿ ಕಂದುರೋಗ ನಿಯಂತ್ರಿಸುವಲ್ಲಿ ಸಹಕರಿಸಲು ತಿಳಿಸಿದ್ದು, ಕಂದು
ರೋಗವು ಪ್ರಾಣಿ ಜನ್ಯ ರೋಗವಾಗಿದ್ದು, ರಾಸುಗಳಲ್ಲಿ ಈ ರೋಗದಿಂದ
ಗರ್ಭಿಣಿ ರಾಸುಗಳು 6 ತಿಂಗಳ ನಂತರ ಕಂದು ಹಾಕಬಹುದು.
ಅವುಗಳ ಗರ್ಭ ಸ್ರಾವದಿಂದ ಮತ್ತು ಹಸಿ ಹಾಲನ್ನು ಹಾಗೇ
ಉಪಯೋಗಿಸುವುದರಿಂದ ಮನುಷ್ಯರಿಗೂ ಹರಡಬಹುದು.
ಮನ್ಯುಷರಲ್ಲಿ ಈ ರೋಗ ಬಂದರೆ ಸಂತಾನೋತ್ಪತ್ತಿ ಮಾಡುವ
ಶಕ್ತಿ ಕಳೆದುಕೊಳ್ಳುತ್ತಾರೆ. ಕಾರಣ ಈ ಕಾರ್ಯಕ್ರಮದ
ಸದುಪಯೋಗ ಪಡೆದುಕೊಂಡು ಕರುಗಳಿಗೆ ಲಸಿಕೆ ಹಾಕಿಸಿ
ಸಂಭವಿಸಬಹುದಾದ ಆರ್ಥಿಕ ನಷ್ಟ ತಪ್ಪಿಸಿ ಮತ್ತು ಮುಖ್ಯವಾಗಿ ನಿಮ್ಮನ್ನು
ನೀವು ರಕ್ಷಿಸಿಕೊಳ್ಳಿ ಎಂದು ಪಶುಪಾಲನಾ ಹಾಗೂ ಪಶುವೈದ್ಯ ಸೇವಾ
ಇಲಾಖೆಯ ಉಪನಿರ್ದೇಶರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.