ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ
ಪ.ಜಾತಿ ಮತ್ತು ಪ.ಪಂಗಡದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ
ವಿದ್ಯಾರ್ಥಿವೇತನ, ವಿದ್ಯಾರ್ಥಿನಿಲಯದಲ್ಲಿ ಪ್ರವೇಶ, ಪೋತ್ಸಾಹಧನ ಹಾಗೂ
ಎಸ್‍ಸಿಎಸ್‍ಪಿ/ಟಿಎಸ್‍ಪಿ ರ ಅಡಿ ಪ.ಜಾತಿ ಮತ್ತು ಪರಿಶಿಷ್ಟ ಜಾತಿ ಪ.ಪಂಗಡದ
ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ
ಇಲಾಖೆಗಳ ಮೂಲಕ ಹಲವು ಶೈಕ್ಷಣಿಕ ಅಭಿವೃದ್ಧಿ
ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಸರ್ಕಾರದಿಂದ ಅನುಷ್ಠಾನ ಮಾಡುವ ವಿವಿಧ ಯೋಜನೆಗಳ ಬಗ್ಗೆ
ಪ.ಜಾತಿ, ಪ.ಪಂಗಡದ ವಿದ್ಯಾರ್ಥಿಗಳೊಂದಿಗೆ ಸಂವಾದ
ಕಾರ್ಯಕ್ರಮವನ್ನು ಆನ್‍ಲೈನ್ ಮೂಲಕ ಸೆ.14 ರಂದು ಸಂಜೆ 4.30 ರಿಂದ
7.30 ರವರೆಗೆ ಏರ್ಪಡಿಸಿ ವಿದ್ಯಾರ್ಥಿಗಳ ಸಲಹೆ, ಅಭಿಪ್ರಾಯ ಮತ್ತು
ಸಮಸ್ಯೆಗಳನ್ನು ಪಡೆಯಲು ತೀರ್ಮಾನಿಸಲಾಗಿರುತ್ತದೆ. ಸಂವಾದದಲ್ಲಿ
ಭಾಗವಹಿಸುವ
ವಿದ್ಯಾರ್ಥಿಗಳು ಐiಟಿಞ: hಣಣಠಿ://164.100.133.163/sಚಿmvಚಿಜಚಿ/esಚಿmvಚಿಜಚಿಖegisಣಡಿಚಿಣioಟಿ.ಚಿsಠಿx  ವ
ುೂಲಕ ನೋಂದಣಿ ಮಾಡಿಕೊಳ್ಳಬಹುದು. ವಿದ್ಯಾರ್ಥಿನಿಲಯದಲ್ಲಿ ಪ್ರವೇಶ
ನೊಂದಾಯಿಸಿಕೊಳ್ಳಲು ಸೆ.07 ಕೊನೆಯ ದಿನವಾಗಿದ್ದು, ಪರಿಶಿಷ್ಟ ಜಾತಿ,
ಪರಿಶಿಷ್ಟವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು 18-32 ವರ್ಷಗಳ
ವಯೋಮಾನದವರಾಗಿದ್ದು, ಹಾಲಿ ವಿದ್ಯಾಭ್ಯಾಸ ಮಾಡುತ್ತಿರುವ
ವಿದ್ಯಾರ್ಥಿಗಳಾಗಿರಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ
ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *