ಸೆ.02 ರಂದು ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಗೃಹ
ಸಚಿವರು ಜಿಲ್ಲಾ ಪ್ರವಾಸ ಕೈಗೊಳ್ಳಲಿರುವುದರಿಂದ ಅಧಿಕಾರಿಗಳು,
ನೌಕರರು ಯಾವುದೇ ರಜೆಯ ಮೇಲೆ ತೆರಳಬಾರದು ಎಂದು
ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ
ಸನ್ಮಾನ್ಯರ ಜಿಲ್ಲಾ ಪ್ರವಾಸ ಮುಗಿಯುವವರೆಗೂ ಯಾವುದೇ
ಅಧಿಕಾರಿಗಳು, ನೌಕಕರು ರಜೆಯ ಮೇಲೆ ತೆರಳಬಾರದು. ಹಾಗೂ
ಅಧಿಕಾರಿ ಮತ್ತು ನೌಕಕರು ಕಚೇರಿಯ ಕೆಲಸದ ಸಮಯಕ್ಕೆ
ಸರಿಯಾಗಿ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕು. ಅಧಿಕಾರಿಗಳು
ಕೇಂದ್ರಸ್ಥಾನದಲ್ಲಿದ್ದು, ಮೇಲಾಧಿಕಾರಿಗಳು ತಿಳಿಸುವ ಯಾವುದೇ
ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು ತಪ್ಪಿದಲ್ಲಿ ಮುಂದಿನ ಕ್ರಮ
ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *