ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ
ಬಸವರಾಜ ಸೆಪ್ಟೆಂಬರ್ 01 ಮತ್ತು 2 ರಂದು ತಾತ್ಕಾಲಿಕ ಜಿಲ್ಲಾ ಪ್ರವಾಸ
ಕೈಗೊಳ್ಳಲಿದ್ದಾರೆ.
ಸೆ 01 ರ ಬುಧವಾರ ಬೆಳಿಗ್ಗೆ ಬೆಳಗಾವಿಯಿಂದ ಹೊರಟು 9.30 ಕ್ಕೆ
ದಾವಣಗೆರೆ ಪ್ರವಾಸಿ ಮಂದಿರಕ್ಕೆ ಆಗಮಿಸುವರು ನಂತರ 10
ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದಾವಣಗೆರೆ ಜಿಲ್ಲೆಯ
ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು ಹಾಗೂ
ವಾಸ್ತವ್ಯ ಮಾಡುವರು.
ಸೆ.02 ರ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30
ರವರೆಗೆ ಜಿಲ್ಲೆಗೆ ಸಂಬಂಧಿಸಿದ ವಿಷಯಗಳ ಕುರಿತು ಜಿಲ್ಲೆಯ
ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ
ನಡೆಸುವರು. 2.50ಕ್ಕೆ ಜಿ.ಎಂ.ಐ.ಟಿ. ಹೆಲಿಪ್ಯಾಡ್ ನಿಂದ ಕೇಂದ್ರ ಗೃಹ
ಸಚಿವರನ್ನು ಬರಮಾಡಿಕೊಳ್ಳುವರು. ಮಧ್ಯಾಹ್ನ 3.05 ಕ್ಕೆ ಗಾಂಧಿ
ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವರು
ಮತ್ತು ಮುಖ್ಯಮಂತ್ರಿಗಳೊಂದಿಗೆ ಭಾಗವಹಿಸುವರು.
ಮಧ್ಯಾಹ್ನ 3.25 ಕ್ಕೆ ಗಾಂಧಿ ಭವನದಿಂದ ನಿರ್ಗಮಿಸಿ ಗೃಹ ಸಚಿವರು
ಮತ್ತು ಮುಖ್ಯಮಂತ್ರಿಗಳೊಂದಿಗೆ ಕೊಂಡಜ್ಜಿ ಬಸಪ್ಪ ಸ್ಮಾರಕಕ್ಕೆ
ಭೇಟಿ ನೀಡಿ ಗೌರವಾರ್ಪಣೆ ಸಲ್ಲಿಸುವರು. 3.45 ಕ್ಕೆ ಕೊಂಡಜ್ಜಿ ತಾಲ್ಲೂಕಿನ
ಪೋಲಿಸ್ ಪಬ್ಲಿಕ್ ಸ್ಕೂಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.
ಸಂಜೆ 4.15 ಕ್ಕೆ ಕೊಂಡಜ್ಜಿಯಿಂದ ನಿರ್ಗಮಿಸಿ 4.35 ಕ್ಕೆ ಜಿ.ಎಂ.ಐ.ಟಿ ಕೇಂದ್ರ
ಗ್ರಂಥಾಲಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ 4.45
ರಿಂದ 5 ಗಂಟೆಯವರೆಗೆ ಜಿ.ಎಂ.ಐ.ಟಿ ಗೆಸ್ಟ್ ಹೌಸ್ ನಲ್ಲಿ ಕಾಯ್ದಿರಿಸಿ 5 ಗಂಟೆಗೆ
ದಾವಣಗೆರೆಯಿಂದ ನಿರ್ಗಮಿಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ
ತಿಳಿಸಿದ್ದಾರೆ.